ಸಾರಾಂಶ
ರಾಣಿಬೆನ್ನೂರು: ನಗರದ ಹೆಸ್ಕಾಂ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಇಲಾಖೆಯ ವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಅಕ್ರಮ ಕಟ್ಟಡ ಮತ್ತು ಅನಧಿಕೃತ ಬಡಾವಣೆಗಳ ನಿರ್ಮಾಣದ ಬಗ್ಗೆ ಶಾಸಕರು, ತಹಸೀಲ್ದಾರ್ ಹಾಗೂ ಪೌರಾಯುಕ್ತರು ಯಾವುದೇ ರೀತಿಯ ನಾನ್ ಎನ್‌ಎ ಸೈಟ್‌ಗಳಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಲಭ್ಯ ನೀಡಬಾರದು ಎಂದು ತಿಳಿಸಿದ್ದಾರೆ. ಆದರೆ ಕಳೆದ ಎರಡು ತಿಂಗಳಲ್ಲಿ ಯಾವುದೇ ರೀತಿಯ ಅನುಮತಿಯಿಲ್ಲದೇ ಅನಧಿಕೃತ ಕಟ್ಟಡಗಳಿಗೆ, ಮನೆಗಳಿಗೆ ಸಾವಿರಾರು ರು. ಹಣ ವಸೂಲಿ ಮಾಡಿ ಮೀಟರ್ ಅಳವಡಿಸಲಾಗಿದೆ ಎಂದು ಆರೋಪಿಸಿದರು.ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹಲವಾರು ಬಾರಿ ಇಲಾಖೆಗೆ ಮನವಿ ಸಲ್ಲಿಸಲಾದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ. ಆದ್ದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನ್ಯಾಯವಾಗುತ್ತಿದ್ದು, ಕೂಡಲೇ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಮಂಜುನಾಥ ಸಂಭೋಜಿ, ರಾಜು ಅಂಗಡಿ, ಮಂಜುನಾಥ ಗುಡ್ಡಣ್ಣನವರ, ಯಲ್ಲವ್ವ ಚಿಕ್ಕಣ್ಣನವರ, ರಮೇಶ ಲಮಾಣಿ, ರಾಜು ಕಂಚಾರಗಟ್ಟಿ, ಬಾನು ಹಲಗೇರಿ, ಯಾಸ್ಮಿನ್ ಹಲಗೇರಿ, ರೇಷ್ಮಾ ಹೊನ್ನಾಳಿ, ಸಲ್ಮಬಾನು ಶಿಡೇನೂರ, ಶಂಕ್ರವ್ವ ಲಮಾಣಿ ಮತ್ತಿತರರಿದ್ದರು.ಯಳ್ಳೂರು ಸರ್ಕಾರಿ ಶಾಲೆಗೆ ಸಾಮಗ್ರಿ ವಿತರಣೆ
ಹಾನಗಲ್ಲ: ತಾಲೂಕಿನ ಯಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಶ್ರೀನಿವಾಸ ಮಾನೆ ಅವರು ₹66 ಸಾವಿರ ಬೆಲೆಬಾಳುವ ನಾನಾ ಸಾಮಗ್ರಿಗಳನ್ನು ವಿತರಿಸಿದರು.ಸ್ಮಾರ್ಟ್ ಟಿವಿ, ಲೈಬ್ರರಿ ಬುಕ್ ಆಲ್ಮೇರಾ, ಲಾಕರ್ ಸ್ಟೀಲ್ ಆಲ್ಮೇರಾ, ಆಫೀಸ್ ಟೇಬಲ್ ಸೇರಿದಂತೆ ಹಲವು ಸಾಮಗ್ರಿಗಳನ್ನು ವಿತರಿಸಿದರು. ಈ ಸಾಮಗ್ರಿಗಳಿಗೆ ತಗುಲಿದ ವೆಚ್ಚದಲ್ಲಿ ಅರ್ಧ ಹಣವನ್ನು ಗ್ರಾಮಸ್ಥರು ಭರಿಸಿದ್ದರೆ ಇನ್ನರ್ಧ ಹಣವನ್ನು ಶಾಸಕ ಮಾನೆ ವೈಯಕ್ತಿಕವಾಗಿ ಭರಿಸಿದ್ದಾರೆ.ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕೆಲಸ ಎನ್ನುವ ಭಾವನೆಯಿಂದ ಹೊರಬರಬೇಕಿದೆ. ಸರ್ಕಾರದ ನೆರವು ಪಡೆಯದೇ ತಾಲೂಕಿನಲ್ಲಿ ಕಳೆದ 2 ವರ್ಷಗಳ ಅವಧಿಯಲ್ಲಿ 95 ಶಾಲೆಗಳಿಗೆ ₹3 ಕೋಟಿ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಕಲಿತ ಶಾಲೆಗೆ ಸೌಲಭ್ಯ ಕಲ್ಪಿಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ರೂಪಿಸಲಾಗಿರುವ 50%- 50% ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು.ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಗ್ರಾಮಸ್ಥರು, ಮುಖಂಡರು ಉಪಸ್ಥಿತರಿದ್ದರು.Ranibennur, HESCOM
ರಾಣಿಬೆನ್ನೂರು ಸುದ್ದಿ, ಹೆಸ್ಕಾಂ, ರೈತ ಸಂಘ, Ranibennur News, HESCOM, Farmers'' Associationಇಲ್ಲಿನ ಹೆಸ್ಕಾನವರು ಕಳೆದ ಎರಡು ತಿಂಗಳಲ್ಲಿ ಯಾವುದೇ ರೀತಿಯ ಅನುಮತಿಯಿಲ್ಲದೇ ಅನಧಿಕೃತ ಕಟ್ಟಡಗಳಿಗೆ, ಮನೆಗಳಿಗೆ ಸಾವಿರಾರು ರು. ಹಣ ವಸೂಲಿ ಮಾಡಿ ಮೀಟರ್ ಅಳವಡಿಸಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರು.----
;Resize=(128,128))
;Resize=(128,128))
;Resize=(128,128))
;Resize=(128,128))