ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುವೆ

| Published : Mar 11 2024, 01:17 AM IST

ಸಾರಾಂಶ

ದಂತ ವೈದ್ಯಕೀಯ, ಅಲೈಡ್ ಕಾಲೇಜು, ಹಿಮ್ಸ್ ಕಟ್ಟಡಕ್ಕೆ ಸೋಲರ್ ವ್ಯವಸ್ಥೆ, ಏರ್ ಆ್ಯಂಬ್ಯುಲೆನ್ಸ್‌ ಹಾಗೂ ಉತ್ತಮ ಕ್ರೀಡಾಂಗಣ ಸೇರಿ ೫ ಬೇಡಿಕೆಗಳನ್ನು ಸರ್ಕಾರದ ಗಮನ ಸೆಳೆದು ಈಡೇರಿಸುವ ಕೆಲಸ ಮಾಡುವುದಾಗಿ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ದಂತ ವೈದ್ಯಕೀಯ, ಅಲೈಡ್ ಕಾಲೇಜು, ಹಿಮ್ಸ್ ಕಟ್ಟಡಕ್ಕೆ ಸೋಲರ್ ವ್ಯವಸ್ಥೆ, ಏರ್ ಆ್ಯಂಬ್ಯುಲೆನ್ಸ್‌ ಹಾಗೂ ಉತ್ತಮ ಕ್ರೀಡಾಂಗಣ ಸೇರಿ ೫ ಬೇಡಿಕೆಗಳನ್ನು ಸರ್ಕಾರದ ಗಮನ ಸೆಳೆದು ಈಡೇರಿಸುವ ಕೆಲಸ ಮಾಡುವುದಾಗಿ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಮುದಾಯ ಭವನದಲ್ಲಿ ಜಿಲ್ಲಾ ಹಿರಿಯ ನಾಗರೀಕರ ವೇದಿಕೆ ಮತ್ತು ಭಾರತೀಯ ವೈದ್ಯರ ಸಂಘ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ, ಜನಪ್ರಿಯ ಆಸ್ಪತ್ರೆ, ಹಾಸನಾಂಬ ಡೆಂಟಲ್ ಕಾಲೇಜು, ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ, ಶ್ರೀ ಸ್ವಾಮಿ ವಿವೇಕಾನಂದ ಯೂತ ಮೂವ್ ಮೆಂಟ್ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಸಮಾರಂಭ ಹಾಗೂ ತಜ್ಞ ವೈದ್ಯರಿಂದ ಸಾಮಾನ್ಯ ಉಚಿತ ವೈದ್ಯಕೀಯ ತಪಾಸಣೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಕ್ಯಾನ್ಸರ್ ರೋಗ ಎದುರಿಸುವ ಶಕ್ತಿಯನ್ನು ರೋಗಿಗಳು ಹೊಂದಬೇಕು. ವೈದ್ಯರ ಸಲಹೆ ಪಡೆದರೆ ಯಾವುದೇ ಕಠಿಣ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಹುದು ಎಂದರು. ಆದರೆ ನಮ್ಮ ಜನ ಇಂತಹದರ ಪ್ರಯೋಜನ ಪಡೆಯುವುದಿಲ್ಲ. ಒಳ್ಳೆಯ ವಿಚಾರ ಹೇಳ್ತಿವಿ ಅಂದರೆ ಯಾರು ಬರಲ್ಲ. ಹಿರಿಯ ನಾಗರೀಕರ ವೇದಿಕೆ ವಿಸ್ತಾರಗೊಳ್ಳಬೇಕು. ಸಂಘಟನೆ ದೊಡ್ಡದಾಗಿ ಬೆಳೆದು ಜಿಲ್ಲೆಯ ಹಾಗು ಊರಿನ ಹಿತ ಚಿಂತನೆ ಆಗಬೇಕು.

ಅರಸೀಕೆರೆಯಲ್ಲಿ ವೇದಿಕೆ ಮಾಡಿಕೊಂಡಿಲ್ಲ. ಆದರೇ ೧೫೦ ಜನ ಸೇರಿ ರೈಲ್ವೆ ನಿಲ್ದಾಣದಲ್ಲಿ ಬಹಳ ಚರ್ಚೆ ಮಾಡುತ್ತಾರೆ. ಅದಕ್ಕೆ ಅಂತಿಮ ರೂಪ ಕೊಡುತ್ತಾರೆ. ಅರಸೀಕೆರೆಯಲ್ಲಿ ಪ್ಲೋರೈಡ್ ನೀರು ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದೆವೆ ಎಂದರು. ಹೆಮಾವತಿ ನದಿ ನೀರನ್ನ ತಂದರೆ ಅಷ್ಟೆ ಬದುಕಲು ಸಾಧ್ಯ ಎಂದರು. ಈ ಹಿಂದೆ ಊರು ಬಿಡುವ ಮುನ್ಸೂಚನೆ ನೀಡಿದ್ದರು. ಇಲ್ಲಿ ಸರ್ಕಾರಿ ಕೆಲಸದ ನಿವೃತ್ತರು ಇರೋಕೆ ಇಷ್ಟಾ ಪಡ್ತಾ ಇರಲಿಲ್ಲ.

ಪ್ಲೋರೈಡ್ ನೀರು ಕುಡಿದರೆ ೧೮ ಕಾಯಿಲೆ ಬರ್ತವೆ. ಇದನ್ನು ಅಸೆಂಬ್ಲಿಯಲ್ಲಿ ಚರ್ಚೆ ಮಾಡಿದ್ದೆನು. ಹೇಮಾವತಿ ನೀರು ಕೊಡದಿದ್ದರೆ ಮಾನವ ಹಕ್ಕು ಆಯೋಗಕ್ಕೆ ಹೋಗ್ತಿನಿ ಅಂದ್ರು. ಆಗ ಕ್ಯಾಬಿನೆಟ್‌ನಲ್ಲಿ ಇಟ್ಟು ಸಿದ್ದರಾಮಯ್ಯ ಬಂದು ೩೫೦ ಕೋಟಿ ರೂ.ವೆಚ್ಚದಲ್ಲಿ ಮಂಜೂರಾತಿ ಕೊಟ್ಟರು. ಇದನ್ನ ಹಿರಿಯ ನಾಗರಿಕರು ಮಾಡಿಕೊಟ್ಟಿರುವುದಾಗಿ ಇದೆ ವೇಳೆ ನೆನಪಿಸಿಕೊಂಡರು. ಹಾಸನ ನಗರದಲ್ಲಿರುವ ಮೆಡಿಕಲ್ ಕಾಲೇಜನ್ನು ಗೆಂಡೆಕಟ್ಟೆಗೆ ಶಿಫ್ಟ್ ಮಾಡಲು ಹೇಳಿದ್ವಿ. ಊರಿನ ಹೊರಗೆ ಇದ್ದಿದ್ದರೇ ಹಾಸನ ಇನ್ನು ಕೂಡ ಹೆಚ್ಚಿನ ಅಭಿವೃದ್ಧಿ ಆಗುತಿತ್ತು. ಅದು ಮುಗಿದ ಕಥೆ ಚಿಂತಿಸಿ ಫಲವಿಲ್ಲ. ಡೆಂಟಲ್ ಕಾಲೇಜನ್ನು ಅರಸೀಕೆರೆ ಮತ್ತು ಹಾಸನಕ್ಕೆ ತರೋಣ. ನಾನು ಸಿಎಂ ಜೊತೆಗೆ ಮಾತಾಡ್ತಿನಿ. ಅಲೈಡ್ ಕಾಲೇಜು ಹಾಸನಕ್ಕೆ ಬರಬೇಕು. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡೋಣ. ಸೋಲಾರ್ ಅಳವಡಿಸೊದು ಸುಲಭ. ಅದಕ್ಕಾಗಿ ಸಂಸ್ಥೆಯನ್ನು ತೆರೆಯಲಾಗಿದೆ. ಒಂದು ಕ್ರೀಡಾಂಗಣದ ಜೊತೆ ಇನ್ನೊಂದು ಕ್ರೀಡಾಂಗಣ ಇಲ್ಲಿ ಇರಬೇಕಾಗಿತ್ತು. ಇಲ್ಲೊಂದು ಸ್ಟೇಡಿಯಂ ತರುತ್ತೇನೆ ಎಂದ ಅವರು ಇಲ್ಲಿನ ಅಭಿವೃದ್ಧಿಗೆ ಪೂರಕ ಕೆಲಸ ಮಾಡುವುದಾಗಿ ಹೇಳಿದರು. ಹಿರಿಯ ನಾಗರಿಕರ ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಹಿರಿಯ ನಾಗರೀಕರ ವೇದಿಕೆ ಪ್ರಾರಂಭ ಮಾಡಿದ ನಂತರ ದುದ್ದ ಹಾಸನ ರಸ್ತೆ ವಿಚಾರವಾಗಿ ಹೋರಾಟ ಮಾಡಿ ನಂತರ ಸಿಎಂ ಸಿದ್ದರಾಮಯ್ಯ ಕೆಲಸ ಮಾಡಿಕೊಟ್ಟರು. ಬರಗಾಲದಿಂದ ಅಂತರ್ಜಲ ಕುಸಿದಾಗ ಸಂಘಟನೆಯವರೆಲ್ಲ ಸೇರಿ ಬೀದಿಗಿಳಿದೆವು. ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ೧೪೪ ಕೋಟಿ ರೂ. ಕೊಟ್ಟರು. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಆಗಬೇಕೆಂದರೆ ಸಿದ್ದರಾಮಯ್ಯ ಅವರೇ ಬರಬೇಕಾಯಿತು ಎಂದರು. ಹಿರಿಯ ನಾಗರೀಕರ ವೇದಿಕೆಯಿಂದ ನಾಲ್ಕೈದು ಬೇಡಿಕೆಗಳಿವೆ. ಹಾಸನಕ್ಕೆ ಸರ್ಕಾರಿ ದಂತ ಕಾಲೇಜು ಮತ್ತು ಸೈನ್ಸ್ ಅನ್ನು ಹಾಸನಕ್ಕೆ ತರಬೇಕು. ಮತ್ತೊಂದು ವಸತಿ ಕಟ್ಟಡ ಬೇಕು. ಹಿಮ್ಸ್ ಕಟ್ಟಡಕ್ಕೆ ಸೋಲಾರ್ ವ್ಯವಸ್ಥೆ ಮಾಡಬೇಕು. ತಿಂಗಳಿಗೆ ೪೫ ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟುತ್ತಾರೆ. ನಿಮ್ಮಿಂದ ಆಗದಿದ್ದರೆ ಹಿರಿಯ ನಾಗರೀಕರ ವೇದಿಕೆಯಿಂದ ಮಾಡುತ್ತೇವೆ. ಜೊತೆಗೆ ರೋಗಿಗಳು ತುರ್ತಾಗಿ ಬರಲು ಏರ್ ಆಂಬ್ಯುಲೆನ್ಸ್ ಅನ್ನು ಸರ್ಕಾರ ಕೊಡಬೇಕು. ಕೊನೆಯದಾಗಿ ಇಲ್ಲೊಂದು ಕ್ರೀಡಾಂಗಣದ ಅವಶ್ಯಕತೆ ಇದೆ ಎಂದು ಶಿವಲಿಂಗೇಗೌಡರ ಗಮನಸೆಳೆದರು.

ಕ್ಯಾನ್ಸರ್‌ ಗುಣಮುಖದ ಅನುಭವ: ಹಿರಿಯ ನಾಗರೀಕರ ವೇದಿಕೆಯ ವನಜಾಕ್ಷಿ ಮಾತನಾಡಿ, ಧೈರ್ಯ ಇರುವ ಮನಸ್ಥಿತಿಯ ಮುಂದೆ ಯಾವ ಕಷ್ಟವು ನಿಲ್ಲುವುದಿಲ್ಲ. ಸ್ತನ, ಕರಳು, ಗರ್ಭಕೊಶದ ಕ್ಯಾನ್ಸರ್ ಅನ್ನು ಆರಂಭದಲ್ಲೇ ಕಂಡುಕೊಂಡರೆ ಪರಿಹಾರ ಕಂಡುಕೊಳ್ಳಬಹುದು ಎಂದು ಕ್ಯಾನ್ಸರ್ ರೋಗದಿಂದ ಗುಣಮುಖರಾದ ತಮ್ಮ ಅನುಭವವನ್ನು ಹೇಳಿದರು. ಊಟದಲ್ಲಿ ವ್ಯತ್ಯಾಸ ಆಗಬಾರದು. ಹೆಚ್ಚು ನೀರು ಕುಡಿಯಬೇಕು. ವೈದ್ಯರ ಸಲಹೆ ತಪ್ಪದೆ ಪಾಲಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ವೈ.ಎಸ್.ವೀರಭದ್ರಪ್ಪ, ಉಪಾಧ್ಯಕ್ಷೆ ಜಯಲಕ್ಷ್ಮಿ ರಾಜಣ್ಣ, ಹಿಮ್ಸ್ ನಿರ್ದೇಶಕ ಡಾ.ಎಸ್.ವಿ. ಸಂತೋಷ್, ಡಾ. ಜಗದೀಶ್, ಹೇಮಾಲತ ಪಟ್ಟಾಭಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಹೆಚ್.ಆರ್. ದೇವದಾಸ್, ಸ್ವಾತಂತ್ರ ಹೋರಾಟಗಾರ ಹೆಚ್.ಎಂ. ಶಿವಣ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಡಾ. ಅಬ್ದುಲ್ ಬಷೀರ್, ಮಾಜಿ ಶಾಸಕ ಬಿ.ವಿ. ಕರಿಗೌಡ, ಡಾ.ಭಾರತಿ ರಾಜಶೇಖರ್, ಮಹಾಲಕ್ಷ್ಮಿ, ಡಾ. ಲೋಕೇಶ್, ಡಾ. ಯತೀಶ್, ಹನುಮಂತೇಗೌಡ, ಸ್ಕೌಟ್ ಅಂಡ್ ಗೈಡ್ಸ್ ಗಿರೀಶ್ ಇತರರು ಉಪಸ್ಥಿತರಿದರು.