ಸಾರಾಂಶ
ಕೊರಟಗೆರೆ : ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಕ್ರೂರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ತುಮಕೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು ಕೊಲೆಯಾದ ಮಹಿಳೆಯ ಅಳಿಯನೇ ಪ್ರಮುಖ ಆರೋಪಿಯಾಗಿದ್ದು, ಕೊಲೆಗೆ ಸಹಕರಿಸಿದ ಆರೋಪದ ಮೇಲೆ ಆತನ 3 ಸ್ನೇಹಿತರು ಸೇರಿ ಒಟ್ಟು 4 ಜನರನ್ನು ಬಂಧಿಸಲಾಗಿದೆ.
ಮಹಿಳೆಯಂದು ಕೊಂದು, ಮೃತ ದೇಹವನ್ನು 18 ತುಂಡು ಮಾಡಿ ಸಿದ್ಧರಬೆಟ್ಟ ಹಾಗೂ ಚಿಂಪುಗಾನಹಳ್ಳಿ ಬಳಿ ವಿವಿಧ ಕಡೆ ಎಸೆಯಲಾಗಿತ್ತು. ಆರಂಭದಲ್ಲಿ ಸಾಕಷ್ಟು ತಲೆನೋವಾಗಿದ್ದ ಪ್ರಕರಣದ ತನಿಖೆಗೆ ಇಳಿದಾಗ ಕೊಲೆಯಾದ ಲಕ್ಷ್ಮೀದೇವಮ್ಮ ಅವರ ಮಗಳ ಗಂಡ ಡಾ.ರಾಮಚಂದ್ರ ಸೇರಿ ನಾಲ್ವರು ಆತ್ತೆಯನ್ನು ಕೊಲೆ ಮಾಡುವುರುವುದು ಬೆಳಕಿಗೆ ಬಂದಿದೆ.
ಸಂಚು ರೂಪಿಸಿದ್ದು ಯಾಕೆ ?
ಆ. 3 ರಂದು ತುಮಕೂರಿನ ಅಳಿಯ ರಾಮಚಂದ್ರ ಮನೆಗೆ ಲಕ್ಷ್ಮಿ ದೇವಮ್ಮ ಬಂದಿದ್ದಾಳೆ. ಬಳಿಕ ತುಮಕೂರು ನಗರದ ಕುವೆಂಪು ನಗರದ ಮನೆಯಿಂದ ಬೆಳ್ಳಾವಿಗೆ ಡ್ರಾಪ್ ಮಾಡುವುದಾಗಿ ಅಳಿಯ ರಾಮಚಂದ್ರನೇ ಕರೆದುಕೊಂಡು ಹೋಗಿದ್ದಾನೆ. ಮನೆಯಿಂದ ಹೊರಟ ಬಳಿಕ ಸ್ಪಲ್ಪ ದೂರದಲ್ಲೇ ಕಾರ್‌ನಲ್ಲೇ ವೇಲ್‌ನಿಂದ ಕುತ್ತಿಗೆ ಬಿಗಿದು ಲಕ್ಷ್ಮಿದೇವನನ್ನು ಕೊಲೆ ಮಾಡಿದ ಬಳಿಕ ಕೊರಟಗೆರೆ ತಾಲೂಕಿನ ಕೋಳಾಲ ಬಳಿ ತೋಟಕ್ಕೆ ಶವ ತೆಗೆದುಕೊಂಡು ಹೋಗಿ ಸ್ನೇಹಿತ ಸತೀಶ್ ಎಂಬಾತನ ಜೊತೆ ಸೇರಿ ಚರ್ಚೆ ಮಾಡಿದ್ದಾನೆ. ಶವವನ್ನು ಎಲ್ಲಿಯಾದರೂ ಎಸೆದರೆ, ಬೇಗ ಪತ್ತೆಯಾಗುತ್ತೆ. ಕೆರೆಗೆ ಎಸೆದ್ರೂ ಶವ ಪೊಲೀಸರಿಗೆ ಸಿಗುತ್ತೆ. ಹೀಗಾಗಿ ದೇಹದ ಭಾಗಗಳನ್ನು ಪೀಸ್ ಪೀಸ್ ಮಾಡಿ ಕೆರೆಗೆ ಬಿಸಾಕಿದರೆ, ಶವ ತೇಲುತ್ತೆ ಎಂದು ಪ್ಲಾಸ್ಟಿಕ್ ಕವರ್‌ಗೆ ಮೆಟಲ್ ತುಂಡುಗಳನ್ನು ಹಾಕಿ ಶವದ ತುಂಡುಗಳನ್ನು ಬಿಸಾಕಲು ಪ್ಲ್ಯಾನ್ ಮಾಡಿದ್ದಾರೆ.
ಆ.6 ರಂದು ಮಧ್ಯಾಹ್ನದಿಂದ ರಾತ್ರಿ ತನಕ ಕಾರಿನಲ್ಲಿ ಹೋಗಿ ಕೊರಟಗೆರೆ ತಾಲೂಕಿನಾದ್ಯಂತ ಶವದ ತುಂಡುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಬಿಸಾಕಿದ್ದಾರೆ. ಆ. 7ರ ರಾತ್ರಿ ಸಿದ್ದರಬೆಟ್ಟದ ಹತ್ತಿರ ತಲೆ ಭಾಗ ಪತ್ತೆಯಾಗಿತ್ತು. ಆಗ ಪೊಲೀಸರಿಗೆ ಕೊಲೆಯಾಗಿರೋದು ಲಕ್ಷ್ಮಿದೇವಮ್ಮ ಅಂತ ಖಚಿತವಾಯಿತು. ಬಳಿಕ ಕೊಲೆ ಕೇಸ್ ತನಿಖೆ ಆರಂಭಿಸಿದ್ದಾರೆ. ಆಗ ಪೋನ್ ಟವರ್ ಲೋಕೇಷನ್ ಆಧಾರದ ಮೇಲೆ ತನಿಖೆ ನಡೆಸಿದ್ದರು. ಲಕ್ಷ್ಮಿದೇವಮ್ಮ ಮಗಳ ಮನೆಗೆ ಹೋದವಳು ವಾಪಸ್ ಬಂದಿರಲಿಲ್ಲ. ಅಳಿಯ ರಾಮಚಂದ್ರನೇ ಬೆಳ್ಳಾವಿಗೆ ಕರೆದುಕೊಂಡು ಹೋಗುವುದಾಗಿ ಹೊರಟಿದ್ದವನು ಬೆಳ್ಳಾವಿಗೆ ಹೋಗಿರಲಿಲ್ಲ. ಹೀಗಾಗಿ ಡಾ. ರಾಮಚಂದ್ರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ನಡೆಸಿದಾಗ, ತಾನೇ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಸತ್ಯ ಬಾಯಿ ಬಿಟ್ಟಿದ್ದಾನೆ. ಕೊಳಾಲ ಬಳಿಯ ತೋಟದ ಸತೀಶ್ ಹಾಗೂ ಆತನ ಸೋದರ ಕಿರಣ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಕಾರಣವೇನು? ಮೃತ ಲಕ್ಷ್ಮೀದೇವಮ್ಮ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಹೊಂಚು ಹಾಕುತ್ತಿದ್ದು ಅದರಂತೆ ಮಗಳನ್ನು ಪುಸುಲಾಯಿಸಲು ಬಂದಿದ್ದರು ಎನ್ನಲಾಗಿದೆ. ಈ ವಿಷಯವನ್ನು ಆಕೆಯ ಮಗಳು ಗಂಡ ಡಾ. ರಾಮಚಂದ್ರ ಅವರಿಗೆ ತಿಳಿಸಿದ್ದು. ಈ ಕುರಿತು ವಾದ ವಿವಾದ ನಡೆದಿತ್ತು. ವಿಷಯ ಕೇಳಿ ಸಾಕಷ್ಟು ಆಕ್ರೋಶಗೊಂಡಿದ್ದ ಡಾ. ರಾಮಚಂದ್ರ ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.