ಹೆಚ್ಚಿನ ಶುಲ್ಕ ಪಡೆಯುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

| Published : Apr 16 2025, 12:34 AM IST

ಹೆಚ್ಚಿನ ಶುಲ್ಕ ಪಡೆಯುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾದ್ಯಂತ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿದ ಪ್ರವೇಶ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದು ಬಹಳ ಕಷ್ಟಕರವಾಗಿದೆ.

ಹಾವೇರಿ: ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಪ್ರವೇಶ ಶುಲ್ಕ ಪಡೆಯುತ್ತಿರುವುದನ್ನು ಖಂಡಿಸಿ ಕರವೇ ಸ್ವಾಭಿಮಾನಿ ಬಣದ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಸಂಟನೆಯ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಮಾತನಾಡಿ, ಜಿಲ್ಲಾದ್ಯಂತ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿದ ಪ್ರವೇಶ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದು ಬಹಳ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಂದ ಹೆಚ್ಚಿನ ಪ್ರವೇಶ ಶುಲ್ಕ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ಲಿಖಿತವಾದ ಆದೇಶವನ್ನು ಹೊರಡಿಸಿ, ತರಗತಿವಾರು ಎಲ್‌ಕೆಜಿ, ಯುಕೆಜಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಶುಲ್ಕವನ್ನು ಪ್ರಕಟಣೆಯಲ್ಲಿ ಪ್ರಕಟಿಸಿ ನಿಮ್ಮ ವ್ಯಾಪ್ತಿಗೆ ಬರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆದೇಶವನ್ನು ಹೊರಡಿಸಬೇಕು ಎಂದು ಉಪ ನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿ ಸುರೇಶ ಹುಗ್ಗಿ ಹಾಗೂ ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ಬಸವರಾಜ ಇಟ್ಟಿಗುಡಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾದ್ಯಂತ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಪಾಲಕರು ಲಿಖಿತವಾಗಿ ದೂರ ನೀಡಿದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ತಮ್ಮ ತಾಲೂಕಿನ ವ್ಯಾಪ್ತಿಯ ಖಾಸಗಿ ಶಿಕ್ಷಣ ಸಂಸ್ಥೆಯ ಯಾವುದಾದರೂ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕವನ್ನು ಪಡೆಯುತ್ತಿರುವುದು ಕಂಡುಬಂದರೆ ಅಂತಹ ಸಂಸ್ಥೆಯ ಮೇಲೆ ಕ್ರಮ ಜರುಗಿಸುವಂತೆ ಆಯಾ ತಾಲೂಕು ಶಿಕ್ಷಣ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಘಟನೆಯ ಗೀತಾಬಾಯಿ ಲಮಾಣಿ, ಪ್ರಕಾಶ ಪರಪ್ಪಗೌಡ್ರ, ಖಲಂದರ ಯಲೆದಹಳ್ಳಿ, ರಾಜೇಸಾಬ ಮಾನೇಗಾರ, ಗಂಗಾಧರಯ್ಯ ಪಾಟೀಲ, ಪ್ರಕಾಶ ಡೊಂಬರ, ಮಾಲತೇಶ ಬಣಕಾರ, ಯುಸೂಫ ಸೈಕಲಗಾರ, ಶಂಕರ ಬಡಿಗೇರ, ಬಸವರಾಜ ಪಟ್ಟಣಶೆಟ್ಟಿ, ದಾದಾಪೀರ ಮಲ್ಲಾಡದ, ಸನಾವುಲ್ಲಾ ಪುರದಗೇರಿ, ಜ್ಯೋತಿ ಅರ್ಕಸಾಲಿ, ರೇಷ್ಮಾ ಬೀರಬ್ಬಿ, ಚನ್ನವೀರೇಶ ಯುವರಾಜ ಕರಾಠೆ, ಮಹಾವೀರ ಹಳ್ಳಿಯವರ, ಮೇಘನಾ ಎಣ್ಣಿಯವರ, ಶ್ರೀಕಾಂತ ಚೂರಿ, ಅನೀಲ ಬಾರವಕರ ಇತರರು ಇದ್ದರು. ಕೊಲೆ ಯತ್ನದ ಅಪರಾಧಿಗೆ ಶಿಕ್ಷೆ

ಹಾವೇರಿ: ವ್ಯಕ್ತಿಯ ಮೇಲೆ ದೈಹಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಕೋಣನತಂಬಿಗಿ ಗ್ರಾಮದ ದ್ಯಾಮಪ್ಪ ಬಸಪ್ಪ ಮುಗದೂರ ಎಂಬಾತನಿಗೆ ಏಳು ವರ್ಷ ಶಿಕ್ಷೆ ಹಾಗೂ ₹74 ಸಾವಿರ ದಂಡ ವಿಧಿಸಿ ಹಾವೇರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಎನ್. ಅವರು ಇತ್ತೀಚೆಗೆ ತೀರ್ಪು ನೀಡಿದ್ದಾರೆ.ದ್ಯಾಮಪ್ಪ ಬಸಪ್ಪ ಮುಗದೂರ ಹಾಗೂ ಹಲ್ಲೆಯಾದ ವ್ಯಕ್ತಿಯ ಪರಿಚಯಸ್ಥರಾಗಿದ್ದರು. ದ್ಯಾಮಪ್ಪ ಬಸಪ್ಪ ಮುಗದೂರ ಪರಿಚಯದವನ ಮನೆಗೆ ಬಂದು ಹೋಗುತ್ತಿದ್ದನು. ಈ ಮಧ್ಯೆ ದ್ಯಾಮಪ್ಪ ಬಸಪ್ಪ ಮುಗದೂರ ಹಾಗೂ ಪರಿಚಯದವನ ಹೆಂಡತಿಗೆ ಅನೈತಿಕ ಸಂಬಂಧ ಎಂಬ ಸುದ್ದಿ ತಿಳಿದ ಅವನು, ದ್ಯಾಮಪ್ಪ ಬಸಪ್ಪ ಮುಗದೂರ ಮನೆಗೆ ಬರದಂತೆ ಸೂಚನೆ ನೀಡಿದ್ದ. ಆದಾಗ್ಯೂ ಪರಿಚಯಸ್ಥ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಗೆ ಬಂದ ದ್ಯಾಮಪ್ಪ ಬಸಪ್ಪ ಮುಗದೂರನನ್ನು ಚಪ್ಪಲಿಯಿಂದ ಹೊಡೆದ ಕಾರಣ, ಪರಿಚಯಸ್ಥನು ಹೊಳಲ ಗ್ರಾಮದಲ್ಲಿ 2019ರ ಆ. 16ರಂದು ರಾತ್ರಿ ವೇಳೆ ಮನೆಯಲ್ಲಿ ದನಕ್ಕೆ ಮೇವು ಹಾಕಲು ಬಂದಾಗ ದ್ಯಾಮಪ್ಪ ಬಸಪ್ಪ ಮುಗದೂರ ಆತನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಹಾಗೂ ಮಕ್ಕಳು ಮತ್ತು ಹೆಂಡತಿಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ ಬಗ್ಗೆ ದೂರು ದಾಖಲಾಗಿತ್ತು.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಆಗಿನ ಪಿಎಸ್‌ಐ ರಾಜೇಂದ್ರ ನಾಯ್ಕ ಅವರು ತನಿಖೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸಿದ್ಧಾರೂಢ ಗೆಜ್ಜಿಹಳ್ಳಿ ವಾದ ಮಂಡಿಸಿದ್ದರು.