ಕನ್ನಡಪ್ರಭ ವಾರ್ತೆ ಮುಧೋಳ
ದೇಶದಲ್ಲಿ ಕಾಡುತ್ತಿರುವ ಸಮಾಜ ವಿದ್ರೋಹಿ ಚಟುವಟಿಕೆಗಳು ಮತ್ತು ದೇಶದಲ್ಲಿ ಮಾರಕ ವಾಗುತ್ತಿರುವ ಲವ್ ಜಿಹಾದ್, ಮತಾಂತರ, ಗೋ ಹತ್ಯೆಯಂತಹ ಗಂಭೀರ ಸಮಸ್ಯೆಗಳ ಕುರಿತು ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ, ದುರ್ಗಾ ವಾಹಿನಿ ಮುಧೋಳ ವತಿಯಿಂದ ಮುಧೋಳ ತಹಸೀಲ್ದಾರ ಮೂಲಕ ಶುಕ್ರವಾರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಗುರುಪಾದ ಕುಳಲಿ ಮಾತನಾಡಿ, ದೇಶದ ಸಾಮಾಜಿಕ ವ್ಯವಸ್ಥೆ ಹಾಳು ಮಾಡುತ್ತಿರುವ ವಿಕೃತ ಜಿಹಾದಿ ಮನಸ್ಥಿತಿಯು ದೇಶದ ಆಂತರಿಕ ಭದ್ರತೆ ಮತ್ತು ಸಾಮರಸ್ಯಕ್ಕೆ ಬಹುದೊಡ್ಡ ಅಪಾಯಕಾರಿಯಾಗಿದೆ. ದೇಶಾದ್ಯಂತ ವರದಿಯಾದ ವಿವಿಧ ಪ್ರಕರಣಗಳಲ್ಲಿ ಪುರುಷರ ಜೊತೆಗೆ ಮಹಿಳೆಯರು ಈ ವಿಕೃತ ಜಿಹಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಇಂತಹ ಷಡ್ಯಂತ್ರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದರು.ಮಾತೃಶಕ್ತಿ ವಿಭಾಗ ಸಂಯೋಜಕಿ ವೀಣಾ ಮಠದ ಮಾತನಾಡಿ, ಹಿಂದೂ ಹೆಣ್ಣು ಮಕ್ಕಳನ್ನು ಜಿಹಾದಿ ಮುಸಲ್ಮಾನರು ಅಸಭ್ಯವಾಗಿ ವರ್ತಿಸಿ ಅವರಿಗೆ ಗೊತ್ತಿಲ್ಲದೆ ಅವರ ಫೋಟೋ ಮತ್ತು ವಿಡಿಯೋ ತೆಗೆದು ಹೆದರಿಸಿ ಬಲವಂತವಾಗಿ ಮದುವೆಯಾಗಿ ಮತಾಂತರಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಹುಬ್ಬಳ್ಳಿಯ ಮಸಲ್ ಫ್ಯಾಕ್ಟರಿ ಜಿಮದ್ಮೂಲಕ ಹಿಂದೂ ಹೆಣ್ಮಕ್ಕಳನ್ನ ಗುರಿಯಾಗಿಸಿ ಲವ್ ಜಿಹಾದ್ ನಡೆಸುವ ಅನೇಕ ಪ್ರಕರಣ ಬೆಳಕಿಗೆ ಬಂದಿವೆ ಎಂದು ಹೇಳಿದರು.
ವಿಹಿಂಪ ಜಿಲ್ಲಾ ಕಾರ್ಯದರ್ಶಿ ಬಸವರಾಜ ಮಹಾಲಿಂಗೇಶ್ವರಮಠ ಮಾತನಾಡಿ, ರಾಷ್ಟ್ರ ವಿರೋಧಿ ಮತ್ತು ಅಪರಾಧ ಮನೋಭಾವದ ಜಿಹಾದಿ ಮನಸ್ಥಿತಿವುಳ್ಳವರನ್ನ ಗುರುತಿಸಿ ಅವರ ವಿರುದ್ದ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಪ್ರಮುಖರಾದ ಮಲ್ಲಿಕಾರ್ಜುನ ಕಾಬಿ ,ಗಣೇಶ ರಾಠೋಡ ಸಾಂದರ್ಭಿಕವಾಗಿ ಮಾತನಾಡಿದರು.
ಈ ಸಮಯದಲ್ಲಿ ಮಾತೃಶಕ್ತಿ ಜಿಲ್ಲಾ ಸಂಯೋಜಕಿ ದಾನಮ್ಮ ಚನ್ನಯ್ಯಗೋಳ, ಪ್ರಮುಖರಾದ ಸುರೇಶ ಭಸ್ಮೆ, ಮಾನಿಂಗ ಬಂಡಿ, ದಶರಥ ರಜಪೂತ, ಮಹೇಶ ಪಾಟೀಲ, ಸಂಗಮೇಶ ಹೂಗಾರ, ಸದಾ ಭಾಗಿ, ಆನಂದ ನಿಂಬಾಳಕರ, ಆಕಾಶ ಘೋರ್ಪಡೆ, ಆಶಾ ಶೆಟ್ಟಿ, ಮಾದು ಕಡಕೋಳಮಠ, ಸವಿತಾ ವಜ್ರಮಟ್ಟಿ ಇನ್ನೂ ಮುಂತಾದ ಕಾರ್ಯಕರ್ತರು ಇದ್ದರು.