ಸಾರಾಂಶ
ರಬಕವಿ-ಬನಹಟ್ಟಿ : ಕ್ಷುಲ್ಲಕ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದು ಘೋರ ಘಟನೆವಾಗಿದ್ದು, ನಟ ದರ್ಶನ ಕಾನೂನು ಕೈಗೆ ತೆಗೆದುಕೊಂಡಿದ್ದು ಖಂಡನೀಯ. ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಬಕವಿ-ಬನಹಟ್ಟಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈಶ್ವರ ಕಾಡದೇವರು ಅಗ್ರಹಿಸಿದರು.ರಬಕವಿ ಬನಹಟ್ಟಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರಕರಣದ ವಿರುದ್ಧ ಮತ್ತು ಮಾನವೀಯತೆಯ ಸೋಂಕಿಲ್ಲದ ನಟ ದರ್ಶನ್ ಮತ್ತಿತರರಿಗೆ ಅತ್ಯುಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಕ್ಷುಲ್ಲಕ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಅಜ್ಞಾತ ಪ್ರದೇಶದಲ್ಲಿ ಕೂಡಿ ಹಾಕಿ ದಿನವಿಡೀ ಚಿತ್ರಹಿಂಸೆ ಕೊಟ್ಟು ಪ್ರಾಣ ತೆಗೆದಿರುವುದು ಖಂಡನೀಯ ಎಂದರು. ದುಂಡಯ್ಯ ಕಾಡದೇವರ ಮಾತನಾಡಿ ದರ್ಶನ್ ಸಿನಿಮಾಗಳಲ್ಲಿ ಮಾತ್ರ ಆದರ್ಶ ವ್ಯಕ್ತಿ. ಆದರೆ, ನಿಜ ಜೀವನದಲ್ಲಿ ಭಿನ್ನವಾದ ವ್ಯಕ್ತಿ. ರೇಣುಕಾಸ್ವಾಮಿಯ ತಂದೆ ತಾಯಿಗಳ ಮುಪ್ಪಿನ ಕಾಲದ ನೋವು ನೋಡಲು ಬೇಸರವಾಗುತ್ತದೆ.
ಪತ್ನಿ ಗರ್ಭಿಣಿ, ಇದು ನಿಜಕ್ಕೂ ಘೋರ ಅನ್ಯಾಯ. ರಾಜ್ಯದಲ್ಲಿ ಇಂಥ ಅನೇಕ ಘಟನೆಗಳು ನಡೆದಿದ್ದು, ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.ಮಹಾದೇವ ಮಠದ ಮಾತನಾಡಿ, ಎ೧ ಆಗಿದ್ದ ಆರೋಪಿ, ಎ೨ ಆಗಿದ್ದಾರೆ. ಗೃಹಮಂತ್ರಿ ದರ್ಶನ್ ಪಾತ್ರದ ಬಗ್ಗೆ ತಿಳಿದುಕೊಳ್ಳಬೇಕು. ಕಾನೂನಿನ ಅನ್ವಯ ಕಠಿಣ ಶಿಕ್ಷೆ ಆಗಲೇಬೇಕು. ಅವರಿಗೆ ಜೀವಾವಧಿ ಶಿಕ್ಷೆ ಕೊಡುವ ಮೂಲಕ ಮೃತನ ಮನೆತನಕ್ಮೆ ನ್ಯಾಯ ಕೊಡಬೇಕು. ಈ ಪ್ರಕರಣವನ್ನು ಲಗುವಾಗಿ ಪರಿಗಣಿಸಿದರೆ ರಾಜ್ಯದಲ್ಲಿ ಪ್ರತಿಭಟನೆ ಪ್ರಾರಂಭ ಆಗುತ್ತವೆ ಎಂದು ಎಚ್ಚರಿಸಿದರು.
ದರ್ಶನ್ ಅಭಿಮಾನಿಗಳಿಗೆ ಈಗ ಅವರ ವಿಕೃತಿ ಗೊತ್ತಾಗಿದೆ. ಅಂಧಾಭಿಮಾನಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪ್ರಚಾರಕ ದರ್ಶನ್ ಅವರ ಬಳಿ ಹಣ ಇದೆ, ಜನ ಇದ್ದಾರೆ. ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಬಿಡಬಾರದು ಎಂದು ಅವರು ಅಗ್ರಹಿಸಿದರು.ಈ ವೇಳೆ ಬಸಯ್ಯ ಹಿರೇಮಠ, ಶಿವರುದ್ರಯ್ಯ ಕಾಡದೇವರ, ಶಂಕರ ಅಂಗಡಿ, ಬಾಳಯ್ಯ ಪೂಜಾರಿ, ಚನಬಸಯ್ಯ ಮಠಪತಿ, ಮಲಕಯ್ಯ ಬಂಗಿ, ಬಸಯ್ಯ ಕತ್ತಿ, ಈರಯ್ಯ ವಿಭೂತಿಮಠ, ಅಂದಾನಯ್ಯ ಕಾಡದೇವರ, ವಸ್ತ್ರದ ಬಸಯ್ಯ, ಕಾಡಯ್ಯ ಕಾಡದೇವರ, ಗುರುಪಾದಯ್ಯ ಕಾಡದೇವರ, ಸಿದ್ದಯ್ಯ ಹಿರೇಮಠ, ವಿಜಯಕುಮಾರ ಆಲಬಾಳ, ಮಹಾಂತಯ್ಯ ಮಠಪತಿ, ಚಿದಾನಂದ ಹಿರೇಮಠ, ಅಕ್ಷಯ ಹಿರೇಮಠ, ಗುರುಲಿಂಗಯ್ಯ ಮಠಪತಿ, ಮುರುಗಯ್ಯ ಸ್ವಾಮಿ, ಸೋಮಯ್ಯ ಮಠದ ಸೇರಿದಂತೆ ಅನೇಕರಿದ್ದರು.
ಸ್ಟಾರ್ ಪಟ್ಟಕ್ಕೆ ಏರಿದವರು ಕಾನೂನು ಕೈಗೆ ತೆಗೆದುಕೊಳ್ಳಬಹುದು. ದುಡ್ಡಿದೆ ಎಂಬ ದುರಹಂಕಾರ ಮುರಿಯಲು ನಾವು ಎಂಥದೇ ಹೋರಾಟಕ್ಕೂ ಹಿಂಜರಿಯಲ್ಲ. ಪೊಲೀಸರು, ಗೃಹ ಮಂತ್ರಿಗಳು ದುರಹಂಕಾರಿ ದರ್ಶನ್ ಮತ್ತವರ ತಂಡವನ್ನು ಉಳಿಸುವ ಪ್ರಯತ್ನ ಮಾಡಿದರೆ ನಮ್ಮ ಹೋರಾಟ ತೀವ್ರವಾಗುತ್ತದೆ. ದರ್ಶನ್ ಅಭಿಮಾನಿ ಸಂಘವನ್ನ ವಿಸರ್ಜನೆ ಮಾಡಿ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿಸಬೇಕು.
ಈಶ್ವರ ಕಾಡದೇವರ, ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷಫೋಟೊ-೧೪ಆರ್‌ಬಿಕೆ೧/ ರಬಕವಿ-ಬನಹಟ್ಟಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಹಸೀಲ್ದಾರ್ ಕಚೇರಿಗೆ ತೆರಳಿ ರೇಣುಕಾಸ್ವಾಮಿ ಸಾವು ಪ್ರಕರಣದಲ್ಲಿ ನಟ ದರ್ಶನ್ ಮೇಲೆ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು.