ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮಂತ ಛದ್ಮವೇಷಧಾರಿಗಳ ಪ್ರದರ್ಶನ

| Published : Jan 18 2024, 02:06 AM IST

ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮಂತ ಛದ್ಮವೇಷಧಾರಿಗಳ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಭವ್ಯ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಐತಿಹಾಸಿಕ ಅವಿಸ್ಮರಣೀಯ ಸಂದರ್ಭದಲ್ಲಿ ತಾಳಿಕೋಟೆ ಪಟ್ಟಣದ ಸಮಸ್ತ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಖಾಸ್ಗತೇಶ್ವರ ಮಠದಲ್ಲಿ ಆಯೋಜಿಸಲಾದ ಛದ್ಮವೇಷಧಾರಿಗಳ ಪ್ರದರ್ಶನದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತ ವೇಷಧಾರಿ ಮಕ್ಕಳಲ್ಲಿ ಪಟ್ಟಣದ ಮಿಣಜಗಿ ಕ್ರಾಸ್‌ನಲ್ಲಿರುವ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಭಾಗವಹಿಸಿದ್ದ 3 ತಂಡಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿವೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಘನಮಠೇಶ್ವರ ಆಂಗ್ಲ ಮಾಧ್ಯಮದ ಪ್ರೌಢಶಾಲೆಯ ಕು.ಗೌತಮ ಬದಾಮಿ, ಕು.ದಕ್ಷೆ ನವಲೆ, ಕು.ಶ್ರಾವಣಿ ಪೋಲಿಸಪಾಟಿಲ, ಕು.ಪ್ರಜ್ವಲ್ ಕುರಲೆ, ತಂಡ ಎರಡರಲ್ಲಿ ಕು.ಅಮೀತಾ ನವಲೆ, ಕು.ಕುಶಾಲ ಕುಂಬಾರ, ಕು.ಸಂಗಮೇಶ ಕಮತಗಿ, ಕು.ಶ್ರೀನಿವಾಸ ಚಿರಕನಹಳ್ಳಿ, ಕನಕ ಕನ್ನಡ ಮಾಧ್ಯಮ ಶಾಲೆಯ ಕು.ಶಿವರಾಜ ಕೊಲಕಾರ, ಕು.ಯುವರಾಜ ರಾಠೋಡ, ಕು.ಪ್ರಜ್ವಲ್ ಹೂಗಾರ, ಕು.ಶ್ರದ್ಧಾ ಯಾಳಗಿ, ದ್ವಿತೀಯ ಸ್ಥಾನಪಡೆದುಕೊಂಡಿದ್ದಾರೆ.

ಈ ವಿದ್ಯಾರ್ಥಿಗಳ ಸಾಧನೆಗೆ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎಂ.ಸಜ್ಜನ ಹಾಗೂ ಆಡಳಿತಾಧಿಕಾರಿಯಾದ ಬಿ.ಜಿ.ಸಜ್ಜನ, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.