ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾದ ಉಮೇಶ ಚನ್ನುಪಾಟೀಲ ಹಾಗೂ ಶಿವಕುಮಾರ ದೊಡ್ಡೂರ ಅವರನ್ನು ಉಚ್ಚಾಟಿಸಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಚನ್ನು ಪಾಟೀಲ ಅಭಿಮಾನಿ ಬಳಗದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಚನ್ನು ಪಾಟೀಲ ಅಭಿಮಾನಿ ಬಳಗದಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಗಜೇಂದ್ರಗಡಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾದ ಉಮೇಶ ಚನ್ನುಪಾಟೀಲ ಹಾಗೂ ಶಿವಕುಮಾರ ದೊಡ್ಡೂರ ಅವರನ್ನು ಉಚ್ಚಾಟಿಸಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಚನ್ನು ಪಾಟೀಲ ಅಭಿಮಾನಿ ಬಳಗದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಈ ವೇಳೆ ಶಿವಕುಮಾರ ದೊಡ್ಡೂರ ಮಾತನಾಡಿ, ಉಮೇಶ ಚನ್ನು ಪಾಟೀಲ ಹಾಗೂ ಅವರ ಕುಟುಂಬ ಪಕ್ಷಕ್ಕಾಗಿ ಕಳೆದ ೩೦ ವರ್ಷಗಳಿಂದ ದುಡಿಯುತ್ತಾ ಬಂದಿದೆ. ಆದರೆ, ಯಾವುದೇ ನೋಟಿಸ್ ನೀಡಿದೆ ಉಮೇಶ ಅವರನ್ನು ಉಚ್ಚಾಟಿಸಿದ್ದು ಈ ಆದೇಶ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.ಇದಕ್ಕೂ ಮುನ್ನ ಪಟ್ಟಣದ ಎಪಿಎಂಸಿಯಲ್ಲಿನ ಸಿದ್ದಿವಿನಾಯಕ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಇಲ್ಲಿನ ಕಾಲಕಾಲೇಶ್ವರ ವೃತ್ತ ತಲುಪಿದ ಬಳಿಕ ಮಾನವ ಸರಪಳಿ ನಿರ್ಮಿಸಿ ಉಚ್ಚಾಟನೆ ಆದೇಶ ಹಿಂಪಡೆಯುಂವತೆ ಆಗ್ರಹಿಸಿದರು.
ಬಿಜೆಪಿ ಯುವ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಮುಖಂಡ ಅರುಣಕುಮಾರ ಮಠದ, ಉಮೇಶ ಚನ್ನುಪಾಟೀಲ ಹಾಗೂ ಶಿವಕುಮಾರ ದೊಡ್ಡರ ಬಿಜೆಪಿ ಸಾಮಾನ್ಯ ಕಾರ್ಯಕರ್ತರಾಗಿದ್ದಾರೆ. ಅವರನ್ನು ಉಚ್ಚಾಟಿಸಲು ರೋಣ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ ವಕ್ಕರು ಅವರಿಗೆ ಯಾವ ಅಧಿಕಾರ ನೀಡಿದೆ ಎಂದು ಪ್ರಶ್ನಿಸಿದರು. ಕುಮಾರ ಸ್ಟ್ಯಾಂಪಿನ್ ಹಾಗೂ ಸಿದ್ದಯ್ಯ ಕಾರಡಗಿಮಠ ಮಾತನಾಡಿದರು.ಈ ವೇಳೆ ಅರುಣಕುಮಾರ ಮಠದ, ಸಂಗಯ್ಯ ಹಿರೇಮಠ, ಶೇಖರಗೌಡ ಪಾಟೀಲ, ಮಲ್ಲಪ್ಪ ಪಲ್ಲೇದ, ಸಿದ್ದಯ್ಯ ಕಾರಡಗಿಮಠ, ಎ.ಎಫ್. ಪಾಯಪ್ಪಗೌಡರ, ರಾಘವೇಂದ್ರ ಕಾರಡಗಿಮಠ, ಮೌನೇಶ ಬಡಿಗೇರ, ಬಸವರಾಜ ಮಳಗಿ, ಪರಸಪ್ಪ ಕುಂಕದ, ರವಿ ಕೋಣನ್ನವರ, ಪ್ರಕಾಶಗೌಡ ಪಾಟೀಲ, ಶೇಖಪ್ಪ ಅಸೂಟಿ, ಮಂಜುನಾಥ ಜಾಲಿಹಾಳ, ಸಂತೋಷ ಹೊಸಮಠ, ಗಿರಿಮಲ್ಲಯ ಬೀಳಗಿ, ಹನುಮಂತ ಬಾಲಣ್ಣವರ, ಕಳಕಯ್ಯ ಕಾರಡಗಿಮಠ ಸೇರಿ ಇತರರು ಇದ್ದರು.