ಅಪಾಯಕ್ಕೆ ಆಹ್ವಾನಿಸುವ ಟ್ರಾನ್ಸಫಾರ್ಮರ್‌ ಬದಲಾವಣೆಗೆ ಆಗ್ರಹ

| Published : May 23 2025, 12:38 AM IST

ಸಾರಾಂಶ

ಸಮೀಪದ ದೊಡ್ಡೂರ ಗ್ರಾಪಂ ಬಸ್ ತಂಗುದಾಣದ ಪಕ್ಕದಲ್ಲಿಯೇ ಇರುವ ಟ್ರಾನ್ಸ್‌ಫಾರ್ಮರ್ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಹೆಸ್ಕಾಂ ಅಧಿಕಾರಿಗಳು ಮಾತ್ರ ಜಾಣ ಮೌನಕ್ಕೆ ಶರಣಾಗಿರುವುದು ಅಚ್ಚರಿಯ ಸಂಗತಿಯಾಗಿದೆ.

ಲಕ್ಷ್ಮೇಶ್ವರ: ಸಮೀಪದ ದೊಡ್ಡೂರ ಗ್ರಾಪಂ ಬಸ್ ತಂಗುದಾಣದ ಪಕ್ಕದಲ್ಲಿಯೇ ಇರುವ ಟ್ರಾನ್ಸ್‌ಫಾರ್ಮರ್ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಹೆಸ್ಕಾಂ ಅಧಿಕಾರಿಗಳು ಮಾತ್ರ ಜಾಣ ಮೌನಕ್ಕೆ ಶರಣಾಗಿರುವುದು ಅಚ್ಚರಿಯ ಸಂಗತಿಯಾಗಿದೆ.

ಕಳೆದ ಹಲವು ದಶಕಗಳಿಂದ ಸೂರಣಗಿ ಗ್ರಾಮದ ಹಳೆಯ ಬಸ್ ನಿಲ್ದಾಣದ ಹತ್ತಿರ ಟ್ರಾನ್ಸ್‌ಫಾರ್ಮರ್ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ಕುರಿತು ಗ್ರಾಮಸ್ಥರು ಹಲವು ವರ್ಷಗಳಿಂದ ಬೇರೆ ಜಾಗದಲ್ಲಿ ಹಾಕುವ ಕಾರ್ಯ ಮಾಡುವಂತೆ ಮನವಿ ಮಾಡಿದ್ದರೂ ಅಧಿಕಾರಿಗಳು ಇದಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂಬುದು ಗ್ರಾಮಸ್ಥರ ಅಳಲಾಗಿದೆ.

3 ವರ್ಷಗಳ ಹಿಂದೆ ಬದಲಾವಣೆ ಮಾಡಲು ಟೆಂಡರ್ ಕರೆಯಲಾಗಿತ್ತು. ಟೆಂಡರ್ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ಟ್ರಾನ್ಸ್‌ಫಾರ್ಮರ್ ಹಾಕಲು ವಿದ್ಯುತ್ ಕಂಬ ಹಾಕಿದ್ದರೂ ಟ್ರಾನ್ಸ್‌ಫಾರ್ಮರ್ ಬದಲಾಯಿಸದಿರುವುದು ಅಚ್ಚರಿಯ ಸಂಗತಿಯಾಗಿದೆ. ಹಲವು ಬಾರಿ ಸುಟ್ಟು ಹೋಗಿ ಅಕ್ಕ ಪಕ್ಕದ ಮನೆ ಹಾಗೂ ಅಂಗಡಿಗಳಿಗೆ ಶಾಕ್ ನೀಡಿದಂತಾದ ಅನುಭವವಾಗಿದೆ ಎನ್ನುತ್ತಾರೆ ಅಕ್ಕ ಪಕ್ಕದ ನಿವಾಸಿಗಳು. ಕಳೆದ ಹಲವು ವರ್ಷಗಳಿಂದ ಟ್ರಾನ್ಸ್‌ಫಾರ್ಮರ್ ಬದಲಾಯಿಸುವಂತೆ ಹೆಸ್ಕಾಂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಶೀಘ್ರದಲ್ಲಿ ಟ್ರಾನ್ಸ್‌ಫಾರ್ಮರ್ ಬದಾವಣೆ ಮಾಡದೆ ಹೋದಲ್ಲಿ ಹೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಸೂರಣಗಿ ಗ್ರಾಮದ ನಿವಾಸಿ ಪ್ರಕಾಶ ಕಳ್ಳಿಹಾಳ ಹೇಳಿದರು.