ಬಾಣಂತಿಗೆ ನ್ಯಾಯ ಒದಗಿಸಲು ಆಗ್ರಹ

| Published : Jan 09 2025, 12:45 AM IST

ಸಾರಾಂಶ

ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದ ಹನುಮಾನ ನಗರದಲ್ಲಿ ಮನೆ ಜಪ್ತಿ ಮಾಡಿ ಬಾಣಂತಿ ಹೊರ ಹಾಕಿ ಅಮಾನವೀಯತೆ ಮೆರೆದಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ಮಂಜು ಗದಾಡಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ತಾಲೂಕಿನ ನಾಗನೂರ ಪಟ್ಟಣದ ಹನುಮಾನ ನಗರದಲ್ಲಿ ಮನೆ ಜಪ್ತಿ ಮಾಡಿ ಬಾಣಂತಿ ಹೊರ ಹಾಕಿ ಅಮಾನವೀಯತೆ ಮೆರೆದಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ಮಂಜು ಗದಾಡಿ ಆಗ್ರಹಿಸಿದರು.

ಪಟ್ಟಣದಲ್ಲಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರೈತ ಸೈದಪ್ಪ ಅವರು 2021ರ ಡಿಸೆಂಬರ್ ನಲ್ಲಿ ಚೆನ್ನೈ ಮೂಲದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿಯಲ್ಲಿ ಸಾಲ ಹೈನುಗಾರಿಕೆಗೆ ತೆಗೆದುಕೊಂಡ ₹5 ಲಕ್ಷ ಸಾಲದಲ್ಲಿ ₹3,16,800 ಮರಳಿ ತುಂಬಿದ್ದಾರೆ. ನಂತರ ಕಂತು ತುಂಬುವ ಸಂದರ್ಭದಲ್ಲಿ ಫೈನಾನ್ಸ್ ಸಿಬ್ಬಂದಿ ₹32 ಸಾವಿರ ಹಣವನ್ನು ತೆಗೆದುಕೊಂಡು ಹೋಗಿದ್ದು, ಖಾತೆಗೆ ಜಮಾ ಮಾಡದೆ ಕಂಒನಿಯ ಕೆಲಸ ಬಿಟ್ಟಿದ್ದಾರೆ. ಅವರ ವಿರುದ್ಧ ಫೈನಾನ್ಸ್ ನವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೂ ರೈತರನ್ನು ಬೀದಿಗೆ ತರುವಂತ ಕಾರ್ಯ ಮಾಡಿದ್ದು ವಿಪರ್ಯಾಸ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಮಯದಲ್ಲಿ ರಮೇಶ ತಿಗಡಿ, ಮಾಯಪ್ಪ ಲೋಕುರೆ, ಸಿದ್ದಪ್ಪ ಕೊಣ್ಣೂರ, ಬಾರಪ್ಪ ಹರಿಜನ, ದಶರಥ ಮಾಂಗ, ದುಂಡಪ್ಪ ದುರದುಂಡಿ ಮತ್ತಿತರರು ಉಪಸ್ಥಿತರಿದ್ದರು.