ಸಾರಾಂಶ
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಿಂದ 4 ಕಿಮೀ ದೂರದಲ್ಲಿರುವ ಅಕ್ಕಮ್ಮ ಬಸಪ್ಪ ಕಟಿಗ್ಗಾರ ಅವರ ಜಮೀನಿನಲ್ಲಿ ಪ್ರಾಚ್ಯಾವಶೇಷಗಳಿಂದ ನಿರ್ಮಾಣವಾಗಿರುವ ಹೊಳಗಟ್ಟಿಯನ್ನು ಭದ್ರಪಡಿಸಿ ಸ್ಮಾರಕವನ್ನಾಗಿ ರೂಪಿಸಬೇಕೆಂದು ಇಲ್ಲಿಯ ರೈತರು ಒತ್ತಾಯಿಸಿದ್ದಾರೆ.
ಈ ಕುರಿತು ಹೊಳಗಟ್ಟಿ ಜಮೀನಿಗೆ ಭೇಟಿ ನೀಡಿದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿರುವ ರೈತರು, ಲಕ್ಕುಂಡಿಯ ಗತವೈಭವ ಮರು ಸೃಷ್ಠಿಸಲು ಗ್ರಾಮದ ಮನೆ ಮನೆ, ತಿಪ್ಪೆ, ಹಿತ್ತಲು, ಹೊಲದ ಬದು, ಕೆರೆ, ಹೊಳಗಟ್ಟಿಗಳಲ್ಲಿ ಜೋಡಿಸಲಾಗಿರುವ ಪ್ರಾಚ್ಯಾವಶೇಷ ಸಂಗ್ರಹ ಮಾಡುತ್ತಿರುವುದು ಸಂತಸ ವಿಷಯವಾಗಿದೆ.ಅದರಂತೆ ಲಕ್ಕುಂಡಿ ದಕ್ಷಿಣ ಭಾಗದ ಜಮೀನು ಸರ್ವೇ ನಂ.216 ರಲ್ಲಿ ಇಸ್ಸಾ 1 ರಲ್ಲಿ ಅಕ್ಕಮ್ಮ ಬಸಪ್ಪ ಕಟಿಗ್ಗಾರ ಜಮೀನಿನಲ್ಲಿ ದೊಡ್ಡ ಪ್ರಮಾಣದ ಹೊಳಗಟ್ಟಿ ಇರುವುದು. ಈ ಹೊಳಗಟ್ಟಿಗೆ ಹಿಂದಿನ ಹಿರಿಯರು ಪ್ರಾಚ್ಯ ವಸ್ತುಗಳ ಕಲ್ಲುಗಳಿಂದ ನಿರ್ಮಾಣ ಮಾಡಿದ್ದು ತಮಗೆಲ್ಲ ಕಂಡು ಬಂದಿದೆ. ಈ ಪ್ರಾಚ್ಯಾವಶೇಷಗಳ ಸ್ಮಾರಕ ತೆರವುಗೊಳಿಸಿ ಸಂಗ್ರಹ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಈ ಹೊಳಗಟ್ಟಿಗೆ ನೂರಾರು ಹೆಕ್ಟೆರ್ ಜಮೀನುಗಳಿಂದ ಮಳೆಯ ನೀರು ಹರಿದು ಬರುತ್ತದೆ. ಈ ನೀರು ಬರುವುದರಿಂದ ನಮ್ಮೆಲ್ಲರ ಜಮೀನದಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಈ ಹೊಳಗಟ್ಟಿ ಸರಿಪಡಿಸಲು ಸಾಕಷ್ಟು ಶ್ರಮ ಹಾಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಈ ಹೊಳಗಟ್ಟಿಯಿಂದ ಹರಿದು ಹೋಗುವ ನೀರು ಜಾಡು ಹಳ್ಳವಾಗಿ ಸೃಷ್ಠಿಯಾಗಿ ಕೂಡಲ ಸಂಗಮ ತಲುಪುತ್ತದೆ.
ಇದರ ಮೂಲ ನೆಲೆ ಅಕ್ಕಮ್ಮ ಕಟಿಗ್ಗಾರ ಜಮೀನಾಗಿದೆ. ಆದ್ದರಿಂದ ನೂರಾರು ಹೆಕ್ಟೆರ್ ಜಮೀನಿನಿಂದ ಹರಿದು ಬರುತ್ತಿರುವ ನೀರು ಈ ಜಮೀನು ಮೂಲಕ ಹರಿದು ಸಾಗುತ್ತಿರುವುದರಿಂದ ಇದಕ್ಕೆ ಕೂಡು ಜಲ ಸಂಗಮ ಎಂಬ ನಾಮಕರಣ ಮಾಡಿ ಇದನ್ನು ಒಂದು ಸ್ಮಾರಕವನ್ನಾಗಿ ಪ್ರಸಿದ್ಧಿ ಮಾಡಬೇಕು. ಆದ್ದರಿಂದ ಈ ಹೊಳಗಟ್ಟಿಗೆ ಜೋಡಿಸಲಾಗಿರುವ ಪ್ರಾಚ್ಯಾವಶೇಷ ತೆರೆವುಗೊಳಿಸದೇ ಇನ್ನಷ್ಟು ಭದ್ರಪಡಿಸಿ ಸುಂದರ ತಾಣವನ್ನಾಗಿ ಮಾಡಿ ಲಕ್ಕುಂಡಿ ಆಗಮಿಸುವ ಪ್ರವಾಸಿಗರಿಗೆ ವೀಕ್ಷೀಸುವಂತಾಗಲು ಸರ್ಕಾರ ಮುಂದಾಗಬೇಕೆಂದು ಗ್ರಾಪಂ ಮಾಜಿ ಸದಸ್ಯ ರವಿರಾಜ ಕಟಿಗ್ಗಾರ, ಮಂಜುನಾಥ ಕಟಿಗ್ಗಾರ, ಮಲ್ಲಪ್ಪ ಮಂಗಳೂರು, ಯಲ್ಲಪ್ಪ ಮುಳ್ಳಾಳ, ಬಸವಣ್ಣಿಪ್ಪ ಶೇಡದ, ಮಹಾಂತೇಶಗೌಡ ಪಾಟೀಲ, ಮುಜರಪ್ಪ ಜವಳಬೆಂಚಿ, ಈರಪ್ಪ ಸಾಲಮನಿ, ರಾಮಣ್ಣ ಕಲಾಲ, ವೀರಪ್ಪ ಗರ್ಜಪ್ಪನವರ, ಪ್ರಕಾಶ ಹಣವಾಳ, ಹುಲಗಪ್ಪ ಹಳ್ಳಿಕೇರಿ, ಫಾಲಾಕ್ಷಪ್ಪ ಹಣವಾಳ, ವೀರಯ್ಯ ಗಂಧದ, ಮಹಾಂತೇಶ ಕಮತರ, ಕೊಟ್ರಪ್ಪ ಬಳಿಗೇರ, ಈರಪ್ಪ ಕಮತರ, ಬಸಪ್ಪ ತಿಮ್ಮಾಪೂರ, ಮುತ್ತಪ್ಪ ಬಟ್ಟೂರ, ಮಲ್ಲಪ್ಪ ಗರ್ಜಪ್ಪನವರ, ನಿಂಗಪ್ಪ ಮಡಿವಾಳರ, ನೀಲಮ್ಮ ವಡ್ಡರ, ಕಲ್ಲಪ್ಪ ಅಂಬಕ್ಕಿ ಮುಂತಾದವರು ಆಗ್ರಹಿಸಿದ್ದಾರೆ.