ಅಕ್ಟೋಬರ್ ೧೧ ರಂದು ಹೇಮಾವತಿ ನದಿಗೆ ಕಸಾಯಿಖಾನೆಯಲ್ಲಿ ಕತ್ತರಿಸಿದ ಕರುಗಳ ಕಾಲುಗಳನ್ನು ಹಾಸನ-ಮೈಸೂರು ರಸ್ತೆಯ ಹೇಮಾವತಿ ನದಿಯ ಹಳೇ ಸೇತುವೆ ಮೇಲಿಂದ ನದಿಗೆ ಎಸೆದಿರುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪುರಸಭೆಗೆ ಪತ್ರ ನೀಡಿತ್ತು. ಆದರೆ ಪುರಸಭೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಇಂತಹ ಯಾವುದೇ ಪ್ರಕರಣ ಪತ್ತೆ ಆಗಿಲ್ಲ ಎಂದು ಹಿಂಬರಹ ನೀಡಿತ್ತು. ಆದರೆ, ಪಟ್ಟಣದಲ್ಲಿ ಅಕ್ರಮವಾಗಿ ಜಾನುವಾರುಗಳ ಅಕ್ರಮ ಕಸಾಯಿಖಾನೆ ನಿರಂತರವಾಗಿ ನಡೆಯುತ್ತಲೇ ಇದೆ ಎಂಬುದಕ್ಕೆ ಪುಷ್ಟಿ ನೀಡುವಂತೆ ಶನಿವಾರ ಮುಂಜಾನೆ, ಅದೇ ಅಕ್ರಮ ಕಸಾಯಿಖಾನೆಯಿಂದ ಜಾನುವಾರುಗಳ ಹತ್ಯೆ ನಡೆಸಿದ ನಂತರ ರಕ್ತವನ್ನು ಹೇಮಾವತಿ ನದಿಗೆ ಹರಿಯ ಬಿಡಲಾಗಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದಲ್ಲಿ ಭಾನುವಾರ ಗಣೇಶಮೂರ್ತಿಯ ವಿಸರ್ಜನಾ ಮಹೋತ್ಸವ ಹಾಗೂ ನವರಾತ್ರಿ ಸಂದರ್ಭದಲ್ಲೇ ರಿವರ್ ಬ್ಯಾಂಕ್ ರಸ್ತೆಯಲ್ಲಿರುವ ಅಕ್ರಮ ಕಸಾಯಿಖಾನೆಯಿಂದ ಶನಿವಾರ ಮುಂಜಾನೆ ಜಾನುವಾರುಗಳ ಹತ್ಯೆ ನಡೆಸಿದ ನಂತರ ರಕ್ತವನ್ನು ಹೇಮಾವತಿ ನದಿಗೆ ಹರಿಬಿಡಲಾಗಿದ್ದು, ಇದು ಹಿಂದುಗಳ ಭಾವನೆಗೆ ಕೊಡಲಿಪೆಟ್ಟು ನೀಡಿದ್ದು, ಕೋಮುಸೌಹಾರ್ದತೆಗೆ ಭಂಗ ತರುವಂತಿದೆ.

ಸೆಪ್ಟೆಂಬರ್ ೨೩ರ ಕನ್ನಡಪ್ರಭ ಪತ್ರಿಕೆಯಲ್ಲಿ ಹೇಮಾವತಿಗೆ ಕಸಾಯಿಖಾನೆ ತ್ಯಾಜ್ಯ ಎಂಬ ಶೀರ್ಷಿಕೆಯಡಿ ಪಟ್ಟಣದ ಶ್ರೀ ಲಕ್ಷ್ಮಣೇಶ್ವರಸ್ವಾಮಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮೀಪ ಹೇಮಾವತಿ ನದಿಗೆ ಕರುಗಳ ಕಳೇಬರ, ತ್ಯಾಜ್ಯ ಮತ್ತು ಮೂಳೆಗಳನ್ನು ಎಸೆಯುತ್ತಿರುವ ಘಟನೆ ಕಂಡು ಬಂದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ವರದಿ ಪ್ರಕಟಿಸಲಾಗಿತ್ತು. ಅಕ್ಟೋಬರ್ ೧೧ ರಂದು ಹೇಮಾವತಿ ನದಿಗೆ ಕಸಾಯಿಖಾನೆಯಲ್ಲಿ ಕತ್ತರಿಸಿದ ಕರುಗಳ ಕಾಲುಗಳನ್ನು ಹಾಸನ-ಮೈಸೂರು ರಸ್ತೆಯ ಹೇಮಾವತಿ ನದಿಯ ಹಳೇ ಸೇತುವೆ ಮೇಲಿಂದ ನದಿಗೆ ಎಸೆದಿರುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪುರಸಭೆಗೆ ಪತ್ರ ನೀಡಿತ್ತು. ಆದರೆ ಪುರಸಭೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಇಂತಹ ಯಾವುದೇ ಪ್ರಕರಣ ಪತ್ತೆ ಆಗಿಲ್ಲ ಎಂದು ಹಿಂಬರಹ ನೀಡಿತ್ತು. ಆದರೆ, ಪಟ್ಟಣದಲ್ಲಿ ಅಕ್ರಮವಾಗಿ ಜಾನುವಾರುಗಳ ಅಕ್ರಮ ಕಸಾಯಿಖಾನೆ ನಿರಂತರವಾಗಿ ನಡೆಯುತ್ತಲೇ ಇದೆ ಎಂಬುದಕ್ಕೆ ಪುಷ್ಟಿ ನೀಡುವಂತೆ ಶನಿವಾರ ಮುಂಜಾನೆ, ಅದೇ ಅಕ್ರಮ ಕಸಾಯಿಖಾನೆಯಿಂದ ಜಾನುವಾರುಗಳ ಹತ್ಯೆ ನಡೆಸಿದ ನಂತರ ರಕ್ತವನ್ನು ಹೇಮಾವತಿ ನದಿಗೆ ಹರಿಯ ಬಿಡಲಾಗಿದೆ.ಪುರಸಭೆಗೆ ಪೊಲೀಸ್ ಇಲಾಖೆ ನೀಡಿರುವ ಪತ್ರದಂತೆ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ನೀಡ ಬಹುದಾಗಿತ್ತು. ಆದರೆ, ಪರಿಶೀಲನೆ ನಡೆಸಿದ ನಂತರ ವಸ್ತುನಿಷ್ಠ ವರದಿ ನೀಡದೇ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹಿಂಬರಹ ನೀಡಿ ಕೈ ತೊಳೆದುಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಹಿರಿಯ ಅಧಿಕಾರಿಗಳು ಬಹುತೇಕ ಹಿಂದುಗಳಾಗಿದ್ದು, ಇವರುಗಳು ಮನೆಯಲ್ಲಿ ಪೂಜಿಸುವ ದೇವರುಗಳು ಮತ್ತು ಭಾರತೀಯ ಸಂಸ್ಕೃತಿಗೆ ದ್ರೋಹ ಮಾಡುತ್ತಿರುವ ಜತೆಗೆ ಹಣಗಳಿಕೆಯೊಂದೇ ಇವರ ಉದ್ದೇಶವಾಗಿದೆ ಎಂದು ಬೇಸರದಿಂದ ನುಡಿದು, ಜಾನುವಾರುಗಳ ಅಕ್ರಮ ಕಸಾಯಿಖಾನೆ ತಡೆಗೆ ಜಿಲ್ಲಾಡಳಿತ ಶೀಘ್ರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.