ಸಾರಾಂಶ
ಸಂಡೂರು: ಪುರಸಭೆಯಾಗಿ ಉನ್ನತೀಕರಿಸಲಾದ ಕುರೆಕುಪ್ಪ ಗ್ರಾಮದಲ್ಲಿ ವಸತಿ ರಹಿತರಿಗೆ ವಸತಿ ನಿವೇಶನ, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣಕಾರರ ಫೆಡರೇಷನ್ ಗ್ರಾಮ ಘಟಕದ ಮುಖಂಡರು ಗುರುವಾರ ಪುರಸಭೆ ಅಧ್ಯಕ್ಷ ಕಲ್ಲಗುಡ್ಡೆಪ್ಪಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಫೆಡರೇಷನ್ ತಾಲೂಕು ಘಟಕದ ಅಧ್ಯಕ್ಷ ವಿ.ದೇವಣ್ಣ, ಗ್ರಾಮದಲ್ಲಿ ರೈತರಿಗೆ ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಪದವಿಪೂರ್ವ ಹಾಗೂ ಪದವಿ ಕಾಲೇಜನ್ನು ಆರಂಭಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಜನಸಂಖೆಗೆ ಅನುಗುಣವಾಗಿ ಹೆಚ್ಚಿಸಬೇಕು. ಪೌರ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಿ, ಅವರ ಸೇವೆಯನ್ನು ಖಾಯಂಗೊಳಿಸಬೇಕು. ಚರಂಡಿಯಲ್ಲಿನ ಹೂಳನ್ನು ಆಗಿಂದಾಗ್ಗೆ ತೆಗೆಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದರು.
ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಜಿ.ಪಂಪನಗೌಡ, ಫೆಡರೇಷನ್ ಗ್ರಾಮ ಘಟಕದ ಅಧ್ಯಕ್ಷ ಕೆ.ಸತ್ಯಣ್ಣ, ಕಾರ್ಯದರ್ಶಿ ಸಿ.ಡಿ. ಹಾಲುಸ್ವಾಮಿ, ಮುಖಂಡರಾದ ಕೆ.ದೇವಣ್ಣ, ಎನ್.ಅಂಬರೀಶ್, ಕೆ.ಹೊನ್ನೂರಪ್ಪ, ಕೆ.ಪಂಪಾಪತಿ, ಎಚ್.ಕೆ. ನರಸಿಂಗಾಚಾರಿ, ಎಚ್.ತಾಯಪ್ಪ, ಎಚ್.ರಾಮಪ್ಪ, ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಮಸಣ ಕಾರ್ಮಿಕರ ಸಂಘದ ಮುಖಂಡರಾದ ಎ.ಸ್ವಾಮಿ, ಎಚ್.ದುರ್ಗಮ್ಮ, ಇತರೆ ಸದಸ್ಯರು ಉಪಸ್ಥಿತರಿದ್ದರು.ಸಂಡೂರು ತಾಲೂಕಿನ ಕುರೆಕುಪ್ಪದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು.