ಕೃಷಿ ಪಂಪ್‌ಸೆಟ್‌ಗೆ ಮೀಟರ್ ಅಳವಡಿಕೆ ಕೂಡಲೇ ಕೈ ಬಿಡುವಂತೆ ಆಗ್ರಹ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

| Published : Sep 05 2024, 02:21 AM IST / Updated: Sep 05 2024, 07:45 AM IST

ಸಾರಾಂಶ

ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಮತ್ತು ಆಧಾರ್‌ ಜೋಡಣೆ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

 ವಿಜಯಪುರ : ಕೃಷಿ ಪಂಪ್‌ಸೆಟ್‌ಗೆ ಆಧಾರ ಜೋಡಣೆ ಹಾಗೂ ಮೀಟರ್ ಅಳವಡಿಕೆ ಕೂಡಲೇ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಹೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿ ಎದುರು ಧರಣಿ ನಡೆಸಿದರು. ನಂತರ ಅಧೀಕ್ಷಕ ಅಭಿಯಂತರರ ಮೂಲಕ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ ಎಸ್.ಬಿ.ಕೆಂಬೋಗಿ ಮಾತನಾಡಿ, ರೈತರ ಕಷ್ಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಇಲ್ಲ, ಅವರ ಆಸಕ್ತಿಗಳೆಲ್ಲ ಕಾರ್ಪೋರೇಟ್ ಕಂಪನಿಗಳ ಪರವಾಗಿದೆ ಹೊರತು ಕೃಷಿಕರ ಪರ ಅಲ್ಲವೇ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ವಲಯಕ್ಕೆ ಕಿಂಚಿತ್ತು ಲಾಭವಾಗಬಾರದೆಂದು ನಡೆಸುತ್ತಿರುವ ಪ್ರಯತ್ನ ಇಲ್ಲಿಗೆ 77  ವರ್ಷದಿಂದ ನಡೆದು ಕೊಂಡು ಬಂದಾಗಿದೆ. ರೈತ ಕೃಷಿಯಿಂದ ವರಮಾನ ಇಲ್ಲದೇ ಸತ್ತು ಬಿದ್ದು ಬದುಕುತ್ತಿದ್ದಾನೆ. ಈಗ ಸರ್ಕಾರ ಮತ್ತೆ ವಿದ್ಯುತ್ ಖಾಸಗಿಕರಣದ ಕಡಗೆ ಹೊರಟಿದೆ 2000 ನೇ ಇಸವಿಯಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೆ. 

ಕಾಂಗ್ರೆಸ್ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣಕ್ಕೆ ವರ್ಗಾಯಿಸಿತು. ಆಗ 2001 ರಲ್ಲಿ ರಾಜ್ಯವ್ಯಾಪ್ತಿ ಚಳುವಳಿ ನಡೆಯಿತು. ಇದರ ಪರಿಣಾಮ ಖಾಸಗಿ ವ್ಯಕ್ತಿ ಕೈ ಸೇರಬೇಕಾದ ವಿದ್ಯುತ್ ಕಂಪನಿ ಐದು ಭಾಗವಾಗಿ ಸರ್ಕಾರದಲ್ಲಿ ಉಳಿದಿದೆ. ಈಗ ಇದನ್ನು ಮತ್ತೆ ಖಾಸಗಿ ವ್ಯಕ್ತಿಗಳಿಗೆ ಈ ಕಂಪನಿ ವರ್ಗಾವಣೆಗೆ ಮುಂಚೆ ಆಧಾರ ಲಿಂಕ್ ಮಾಡಿ ಆನ್‌ಲೈನ್‌ ಮೂಲಕ ವ್ಯವಹಾರ ನಡೆಸುವ ಸಂಚು ಇದಾಗಿದೆ ಎಂದರು.ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಮಾತನಾಡಿ, ಸರ್ಕಾರ ವಿದ್ಯುತ್ ನಗರ, ಹಳ್ಳಿ ತಾರತಮ್ಯ ಇಲ್ಲದೆ ಸಮಾನ ವಿತರಣೆ ಬೇಕು. 

ಗುಣಮಟ್ಟವಿಲ್ಲದ ವಿದ್ಯುತ್ ಇದರಿಂದ ರಾಜ್ಯದ ೩೦ ಲಕ್ಷ ಪಂಪ್‌ಸೆಟ್‌ಗಳು ವರ್ಷದಲ್ಲಿ ಒಮ್ಮೆ ಸುಟ್ಟು ಭಸ್ಮವಾದರೇ ಅದರ ರಿವೈಡಿಂಗ್, ಈ ಮೋಟಾರ್ ಎತ್ತಲು ಇಳಿಸಲು ಅಂದಾಜು 8000 ರೂ.ಗಳಾಗುತ್ತದೆ ಇದರಿಂದ ರೈತನು ಬಡವನಾಗಿ ಮಾಡಲು ಪ್ರತಿವರ್ಷ 24000 ಕೋಟಿ ರೈತರಿಂದ ಖರ್ಚು ಮಾಡಿಸುತ್ತಾರೆ. ಇದನ್ನು ಸರ್ಕಾರವೇ ಭರಿಸಬೇಕು.

 ಫಸಲು ನಷ್ಟ ಆಂದಾಜಿಸಿ, ದರ ನಿಗದಿ ಮಾಡಬೇಕು. ಕೃಷಿಗೆ ಸಂಬಂಧಪಟ್ಟ ವಿದ್ಯುತ್ ಪರಿವರ್ತಕಗಳು ಸುಟ್ಟರೆ 24 ಘಂಟೆಯೊಳಗಾಗಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿ ಅದರ ಸಾರಿಗೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು5 ಜಿಲ್ಲೆಯಲ್ಲಿ ರೈತರ ಜಮೀನುಗಳಲ್ಲಿ ಹಾಗೂ ರೈತರ ಮನೆಗಳ ತಂತಿಗಳನ್ನು ಮೇಲೆ ಜೋತು ಬಿದ್ದ ವಿದ್ಯುತ್ ಕೂಡಲೇ ಸರಿಪಡಿಸಬೇಕು.ಜಿಲ್ಲೆಯಲ್ಲಿ ಸುಮಾರು ದೊಡ್ಡಿ, ತಾಂಡ, ಹಟ್ಟಿ ಮತ್ತು ಕ್ಯಾಂಪ್ ಗಳಿಗೆ ವಿದ್ಯುತ್ ಸಂಪರ್ಕವಿಲ್ಲ, ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹ ಪಡಿಸಿದರು.

ಮಲ್ಲಿಕಾರ್ಜುನ ಹಾವಿನಾಳಮಠ, ರಮೇಶ ಕುಂಬಾರ, ಶರಣು ಬಿಸನಾಳ, ಗಣಪತಿ ಹೂಗಾರ, ಸುರೇಶ ಡೊಂಗರಾಜ್, ಸುರೇಶ ಬಿರಾದಾರ, ಫಯಾಜ ಬಾಗವಾನ, ಜಗದೇವ ರಾಠೋಡ, ಶ್ರೀಮಂತ ತೇಲಿ, ಸಂಗಪ್ಪ ತೇಲಿ, ಸರ್ದಾರ ಡೊಳ್ಳಿ, ಭೀಮರಾಯ ಭಂಟನೂರ, ಸಾಹೇಬಗೌಡ ಬಿರಾದಾರ, ಪರಶುರಾಮ ಹಿರೇಕುರುಬರ, ರಾಜು ಅಂಗಡಿ, ಸಂಜೀವಕುಮಾರ ಜವಳಗಿ, ರಾಯಗೊಂಡ ತಳವಾರ, ನರಸುಗೌಡ ಪಾಟೀಲ, ಮಹೇಶ ಪಾಟೀಲ, ರಾಜಶೇಖರ ಕುಂಬಾರ ಇದ್ದರು.