ಸಾರಾಂಶ
ರಾಣಿಬೆನ್ನೂರು: ಕಳೆದ ಸಾಲಿನ ಬೆಳೆ ವಿಮೆ ಪರಿಹಾರದ ಬಾಕಿ ಹಣ ಪಾವತಿಗೆ ಇಲ್ಲಸಲ್ಲದ ನೆಪ ಹೇಳುತ್ತಿರುವ ರಿಲಾಯನ್ಸ್ ಇನ್ಸೂರನ್ಸ್ ಕಂಪನಿ ಕ್ರಮ ಖಂಡಿಸಿ ರೈತರು ಶುಕ್ರವಾರ ತಾಲೂಕಿನ ಅಂತರವಳ್ಳಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಬೆಳೆ ವಿಮೆ ಪರಿಹಾರದ ಬಾಕಿ ವಿಚಾರವಾಗಿ ಕಳೆದ ತಿಂಗಳಿನಿಂದ ಹಂತ ಹಂತವಾಗಿ ತಾಲೂಕಿನ ಗ್ರಾಪಂ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದ್ದ ಜಿಲ್ಲಾಡಳಿತ ಶಿಗ್ಗಾಂವಿ-ಸವಣೂರ ವಿಧಾನಸಭೆಯ ಉಪ ಚುನಾವಣೆಯಲ್ಲಿಯೇ ಮಗ್ನವಾಗಿರುವುದು ಖೇದಕರ ಸಂಗತಿಯಾಗಿದೆ. ಇದೇ ರೀತಿ ರೈತರನ್ನು ಕಡೆಗಣಿಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಪರಿಣಾಮವನ್ನು ಜಿಲ್ಲಾಡಳಿತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾಗಪ್ಪ ಕರಡಿ, ಚಂದ್ರಪ್ಪ ಕೂಸಗೂರ, ನಾಗನಗೌಡ ಜೀವನಗೌಡ್ರ, ಶಂಕ್ರಗೌಡ ಗೊಂಬಿಗೌಡ್ರ, ಕುಬೇರಪ್ಪ ಹೂಲಿಹಳ್ಳಿ, ವೀರನಗೌಡ ಮತ್ತೂರು, ಉಜ್ಜನಗೌಡ ಮುದಿಗೌಡ್ರ, ನಾಗರಾಜ ಕುರುಬರ, ಬಸವರಾಜ ನಿಟ್ಟೂರು, ಮಲ್ಲೇಶ ಕುರುಬರ, ಚಂದ್ರಪ್ಪ ಏಡಗೋಡಿ, ಇಬ್ರಾಹಿಂಸಾಬ ಕಿಲ್ಲೇದಾರ, ಮೌನೇಶ ಕರೂರು, ಕೃಷ್ಣಪ್ಪ ದೇಶಿ, ಪಾಂಡಪ್ಪ ಸುಂಕಾಪುರ, ಪಿ.ಎನ್. ಓದೇಗೌಡ್ರ, ಚಂದ್ರಪ್ಪ ಎಡಗೋಡಿ, ರಾಜು ಜೀವನಗೌಡ್ರ, ಬಸವರಾಜ ಮುಗದೂರ, ಮಹೇಶ್ವರಪ್ಪ ಮುಗನೂರ, ಯಂಕಪ್ಪ ಹೊಸಳ್ಳಿ, ಯಂಕಪ್ಪ ತಳವಾರ, ವೆಂಕಪ್ಪ ನಾಗರಡ್ಡಿ, ಹನುಮಂತಗೌಡ ಓಲೇಕಾರ, ಮಲಕಪ್ಪ ಲಿಂಗದಹಳ್ಳಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.