ಮಾರ್ಕೋನಹಳ್ಳಿಯಿಂದ ನೀರು ಹರಿಸಲು ಆಗ್ರಹ

| Published : Aug 08 2025, 01:00 AM IST

ಸಾರಾಂಶ

ಮಾರ್ಕೋನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಅಮೃತೂರ್ ಕೆಇಬಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್ ಮಾರ್ಕೋನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಅಮೃತೂರ್ ಕೆಇಬಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಅಮೃತೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಘಟನೆಕೊಂಡ ನೂರಾರು ರೈತರು ತಾಲೂಕು ಆಡಳಿತ ಸರ್ಕಾರ ಹಾಗೂ ಶಾಸಕರ ವಿರುದ್ಧ ಹಲವಾರು ಘೋಷಣೆಗಳನ್ನು ಕೂಗುತ್ತಾ ಕೆಇಬಿ ವೃತ್ತದಲ್ಲಿ ಜಮಾವಣೆಗೊಂಡರು. ಸಭೆಯ ನೇತೃತ್ವ ವಹಿಸಿ ಮಾತನಾಡಿದ ಜೆಡಿಎಸ್ ಮುಖಂಡ ಡಾ. ರವಿ ಬಾಬು ಮಾರ್ಕೋನಹಳ್ಳಿ ಜಲಾಶಯ ನಿರ್ಮಾಣ ಆದ ನಂತರ ಅಂದಾನಯ ಹುಚ್ಚ ಮಾಸ್ತಿಗೌಡ, ವೈ ಕೆ ರಾಮಯ್ಯ, ಮುದ್ದಹನುಮೇಗೌಡ, ಡಿ ನಾಗರಾಜಯ್ಯ, ಬಿ ಬಿ ರಾಮಸ್ವಾಮಿಗೌಡ ಸೇರಿದಂತೆ ಹಲವಾರು ಶಾಸಕರು ನೀರಾವರಿ ಸಲಹಾ ಸಮಿತಿ ಮಾಡಿದ್ದು ಪ್ರತಿಯೊಬ್ಬರೂ ಕೂಡ ಅಮೃತೂರಿನಲ್ಲಿ ಸಭೆ ನಡೆಸುತ್ತಿದ್ದರು. ಆದರೆ ಕುಣಿಗಲ್ ಗೆ ಹೊಸದಾಗಿ ಬಂದ ಶಾಸಕ ರಂಗನಾಥ್ ಪ್ರವಾಸಿ ಮಂದಿರದಲ್ಲಿ ತನಗೆ ಬೇಕಾದ ಅಧಿಕಾರಿ ಮತ್ತು ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತಿದ್ದಾರೆ ಇದಕ್ಕೆ ಕಾರಣ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂಬ ಉದ್ದೇಶಕ್ಕೆ ಎಂದರು. D 26 ಕಾಲುವೆ ಇತಿಹಾಸವನ್ನು ಮುಗಿಸಲು ಮುಂದಾಗಿರುವ ಕುಣಿಗಲ್ ಶಾಸಕರ ನೀತಿಯಿಂದ ಯಡಿಯೂರು ಹೋಬಳಿಯ ಪ್ರದೇಶಗಳಾದ ನಡೆಮಾವಿನಪುರ ಕೊಪ್ಪ ಸೇರಿದಂತೆ ಹಲವಾರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ದಿನೇಶ್ ಮಾತನಾಡಿ, ಮಂಗಳ ಮಾರ್ಕೋನಹಳ್ಳಿ ಜಲಾಶಯದ ಅಚ್ಚು ಕಟ್ಟುದಾರರು ನೀರಿಗಾಗಿ ಹೋರಾಟ ಮಾಡುವುದು ಈ ಬಾರಿ ವಿಶೇಷ ಅನಿಸುತ್ತದೆ. ಬಿತ್ತನೆಗೆ ನೀರಿನ ಸಮಸ್ಯೆ ಉಂಟಾದಾಗ ಜಲಾಶಯದಿಂದ ನೀರು ಬಿಡದ ಕಾರಣಕ್ಕಾಗಿ ನಾವು ಹೋರಾಟವನ್ನು ರೂಪಿಸಿದ್ದೆ. ವಿಚಾರ ತಿಳಿಯುತ್ತಿದ್ದಂತೆ ಶಾಸಕರ ಹಿಂಬಾಲಕರು ತಕ್ಷಣ ವಾಟ್ಸಪ್ ನಲ್ಲಿ ಸಭೆಯ ದಿನಾಂಕವನ್ನು ಗುರುತಿಸಿ ಸಭೆ ಕರೆದಿರುವುದು ಅಭಿನಂದನ ವಿಚಾರ ಎಂದರು,

ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಮಾರ್ಕೋನಹಳ್ಳಿ ಜಲಾಶಯಕ್ಕೆ ಬಂದು ನಿರಂತರವಾಗಿ ರೈತರಿಗೆ ನೀರು ಹರಿಸುವ ಯೋಜನೆಯನ್ನು ಮಾಡಿದ್ದಾರೆ. ಆದರೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಕೂಡ ನಾಗಮಂಗಲಕ್ಕೆ ನೀರು ಹರಿಸುವ ಕೆಲಸ ಮಾಡಿದ್ದು, ಕುಣಿಗಲ್ ತಾಲೂಕಿನ ರೈತರಿಗೆ ಅನ್ಯಾಯ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಅದೇ ರೀತಿ ಕುಣಿಗಲ್ ಪಟ್ಟಣದ ದೊಡ್ಡ ಕೆರೆಯ ನೀರನ್ನು ಕೂಡ ಬಂದ್ ಮಾಡಿದ್ದು ಮಾಗಡಿ ಮತ್ತು ರಾಮನಗರಕ್ಕೆ ನೀರು ಕೊಂಡೊಯ್ಯುವ ತಯಾರಿ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕೆಂಪಗೂಳಿಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಎಮ್ ಸ್ವಾಮಿ ಆನಂದ ಸಂಪತ್ ಕುಮಾರ್ ಶಿವಸ್ವಾಮಿ ಗವಿಯಪ್ಪ ಗೂಳಿಗೌಡ ಇದ್ದರು