ಮಾವಿನಕೊಪ್ಪಕ್ಕೆ ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹ

| Published : Dec 16 2023, 02:00 AM IST

ಸಾರಾಂಶ

ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಶುಕ್ರವಾರ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ತಾಲೂಕಿನ ಮಾವಿನಕೊಪ್ಪ ಗ್ರಾಮಕ್ಕೆ ಬಸ್ ಒದಗಿಸಲು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಇಲ್ಲಿಯ ಹಳೆಯ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಕೊನೆಯ ಹಳ್ಳಿಯಾದ ಮಾವಿನಕೊಪ್ಪ ಗ್ರಾಮಕ್ಕೆ ಬಸ್‌ ಸೌಲಭ್ಯವಿಲ್ಲದೆ ಜನತೆ ಹಾಗೂ ಮುಖ್ಯವಾಗಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಬಡ ಜನರೇ ಹೆಚ್ಚಿರುವ ಈ ಹಳ್ಳಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಪೋಷಕರು ಕೂಲಿ ನಾಲೆ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಮಕ್ಕಳು ಶಿಕ್ಷಣಕ್ಕಾಗಿ ದೂರದ ಊರಾದ ಹಳಿಯಾಳ ಅಥವಾ ದಾರವಾಡಕ್ಕೆ ಬರಬೇಕಿದೆ. ಇದಕ್ಕಾಗಿ ಸರ್ಕಾರಿ ಬಸ್ ಬಸ್ ಮೇಲೆ ಅವಲಂಭಿತವಾಗಿದ್ದಾರೆ.

ಮುಂಚೆ ಧಾರವಾಡ ಹಳಿಯಾಳಕ್ಕೆ ಹೋಗುವ ಬಸ್ಸು ಮಾವಿನ ಕೊಪ್ಪ ಗ್ರಾಮಕ್ಕೆ ಬಸ್ ನಿಲುಗಡೆಯಾಗುತ್ತಿತ್ತು. ಇತ್ತೀಚೆಗೆ ಬಸ್ ನಿಲ್ಲದಿರುವ ಕಾರಣ ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ. ಮಾವಿನಕೊಪ್ಪ ಗ್ರಾಮದಿಂದ ಮುಖ್ಯ ರಸ್ತೆಗೆ ಬರಲು ಎರಡು ಕಿಲೋಮೀಟರ್ ನಡೆದು ಬರುವ ಚಿಕ್ಕ ಮಕ್ಕಳು ಬಸ್ಸಿಲ್ಲದೆ ಶಾಲೆಗೆ ಹೋಗಲು ಆಗುತ್ತಿಲ್ಲ. ಹಾಗೆಯೇ ದುಡಿಮೆಗಾಗಿ ಬೇರೆ ಊರಿಗೆ ಹೋಗುವ ರೈತ, ಕೃಷಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಈ ಕೂಡಲೇ ಮಾವಿನಕಾಯಿ ಗ್ರಾಮಕ್ಕೆ ಸೌಲಭ್ಯವನ್ನು ಒದಗಿಸಬೇಕೆಂದು ಆಗ್ರಹಿಸಲಾಯಿತು.

ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಉಪಾಧ್ಯಕ್ಷರಾದ ಹನುಮೇಶ ಹುಡೇದ ಗ್ರಾಮದ ಸದ್ಯರಾದ ಕೃಷ್ಣ ಕದಂ, ರಸೂಲ್ ನಧಾಪ್, ಸಾವಿತ್ರಿ. ಪಕ್ಕೀರವ್ವ ಕದಂ, ಬಸಪ್ಪ ಇದ್ದರು.