ಬಳ್ಳಾರಿ: ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ತಲಾ 100 ಕೆಂಪು ಬಸ್, 20 ಎಸಿ ಬಸ್‍ಗಳನ್ನು ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪರಿಷತ್‌ನಲ್ಲಿ ಮಾತನಾಡಿದ ಅವರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಟ್ಟಣ - ನಗರ ಪ್ರದೇಶಗಳಿಗೆ ನಿತ್ಯ ಬಂದು ಹೋಗಲು ಸಾಕಷ್ಟು ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಕಾಳಜಿಗಾಗಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಅನುಕೂಲಕ್ಕಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ತಲಾ 100 ಕೆಂಪು ಬಸ್‍ಗಳನ್ನು ನೀಡಿದಲ್ಲಿ ಸಾಕಷ್ಟು ಅನುಕೂಲ ಆಗಲಿದೆ. ಇಲ್ಲವಾದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ನಿತ್ಯ ಬಸ್‍ಗಳಲ್ಲಿ ಪ್ರಯಾಣಿಸುವುದು ಕಷ್ಟವಾಗುತ್ತಿದೆ ಎಂದು ವಿವರಿಸಿದರು.ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಲ್ಯಾಣ ಕರ್ನಾಟಕಕ್ಕೆ ಮಾರ್ಚ್ 2026ರ ನಂತರ 56 ವಿವಿಧ ಪ್ರೀಮಿಯಂ ಬಸ್‍ಗಳ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ 2025-26ರಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 400 ಬಸ್‍ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. 2023-24ರ ಪೂರ್ವದ ನಾಲ್ಕು ವರ್ಷ ಸರ್ಕಾರ ಹೊಸ ಬಸ್‍ಗಳನ್ನು ಖರೀದಿಸಿಲ್ಲ. 2016ರಲ್ಲಿ ನಾನು ಸಾರಿಗೆ ಇಲಾಖೆಯ ಸಚಿವನಾಗಿದ್ದಾಗ ನಡೆದಿದ್ದ ನೇಮಕಾತಿ, ಈಗ ನಡೆದಿದೆ. ಸತತವಾಗಿ ನಾಲ್ಕು ವರ್ಷಗಳ ಕಾಲ ಬಸ್‍ಗಳ ಖರೀದಿ ಮಾಡದ ಕಾರಣ ಬಸ್‍ಗಳ ಸ್ಥಿತಿ ಹದಗೆಟ್ಟಿದೆ. ಮುಂದಿನ ದಿನಗಳಲ್ಲಿ ಖರೀದಿ ಮಾಡುತ್ತಿರುವ ಬಸ್‍ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿ - ವಿಜಯನಗರ ಜಿಲ್ಲೆಗಳಿಗೆ ನೀಡಲಾಗುತ್ತದೆ ಎಂದರು.ಕೇಂದ್ರ ಸರ್ಕಾರದ ಷರತ್ತು - ನಿಯಮಳಿಗೆ ಬದ್ಧವಾಗಿ 15 ವರ್ಷ ಹಳೆಯ ಬಸ್‍ಗಳನ್ನು ತಾಂತ್ರಿಕವಾಗಿ ನವೀಕರಿಸಿ ರಸ್ತೆಯಲ್ಲಿ ಓಡಾಡಿಸಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 26 ಸಾವಿರ ಬಸ್‍ಗಳು ಸಂಚರಿಸುತ್ತಿವೆ. ಬಳ್ಳಾರಿ - ವಿಜಯನಗರ ಜಿಲ್ಲೆಯ ಬಸ್‍ಗಳ ತಾಂತ್ರಿಕ ವ್ಯವಸ್ಥೆಗೆ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ವೈ.ಎಂ. ಸತೀಶ್ ಮಾತನಾಡಿ, ವಿಶೇಷ ಚೇತನರ ಕುರಿತು ಬಜೆಟ್‌ನಲ್ಲಿ ವಿಷಯ ಪ್ರಸ್ತಾಪಿಸದೇ ನಾವೆಲ್ಲರೂ ಅವರನ್ನು ಕೀಳಾಗಿ ನೋಡುತ್ತಿದ್ದೇವೆ. ಈ ವಿಚಾರದಲ್ಲಿ ನಾವೆಲ್ಲರೂ ಮಾನವೀಯತೆಯನ್ನು ಕಳೆದುಕೊಂಡಿದ್ದೇವೆ. ವಿಶೇಷ ಚೇತನರಿಗೆ ಹೆಚ್ಚಿನ ಅನುದಾನ ನೀಡಿ, ಅವರ ಜೀವನಶೈಲಿಯನ್ನು ಸುಧಾರಿಸಲು ನಾವೆಲ್ಲರೂ ಪ್ರಯತ್ನಿಸೋಣ. ಈ ನೆರವನ್ನೂ ನಾವು ಮಾಡದಿದ್ದಲ್ಲಿ, ಇಲ್ಲಿರಲು ನಾವೆಲ್ಲರೂ ಅರ್ಹರಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದರು.ವಿಶೇಷಚೇತನರ ಹಿತಾಸಕ್ತಿಗಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಈ ಪ್ರಕರಣದ ವಿಚಾರಣೆಗೆ ಪ್ರಾಮಾಣಿಕವಾಗಿ ಹಾಜರಾಗಿರಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.