ತಾಲೂಕಿನ ಕೊಣ್ಣೂರ ಗ್ರಾಮದ ಕೊಳಚಿ ಕಾಲುವೆ ಹೂಳು ತುಂಬಿ ನೀರು ಪೂರೈಕೆಯಾಗದ ಸ್ಥಿತಿಯಿದೆ. ಆದ್ದರಿಂದ ಈ ಕಾಲುವೆ ದುರಸ್ತಿ ಮಾಡಬೇಕೆಂದು ಆಗ್ರಹಿಸಿ ರೈತರು ನೀರು ಬಳಕೆದಾರರ ಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಬಳಕೆದಾರರ ಸಂಘದ ಅಧ್ಯಕ್ಷರಿಗೆ ರೈತರ ಮನವಿ

ಕನ್ನಡಪ್ರಭ ವಾರ್ತೆ ನರಗುಂದ

ತಾಲೂಕಿನ ಕೊಣ್ಣೂರ ಗ್ರಾಮದ ಕೊಳಚಿ ಕಾಲುವೆ ಹೂಳು ತುಂಬಿ ನೀರು ಪೂರೈಕೆಯಾಗದ ಸ್ಥಿತಿಯಿದೆ. ಆದ್ದರಿಂದ ಈ ಕಾಲುವೆ ದುರಸ್ತಿ ಮಾಡಬೇಕೆಂದು ಆಗ್ರಹಿಸಿ ರೈತರು ನೀರು ಬಳಕೆದಾರರ ಸಂಘದ ಅಧ್ಯಕ್ಷರಿಗೆ ಗುರುವಾರ ಮನವಿ ಸಲ್ಲಿಸಿದರು. ನಂತರ ತಾಲೂಕಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಮಾತನಾಡಿ ರಾಮರ್ದುಗ, ನರಗುಂದ, ರೋಣ ತಾಲೂಕಿನ ಹಲವಾರು ಗ್ರಾಮಗಳಗೆ ಜಲಾಶಯದಿಂದ ನೀರು ಪೂರೈಕೆ ಮಾಡುವ ಕೊಳಚಿ ಕಾಲುವಗೆ ಪ್ರತಿ ವರ್ಷ ಸರ್ಕಾರದಿಂದ ಲಕ್ಷಾಂತರ ಹಣ ದುರಸ್ತಿಗೆ ಬಂದರೂ ಸಹ ಕಾಲುವೆಯಲ್ಲಿ ಜಾಲಿ ಕಂಟಿ ಬೆಳೆದು, ಹೂಳು ತುಂಬಿ ಕೆಳ ಭಾಗದ ರೈತರ ಜಮೀನುಗಳಗೆ ನೀರು ಪೂರೈಕೆ ಆಗುತ್ತಿಲ್ಲ. ಮೇಲಾಗಿ ಈ ಬಗ್ಗೆ ನೀರಾವರಿ ಅಧಿಕಾರಿಗಳಗೆ ದುರಸ್ತಿ ಮಾಡಬೇಕೆಂದು ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಹೆಚ್ಚಿನ ಅನುದಾನ ನೀಡಿ ಕಾಲುವೆ ದುರಸ್ತಿ ಮಾಡಬೇಕು. ಹಾಗೆ ಈ ಭಾಗದಲ್ಲಿ ಬರಗಾಲ ಇರುವುದರಿಂದ ಜನ, ಜಾನುವಾರಗಳಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶೀಘ್ರ ಕಾಲುವೆಗೆ ಜಲಾಶಯದಿಂದ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.

ಮಲಪ್ರಭಾ ಯೋಜನೆ ಮಟ್ಟದ ನೀರು ಸರಬರಾಜುದಾರರ ಸಹಕಾರ ಸಂಘದ ಮಹಾಮಂಡಳಿ ಅಧ್ಯಕ್ಷ ಸದುಗೌಡ ಪಾಟೀಲ ರೈತರ ಮನವಿ ಸ್ವೀಕರಿಸಿದರು.

ಈ ಸಂದರ್ಭ ಗುರುಪಾದಪ್ಪ ಕುರಹಟ್ಟಿ, ದ್ಯಾಮಣ್ಣ ಕಾಡಪ್ಪನವರ, ಬಾಬು ಹಿರೇಹೊಳಿ, ಬಸವರಾಜ ಶೆಲ್ಲಿಕೇರಿ, ಶೇಖರಗೌಡ ಪೊಲೀಸಪಾಟೀಲ, ಶಂಕರಗೌಡ ಶಿರಿಯಪ್ಪಗೌಡ್ರ, ಬಸವರಾಜ ವಾಸನ, ಪ್ರವಿಣ ಯಲಿಗಾರ, ವೀರಣ್ಣ ಹುರಕಡ್ಲಿ, ಪರಪ್ಪ ಸಹಕಾರ, ಬಿಸ್ಮೀಲಾ ಕಡಕೋಳ, ಬೀರಪ್ಪ ದ್ಯಾವಣ್ಣವರ, ಬಸವರಾಜ ಸುಂಕದ, ಅಶೋಕ ಪಾಟೀಲ, ರಮೇಶ ಗಡಗಣ್ಣವರ, ಮಲ್ಲಪ್ಪ ಮೇಟಿ ಇದ್ದರು.