ಸಾರಾಂಶ
ಸವಣೂರು: ಕಟ್ಟಡ ಕಾರ್ಮಿಕರು ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸೌಲಭ್ಯಗಳನ್ನು ಎಲ್ಲ ಕಟ್ಟಡ ಕಾರ್ಮಿಕರಿಗೂ ಒದಗಿಸಿಕೊಡುವಂತೆ ಡಿವೈಎಫ್‌ಐ ನೇತೃತ್ವದಲ್ಲಿ ಕಾರ್ಮಿಕರು ತಹಸೀಲ್ದಾರ್ ಭರತರಾಜ ಕೆ.ಎನ್. ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
2022- 2023ನೇ ಸಾಲಿನಲ್ಲಿ ಸೇವಾ ಸಿಂಧು ಮೂಲಕ ಮದುವೆ ಸಹಾಯಧನಕ್ಕೆ ಸಲ್ಲಿಸಿರುವ ಫಲಾನುಭವಿಗಳಿಗೆ ಸಹಾಯಧನ ಮಂಜೂರು ಆಗಿದ್ದನ್ನು ತಡೆ ಹಿಡಿಯಲಾಗಿದೆ. ಮಂಜೂರಾದ ಫಲಾನುಭವಿಗೆ ಮದುವೆ ಸಹಾಯ ಧನವನ್ನು ಕೂಡಲೇ ವಿಲೇವಾರಿ ಮಾಡಬೇಕು. ರದ್ದಾದ ಕಾರ್ಮಿಕ ಕಾರ್ಡನ್ನು ಮರುಪರಿಶೀಲನೆ ಮಾಡಲು ಅಕ್ಷೇಪಣಾ ಅರ್ಜಿ ಕೊಟ್ಟಿರುವ ಫಲಾನುಭವಿಗಳ ಅರ್ಜಿಯನ್ನು ಪರಿಶೀಲನೆ ಮಾಡಿ ಅರ್ಹ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಿಸಬೇಕು. ಮಹಿಳಾ ಕಾರ್ಮಿಕರು ನವೀಕರಣಕ್ಕೆ ಸಲ್ಲಿಸಿರುವ ಕಾರ್ಡ್‌ಗಳನ್ನು ಕೂಡಲೇ ನವೀಕರಿಸಬೇಕು. ಅರ್ಹ ಕಾರ್ಮಿಕರಿಗೆ ಅನ್ಯಾಯವಾಗದಂತೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.ತಾಲೂಕಿನ ಕಾರ್ಮಿಕ ನಿರೀಕ್ಷಕರು ವೇಳೆಗೆ ಸರಿಯಾಗಿ ನವೀಕರಣ ಮಾಡದೆ, ಸುಮಾರು ಎಂಟು ತಿಂಗಳಿನಿಂದ ಕಾರ್ಮಿಕರನ್ನು ಅಲೆದಾಡಿಸುತ್ತಿದಾರೆ. ಅರ್ಹ ಕಾರ್ಮಿಕರು ಇದ್ದರೂ ಕಾರ್ಡ್ ಮಂಜೂರಿ ಮಾಡುತ್ತಿಲ್ಲ. ಇದರಿಂದ ಕಾರ್ಮಿಕರಿಗೆ ತೊಂದರೆ ಆಗುತ್ತಿದೆ. ಇದನ್ನು ಕೂಡಲೇ ಬಗೆಹರಿಸಬೇಕು. ತಾಲೂಕಿನ ಕಾರ್ಮಿಕ ಇಲಾಖೆ ನೀರಿಕ್ಷಕರು ಮತ್ತು ಸಿಬ್ಬಂದಿ ನಿಯಮಾನುಸಾರ ಅರ್ಹ ಕಾರ್ಮಿಕರನ್ನು ಸ್ಥಾನಿಕವಾಗಿ ಗುರುತಿಸಿ, ಕಾರ್ಮಿಕರಿಗೆ ಸಿಗುವಂತ ಸೌಲಭ್ಯವನ್ನು ನೀಡುತ್ತಿಲ್ಲ ಹಾಗೂ ಅನರ್ಹ ಕಾರ್ಮಿಕರಿಗೆ ಕಾರ್ಮಿಕ ಕಾರ್ಡನ್ನು ವಿತರಿಸಿ, ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟವರ ಮೇಲೆ ಶಿಸ್ತಿನ ಕ್ರಮ ಕೈಕೊಳ್ಳಬೇಕು. ವೈದ್ಯಕೀಯ ವೆಚ್ಚವನ್ನು ಮತ್ತು ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಅನ್ನು 2021ರಿಂದ ಇಲ್ಲಿಯವರೆಗೂ ಕೊಟ್ಟಿಲ್ಲ. ಅವುಗಳನ್ನು ಕೂಡಾ ಕೂಡಲೇ ನೀಡಬೇಕು. ಇಲ್ಲದೇ ಹೋದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಸಲಾಮಸಾಬ ಮುಲ್ಲಾ, ನಿಂಗನಗೌಡ ದೊಡ್ಮನಿ, ಭವಾನಿ ಗುಡಗೇರಿ, ಮೀನಾಕ್ಷಿ ಸೊರಟೂರ, ಚನ್ನವೀರಯ್ಯ ಹಿರೇಮಠ, ಇರ್ಶಾದ ಮೋನಾಶಿ, ಮಂಜುನಾಥ ಮೆಳ್ಳಳ್ಳಿ, ರಿಯಾಜಹ್ಮದ ಕೋಟೆನವರ, ರಿಯಾಜಅಹ್ಮದ ಮರ್ಪಾಜಿ, ಹಜರತಲ್ಲಿ ನದಾಫ ಇತರರು ಇದ್ದರು.ಮಹಿಳೆಯರು ಪ್ರಗತಿಪರ ಆಲೋಚನೆ ಮೈಗೂಡಿಸಿಕೊಳ್ಳಲಿರಾಣಿಬೆನ್ನೂರು: ಸಾಮಾಜಿಕ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮಹಿಳೆಯರು ಕೀಳರಿಮೆ ತೊರೆದು ಪ್ರಗತಿಪರ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹಾವೇರಿ ವಿಶ್ವವಿದ್ಯಾಲಯ ಕುಲಸಚಿವೆ ಪ್ರೊ. ರೇಣುಕಾ ಮೇಟಿ ತಿಳಿಸಿದರು.ನಗರದ ಮುಂಬೈ ಕರ್ನಾಟಕ ಎಜ್ಯುಕೇಶನ್ ಟ್ರಸ್ಟ್‌ನ ಬಿಇಡಿ ಕಾಲೇಜಿನಲ್ಲಿ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನೂತನ ವಿದ್ಯಾರ್ಥಿಗಳ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಮಹಿಳೆಯರು ಲಭ್ಯ ಅವಕಾಶ ಬಳಸಿಕೊಂಡು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕು ಎಂದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಖೋಖೋ ಫೆಡರೇಶನ್ ಅಧ್ಯಕ್ಷ ಶಿವಪ್ರಸಾದ್ ಎಲಿ ಮಾತನಾಡಿದರು.ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಆರ್.ಎಸ್.ಎಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಾ. ಡಾ. ಬಿ.ಬಿ. ಚಳಕೊಪ್ಪ, ಶಿವಪ್ಪ ಎಸ್.ಜಿ. ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ, ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.