ರಾಮನಾಥಪುರ ಹೋಬಳಿಯ ಮಲ್ಲಾಪುರ, ಹರಳಹಳ್ಳಿ, ಸೋಂಪುರ, ಕೆರಗೋಡು, ಲಕ್ಕೂರು, ರಾಗಿಮರೂರು ಇನ್ನೂ ಹಲವಾರು ಗ್ರಾಮಗಳ ಕೆರೆಗಳಿಗೆ ಕರಡಿಲಕ್ಕನ ಕಟ್ಟೆಯಿಂದ ನೀರು ಹರಿಸಿದರೆ ಈ ಭಾಗದ ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಇಲ್ಲಿಯ ನಿವಾಸಗಳು ಒತ್ತಾಯಿಸಿದ್ದಾರೆ. ಹಾಸನ ಜಿಲ್ಲೆ ಮತ್ತು ಮೈಸೂರು ಜಿಲ್ಲೆ ಹೊಂದಿಕೊಂಡತೆ ಇರುವ ಅರಕಲಗೂಡು ತಾಲ್ಲೂಕು ಹಾಗೂ ಪಿರಿಯಪಟ್ಟಣ ತಾಲ್ಲೂಕಿನ ಈ ಭಾಗದ ರೈತರಿಗೆ ಅನುಕೂಲ ಮಾಡಲು ಈ ಹಿಂದಿನ ಮುಖ್ಯ ಮಂತ್ರಿ ಶ್ರೀ ರಾಮಕೃಷ್ಣ ಹೆಗ್ಗಡೆಯವರ ಅವಧಿಯಲ್ಲಿ ಶಂಕುಸ್ಥಾಪನೆಯಾಗಿ ಕಾಮಗಾರಿ ಪ್ರಾರಂಭವಾಗಿ ನಂತರದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಕಾಮಗಾರಿ ಮುಗಿದು ಪ್ರತಿವರ್ಷವೂ ನೀರು ಬಿಡಲಾಗಿತ್ತು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಬರಗಾಲದ ಬೇಗೆಯಿಂದ ನರಳುತ್ತಿರುವ ರಾಮನಾಥಪುರ ಹೋಬಳಿಯ ರಾಗಿಮರೂರು ಕೆರೆಗೆ ಕಂಡಲಕ್ಕನ ಕಟ್ಟೆಯಿಂದ ನೀರು ಬಿಡಿಸುವಂತೆ ಈ ಭಾಗದ ಸಾರ್ವಜನಿಕರು ಹಾಗೂ ಮಾಜಿ ಸಚಿವರ ಪುತ್ರರಾದ ಡಾ. ಮೋಹನ್ ಮಲ್ಲಪ್ಪ ಒತ್ತಾಯಿಸಿದ್ದಾರೆ.