ಹಾಲು ಖರೀದಿ ಧರ ಇಳಿಕೆ ಆದೇಶ ಹಿಂಪಡೆಯಲು ಆಗ್ರಹ

| Published : Jul 09 2024, 12:48 AM IST

ಹಾಲು ಖರೀದಿ ಧರ ಇಳಿಕೆ ಆದೇಶ ಹಿಂಪಡೆಯಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲು ಉತ್ಪಾದಕರು ಪ್ರತಿ ಲೀಟರ್‌ಗೆ ೮ ರಿಂದ ೯ ರೂ ನಷ್ಟ ಅನುಭವಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ೮ ತಿಂಗಳಿಂದ ಬಂದಿಲ್ಲ ತೀವ್ರ ಬರಗಾಲದಿಂದ ತತ್ತರಿಸಿರುವ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಹಾಲು ಖರೀದಿ ದರ ೨ ರು. ಇಳಿಕೆ ಆದೇಶ ವಾಪಸ್‌ ಪಡೆಯಬೇಕು ಹಾಗೂ ಹಾಲಿನ ಬಾಕಿ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೋಚಿಮುಲ್‌ ಒಕ್ಕೂಟ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದರು.ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಸುಮಾರು ೧೪೯೦೦ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ೨೨.೫ಲಕ್ಷ ಸದಸ್ಯರಿಂದ ಪ್ರತಿದಿನ ೧ ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದರು.

ಹಾಲು ಉತ್ಪಾದನೆ ವೆಚ್ಚ ಹೆಚ್ಚಳ

ಆದರೆ ದಿನೇದಿನೇ ಹೆಚ್ಚುತ್ತಿರುವ ಪಶು ಆಹಾರ ಬೆಲೆ ಏರಿಕೆ ಇನ್ನಿತರೆ ಕಾರಣಗಳಿಂದ ಲೀಟರ್ ಹಾಲಿನ ಉತ್ಪಾದನೆ ವೆಚ್ಚವು ಸರಿ ಸುಮಾರು ೪೫ ರೂ. ಆಗಿದ್ದು ಜಿಲ್ಲಾ ಒಕ್ಕೂಟ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ದರ ಸೇರಿ ೩೬ ರೂ ಉತ್ಪಾದಕರಿಗೆ ಪಾವತಿಸಲಾಗುತ್ತಿದ್ದು ಇದು ಯಾವುದಕ್ಕೂ ಸಾಲದಾಗಿದೆ ಎಂದು ಆರೋಪಿಸಿದರು.

ಹಾಲು ಉತ್ಪಾದಕರು ಪ್ರತಿ ಲೀಟರ್‌ಗೆ ೮ ರಿಂದ ೯ ರೂ ನಷ್ಟ ಅನುಭವಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ೮ ತಿಂಗಳಿಂದ ಬಂದಿಲ್ಲ ತೀವ್ರ ಬರಗಾಲದಿಂದ ತತ್ತರಿಸಿರುವ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ರೈತರು ಹೈನುಗಾರಿಕೆಯಿಂದಲು ದೂರ ಉಳಿಯುವಂತಾಗಿದೆ. ಆದ್ದರಿಂದ ಕೋಚಿಮುಲ್ ಹಾಲಿನ ಧರ ಖಡಿತ ಮಾಡಿದ ಆದೇಶ ವಾಪಸು ಪಡೆಯಬೇಕು ಎಂದು ಒತ್ತಾಯಿಸಿದರು.ನುಕ್ಕನಹಳ್ಳಿ ಶ್ರೀರಾಮ್ ಮಾತನಾಡಿ, ಸಹಕಾರಿ ತತ್ವದಲ್ಲಿ ಬಲಗೊಂಡಿರುವ ನಂದಿನಿ ಸಂಸ್ಥೆಯ ಮಾರುಕಟ್ಟೆಗಳನ್ನು ವಿಸ್ತರಿಸಿ, ಹಾಲು ಉತ್ಪಾದಕರನ್ನು ಸಂರಕ್ಷಿಸಿ, ಹೈನುಗಾರಿಕೆ ಉಳಿಸಬೇಕಾಗಿದ್ದ ಸರ್ಕಾರವೇ ಈ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಯಗಳಿಗೆ ಮತ್ತು ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಪ್ರೋತ್ಸಾಹ ಧನ ೫ ರು.ಗಳಿಂದ ೧೦ ರು.ಗಳಿಗೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಲೀಟರ್‌ಗೆ ₹50 ನಿಗದಿ ಮಾಡಲಿ

ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸು ಪ್ರಕಾರ ಲೀಟರ್ ಹಾಲಿಗೆ ೫೦ ರುಪಾಯಿ ಬೆಲೆ ನಿಗದಿ ಮಾಡಬೇಕು. ಪ್ರತಿ ಜಿಲ್ಲೆಗೊಂದು ಕೆ.ಎಂ.ಎಫ್ ನಿಂದ ಹಾಲು ಉತ್ಪಾದಕರ ಮಕ್ಕಳಿಗೆ ವಿದ್ಯಾರ್ಥಿಗಳ ವಸತಿ ನಿಲಯ ಪ್ರಾರಂಭಿಸಬೇಕು, ಪಶು ಆಹಾರಗಳ ಗುಣಮಟ್ಟ ಕಾಯ್ದುಕೊಳ್ಳಬೇಕು. ಪಶು ಆಹಾರಗಳ ಬೆಲೆ ಇಳಿಸಿ ಹಾಗೂ ಬೆಲೆ ಏರಿಕೆ ನಿಯಂತ್ರಣ ಮಾಡಲು ಕೆ.ಎಂ.ಎಫ್. ನಿಂದ ಸಬ್ಸಿಡಿಯನ್ನು ಹೆಚ್ಚಿಸಬೇಕು ಎಂದರು.ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಮಾರುಕಟ್ಟೆಯನ್ನು ವಿಸ್ತರಿಸಬೇಕು. ಹಾಲಿನ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳ ಮೇಲಿನ ಜಿ.ಎಸ್.ಟಿ. ತೆರಿಗೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಬೇಕು. ಹೈನುಗಾರಿಕೆಗೆ ಸರ್ಕಾರ ಸಬ್ಸಿಡಿ ಸಹಿತ ಸಾಲವಿತರಣೆ ನೀಡಬೇಕು ಕೋಚಿಮುಲ್ ಒಕ್ಕೂಟದಲ್ಲಿ ನೇಮಕಾತಿ, ಟೆಂಡರ್‌ಗಳ ಹೆಸರಿನಲ್ಲಿ ಹಾಗೂ ಇತರೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ತಡೆಗಟ್ಟಬೇಕು ಮತ್ತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಅಲಹಳ್ಳಿ ವೆಂಕಟೇಶಪ್ಪ, ರಾಮರೆಡ್ಡಿ, ನಾರಾಯಣಸ್ವಾಮಿ, ಶ್ರೀನಿವಾಸ್, ರಾಜೇಶ್, ಚಿನ್ನಮ್ಮ, ರಾಜೇಂದ್ರ, ಮುನಿರತ್ನಮ್ಮ, ವಿವಿಧ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರಾದ ವಾನರಾಶಪ್ಪ, ಸರೋಜಮ್ಮ, ಮಂಜುನಾಥ್, ಚಂದ್ರಪ್ಪ, ಭೈರಪ್ಪ, ಮಂಜುನಾಥ್, ಸೂರ್ಯನಾರಾಯಣಪ್ಪ ಹಸಾಳ ಮಂಜುನಾಥ್, ನೌಕರರ ಸಂಘದ ಅಧ್ಯಕ್ಷ ಡಿ. ಶಿವರುದ್ರಯ್ಯ, ಕಾರ್ಯದರ್ಶಿ ಮಂಜುನಾಥ್, ಸದಸ್ಯರಾದ ಕೆಂಪಣ್ಣ, ಸುಬ್ಬಣ್ಣ, ಇದ್ದರು.