ಕೆಸಿ ವ್ಯಾಲಿ 300 ಎಂಎಲ್‌ಡಿ ನೀರು ಹರಿಸಲು ಒತ್ತಾಯ

| Published : Mar 05 2025, 12:31 AM IST

ಕೆಸಿ ವ್ಯಾಲಿ 300 ಎಂಎಲ್‌ಡಿ ನೀರು ಹರಿಸಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬಂಗಾರಪೇಟೆ ತಾಲೂಕಿಗೆ ಕೆಸಿ ವ್ಯಾಲಿಯ ಮೊದಲನೇ ಹಂತದಲ್ಲಿ ೪೦೦ಎಂಎಲ್‌ಡಿ ನೀರು ಸರಬರಾಜು ಮಾಡಲು ಒಪ್ಪಂದವಾಗಿತ್ತು. ಅದರಂತೆ ಪೂರೈಸಿದ್ದರಿಂದ ಕ್ಷೇತ್ರ ಸೇರಿದಂತೆ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಅಂತರ್ಜಲ ಮಟ್ಟ ಸುಧಾರಿಸಿತ್ತು. ಆದರೆ ಎರಡು ವರ್ಷದಿಂದ ಬಿಬಿಎಂಪಿ ನೀರು ಸರಬರಾಜು ಮಾಡದ ಕಾರಣ ಕೆರೆಗಳಲ್ಲಿ ನೀರಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೆಸಿವ್ಯಾಲಿ ೨ನೇ ಹಂತದ ನೀರು ಕ್ಷೇತ್ರಕ್ಕೆ ಪೂರೈಕೆಯಾಗದೆ ರೈತರು ಅತಂತ್ರದಲ್ಲಿದ್ದಾರೆ. ಇದರಿಂದ ಯೋಜನೆ ಉದ್ದೇಶಿತ ಸಂಪೂರ್ಣವಾಗಿ ಈಡೇರಿಲ್ಲ. ಆದ್ದರಿಂದ ಒಪ್ಪಂದದಂತೆ ೩೦೦ ಎಂಎಲ್‌ಡಿ ನೀರು ಬಿಡಲು ಸಣ್ಣ ನೀರಾವರಿ ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒತ್ತಾಯಿಸಿದರು.ವಿಧಾನಸಭೆ ಅಧಿವೇಶದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಶಾಸಕರು ಕೆಸಿ ವ್ಯಾಲಿಯ ಮೊದಲನೇ ಹಂತದಲ್ಲಿ ೪೦೦ಎಂಎಲ್‌ಡಿ ನೀರು ಸರಬರಾಜು ಮಾಡಲು ಒಪ್ಪಂದವಾಗಿತ್ತು. ಅದರಂತೆ ಪೂರೈಸಿದ್ದರಿಂದ ಕ್ಷೇತ್ರ ಸೇರಿದಂತೆ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಅಂತರ್ಜಲ ಮಟ್ಟ ಸುಧಾರಿಸಿತ್ತು. ಆದರೆ ಎರಡು ವರ್ಷದಿಂದ ಬಿಬಿಎಂಪಿ ನೀರು ಸರಬರಾಜು ಮಾಡದ ಕಾರಣ ಕೆರೆಗಳಲ್ಲಿ ನೀರಿಲ್ಲ ಕೇವಲ ೨೮೦ಎಂಎಲ್‌ಡಿ ಮಾತ್ರ ಬರುತ್ತಿದೆ ಎಂದರು.

೩೮೦ ಎಂಎಲ್‌ಡಿ ನೀರು ಹರಿಸಿ

ಇದರಿಂದ ಬಂಗಾರಪೇಟೆ ಕ್ಷೇತ್ರಕ್ಕೆ ನೀರು ಬರುತ್ತಿಲ್ಲ. ಮೂರು ವರ್ಷಗಳಿಮದ ಹನಿ ನೀರು ಬಂದಿಲ್ಲ ಇದರಿಂದ ರೈತರಿಗೆ ತೊಂದರೆ ಉಂಟಾಗಿದೆ.ಒಪ್ಪಂದದಂತೆ ೩೮೦ ಎಂಎಲ್‌ಡಿ ನೀರು ಪೂರೈಸಲು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸದನದಲ್ಲಿ ಒತ್ತಾಯಿಸಿದರು. ಕ್ಷೇತ್ರದಲ್ಲಿ ೨೦೦ಕ್ಕೂ ಹೆಚ್ಚಿನ ಕೆರೆಗಳಿವೆ ಅವುಗಳ ಅಭಿವೃದ್ದಿಗೆ ಸರ್ಕಾರ ೭ಕೋಟಿ ಅನುದಾನ ಮಂಜೂರು ಮಾಡಿತ್ತು, ಆದರೆ ಖರ್ಚು ಮಾಡಿರುವುದು ಕೇವಲ ೩.೫೫ಕೋಟಿ ಮಾತ್ರ ಎಂದರು.. ಕೆಸಿವ್ಯಾಲಿ ೨ನೇ ಹಂತದ ಯೋಜನೆಗೆ ಕೋಲಾರ ಕೆರೆಯಿಂದ ಬಂಗಾರಪೇಟೆ ಕ್ಷೇತ್ರದ ಕೆಲವು ಕೆರೆಗಳಿಗೆ ಪೈಪ್ ಲೈನ್ ಮೂಲಕ ನೀರು ಹರಿಸಲು ೪೫೫ ಕೋಟಿಗಳಿಗೆ ಹಿಂದಿನ ಸರ್ಕಾರದಲ್ಲಿ ಹಣ ಮಂಜೂರು ಆಗಿತ್ತು. ಕಾಮಗಾರಿ ಆರಂಭವಾಗಿದೆ, ೨೦೨೪ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ಮುಗಿದಿಲ್ಲ ಎಂದರು.

ಹಣ ಬಿಡುಗಡೆಗೆ ಒತ್ತಾಯ

ಯೋಜನೆಗೆ ಮಂಜೂರಾಗಿದ್ದ ೪೫೫ ಕೋಟಿಗಳಲ್ಲಿ ೧೪೯ ಕೋಟಿ ಮಾತ್ರ ಹಣ ಬಿಡುಗಡೆಯಾಗಿದ್ದು ಉಳಿದ ಹಣ ೧೨೦ಕೋಟಿ ನೀಡಿಲ್ಲ. ಇದೇ ಕಾರಣ ನೀಡಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗಿದೆ ಬಾಕಿ ಹಣ ಬಿಡುಗಡೆಯಾದರೆ ಕೆರೆಗಳಿಗೆ ನೀರಿನ ಭಾಗ್ಯ ಲಭಿಸಿ ರೈತರು ಸಮೃದ್ದಿಯಾಗಿ ಬೆಳೆಗಳನ್ನು ಬೆಳೆಸುವರು ಎಂದು ಆಗ್ರಹಿಸಿದರು.