ರೈತ ಸಂಪರ್ಕ ಕೇಂದ್ರ ಆರಂಭಿಸಲು ಒತ್ತಾಯ

| Published : Dec 04 2024, 12:31 AM IST

ಸಾರಾಂಶ

ಸೂರಣಗಿ ಗ್ರಾಮ ಹೋಬಳಿ ಮಟ್ಟದಲ್ಲಿ ರೈತರಿಗೆ ಹಾಗೂ ಸುತ್ತ ಮುತ್ತಲಿನ 10-12 ಹಳ್ಳಿಗಳ ನಮ್ಮ ರೈತರಿಗೆ ಅವಶ್ಯಕತೆ ಇದೆ

ಲಕ್ಷೇಶ್ವರ: ಸಮೀಪದ ಸೂರಣಗಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗದಗ ಜಿಲ್ಲಾಧ್ಯಕ್ಷ ಶಂಕರಗೌಡ ಜಯನಗೌಡ ತಹಸೀಲ್ದಾರ ವಾಸುದೇವ ಸ್ವಾಮಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದರು.

ತಾಲೂಕಿನ ಸೂರಣಗಿ ಗ್ರಾಮ ಹಾಗೂ ಸುತ್ತ ಮುತ್ತಲಿನ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಸೂರಣಗಿ ಗ್ರಾಮದಲ್ಲಿನ ರೈತರು ಬಿತ್ತನೆ ಬೀಜ, ರಸಗೊಬ್ಬರ, ಔಷಧಿ ತರಲು ಲಕ್ಷ್ಮೇಶ್ವರ ಪಟ್ಟಣಕ್ಕೆ ಹೋಗಬೇಕಾಗುತ್ತದೆ. ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ರೈತ ಸಂಪರ್ಕ ಕೇಂದ್ರ ದೂರ ಇರುವುದರಿಂದ ನಮ್ಮ ರೈತರಿಗೆ ತೊಂದರೆ ಆಗುತ್ತದೆ. ಸೂರಣಗಿ ಗ್ರಾಮ ಹೋಬಳಿ ಮಟ್ಟದಲ್ಲಿ ರೈತರಿಗೆ ಹಾಗೂ ಸುತ್ತ ಮುತ್ತಲಿನ 10-12 ಹಳ್ಳಿಗಳ ನಮ್ಮ ರೈತರಿಗೆ ಅವಶ್ಯಕತೆ ಇದೆ. ಇದರಿಂದ ತೋಟಗಾರಿಕೆ ಬೆಳೆಗಳು ಮತ್ತು ಹೈನುಗಾರಿಕೆ, ಕೃಷಿ ವ್ಯವಸಾಯ ಮಾಡುತ್ತಿರುವ ನಮ್ಮ ರೈತರಿಗೆ ಸರ್ಕಾರದ ಯೋಜನೆಗಳು ಮತ್ತು ವಿಶೇಷ ಘಟಕ ಯೋಜನೆಯಲ್ಲಿ ಬರುವಂತಹ ಸರ್ಕಾರದ ಸಹಾಯ ಧನಗಳು ಸರಿಯಾಗಿ ಮುಟ್ಟುತ್ತಿಲ್ಲ. ಆದ ಕಾರಣ ಸೂರಣಗಿ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಯ ರೈತರಿಗೆ ರೈತ ಸಂಪರ್ಕ ಕೇಂದ್ರ ಅವಶ್ಯಕತೆ ಇದ್ದು, ಕೂಡಲೇ ಸರ್ಕಾರದಿಂದ ಶೀಘ್ರದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಲು ಅನುಮತಿ ಮಾಡಿಕೊಡಬೇಕು. ಶೀಘ್ರದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯದೇ ಇದ್ದಲ್ಲಿ ರೈತರಿಂದ ರಾಜ್ಯಪಾಲರ ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಕೂಡಲೇ ಸರ್ಕಾರದಿಂದ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ ಕೊಡಬೇಕೆಂದು ಮನವಿ ಮಾಡಿದರು.

ಈ ವೇಳೆ ಲಕ್ಷ್ಮೇಶ್ವರ ನಾಗರಾಜ ಕಳ್ಳಿಹಾಳ, ವಿರುಪಾಕ್ಷಪ್ಪ ಅರಳಿ, ಚಂದ್ರಪ್ಪ ಶಿರನಹಳ್ಳಿ, ದೇವಪ್ಪ ರಾಹುತರ, ಅನಿಲ ಬಿದರಳ್ಳಿ, ಚಂದ್ರಪ್ಪ ಲಮಾಣಿ, ಸಿದ್ದಪ್ಪ ನಾಗಣ್ಣವರ, ಹಾಲಪ್ಪ ಕಾಶಿಕೋವಿ, ಸವರಾಜ ಮೂಲಿಮನಿ, ದೇವಪ್ಪ ಬೆಟಗೇರಿ, ಅನ್ನಾಹುಸೇನ ಕೋಲಕಾರ, ಸುಭಾಷ ಬಡಿಗೇರ, ಹನಮಂತಪ್ಪ ಕಿಳ್ಳಿಕ್ಯಾತರ, ನವೀನ ಕರೆಣ್ಣವರ ಇದ್ದರು.