ರಾಜ್ಯಪಾಲರಿಂದ ಪ್ರಜಾಪ್ರಭುತ್ವದ ಕಗ್ಗೋಲೆ

| Published : Aug 20 2024, 12:56 AM IST

ಸಾರಾಂಶ

ರಾಜ್ಯಪಾಲರ ರಾಜಿನಾಮೆಗೆ ಆಗ್ರಹಿಸಿ ಬೀದರ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಪಕ್ಷಪಾತದಿಂದ ವರ್ತಿಸುತ್ತ ಪ್ರಜಾಪ್ರಭತ್ವದ ಕಗ್ಗೋಲೆ ಮಾಡುತ್ತಿರುವ ರಾಜ್ಯಪಾಲರು ಕೂಡಲೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಆಗ್ರಹಿಸಿ ಸೋಮವಾರ ಬೀದರ್‌ನಲ್ಲಿ ಶೋಷಿತ ವರ್ಗಗಳ ಒಕ್ಕೂಟ ಹಾಗೂ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬೀದರ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆ ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ತೆರಳಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು.

ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ರಾಜ್ಯಪಾಲರು ಮುಖ್ಯಮಂತ್ರಿಗೆ ನೀಡಿದ ಪ್ರಾಸಿಕ್ಯೂಷನ್ ಕೂಡಲೇ ಹಿಂಪಡೆಯಬೇಕು.ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೊಟೀಸ್ ನೀಡಿದ್ದು ಸರಿಯಲ್ಲ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಿರುವ ಸಿಎಂ ಸಿದ್ದರಾಮಯ್ಯನವರು ನೇರವಾಗಿ ಯಾವುದೇ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲದಿದ್ದರೂ ಯಾವುದೇ ಅಪರಾಧ ಮಾಡದಿದ್ದರೂ ಕೂಡ ಅವರ ವಿರುದ್ಧ ಪ್ರಾಸಿಕ್ಯೂಷನಗೆ ಅನುಮತಿ ನೀಡಿದ್ದು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕೆಲ ಹೊತ್ತು ಡಾ.ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಮಾಜಿ ಎಂಎಲ್‌ಸಿಗಳಾದ ಕೆ.ಪುಂಡಲಿಕರಾವ್‌, ಅರವಿಂದ ಅರಳಿ, ನಗರ ಸಭೆ ಅಧ್ಯಕ್ಷ ಮಹ್ಮದ ಗೌಸ್, ಸಂಜಯ ಜಾಗಿರದಾರ, ಅಮತೃರಾವ ಚಿಮಕೋಡೆ, ನಿಸಾರ ಅಹ್ಮದ, ಬಸವರಾಜ ಮಾಳಗೆ, ಪರವೇಜ ಕಮಾಲ್, ವೇಂಕಟರಾವ ಶಿಂಧೆ, ಫಿರೋಜಖಾನ್, ವಿನೋದ ಅಪ್ಪೆ, ಫರ್ನಾಂಡಿಸ್ ಜಾರ್ಜ, ಸುನೀಲ ಬಚ್ಚನ, ಚಂದ್ರಶೇಖರ ಚನ್ನಶೆಟ್ಟಿ, ಝರೆಪ್ಪ ಮಮದಾಪೂರೆ, ಬಾಬು ಪಾಸ್ವಾನ್‌, ಕರೀಮ ಸಾಬ್, ರಾಜಕುಮಾರ ಹಲಬರ್ಗೆ, ಗೋವರ್ಧನ ರಾಠೋಡ, ಚಂದ್ರಕಾಂತ ನಿರಾಟೆ, ಮಹ್ಮದ ರಿಯಾಜ್‌ ಸೇರಿ ಇತರರು ಇದ್ದರು.