ಸಾರಾಂಶ
ಹಾವೇರಿ: ಅನುದಾನಿತ ಶಿಕ್ಷಣ ಸಂಸ್ಥೆಗಳ ಹಾಗೂ ಪ್ರೌಢಶಾಲೆಗಳ ಸಿಬ್ಬಂದಿಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.೨೦೦೬ರ ನಂತರ ನೇಮಕವಾದ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ ಮಾಡುವುದು, ೨೦೧೫ರ ನಂತರ ಖಾಲಿಯಾದ ಹುದ್ದೆಗಳ ಭರ್ತಿಗೆ ಅನುಮತಿ ನೀಡುವುದು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕಕರಿಗೆ ಜ್ಯೋತಿ ಸಂಜೀವಿನಿ ಜಾರಿಗೊಳಿಸುವುದು, ಸಭಾಪತಿ ಬಸವರಾಜ ಹೊರಟ್ಟಿ ಅವರ ಕಾಲ್ಪನಿಕ ವೇತನ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವುದು, ೭ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ. ಬಣಕಾರ, ಕಾರ್ಯದರ್ಶಿ ಎನ್.ಎನ್. ಕುಂದೂರ, ಎಂ.ಬಿ. ರಮೇಶ, ಕೆ.ಎಸ್.ಗಾಣಗೇರ, ಬಸಪ್ಪ ಪಿ., ಬಸವರಾಜ ಹೊಸಪೇಟೆ, ಜೆ.ಎಸ್. ಹೇರೂರ, ಮಾಲತೇಶ ಭಜಂತ್ರಿ, ಆರ್.ಕೆ. ದೊಡ್ಡಮನಿ, ಜಿ.ಎನ್. ಹಿತ್ತಲಮನಿ, ಎಂ.ಎಸ್. ಕೆಂಚನಗೌಡರ, ಆರ್.ಎಚ್. ಬೆಟ್ಟಳ್ಳೇರ, ರವಿ ವಿ., ಎಸ್.ಡಿ. ಪರಡ್ಡಿ, ಬಿ.ವಿ. ಕೋರಿ, ಎಂ.ಎನ್. ಓಲೇಕಾರ, ಪುಷ್ಪಲತಾ ಗಾಣಗೇರ, ಎಸ್.ವಿ. ಕಪ್ಪರದ, ಎಂ.ಎಸ್. ಬಿಸ್ಟನಗೌಡರ, ಇತರರು ಇದ್ದರು.