ಸಿಜೆಐ ಮೇಲೆ ಶೂ ಎಸೆದ ವಕೀಲನ ಗಡಿಪಾರು ಮಾಡಿ

| Published : Oct 15 2025, 02:07 AM IST

ಸಾರಾಂಶ

ನ್ಯಾಯಾಂಗ ವ್ಯವಸ್ಥೆ ಹಾಳು ಮಾಡಲು ನಿರಂತರ ಪ್ರಯತ್ನಗಳು ನಡೆದಿವೆ. ಈಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದು ನ್ಯಾಯಾಂಗದ ಪಾವಿತ್ರ್ಯತೆ ಹಾಳುಮಾಡಲು ಪ್ರಯತ್ನಿಸಲಾಗಿದೆ.

ನವಲಗುಂದ:

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆ‌ರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲರ ವಿರುದ್ಧ ದೇಶದ್ರೋಹದ ದೂರು ದಾಖಲಿಸಿ ಗರಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದಿಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಮುಖಂಡ ಶಿವು ಪೂಜಾರ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಹಾಳು ಮಾಡಲು ನಿರಂತರ ಪ್ರಯತ್ನಗಳು ನಡೆದಿವೆ. ಈಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದು ನ್ಯಾಯಾಂಗದ ಪಾವಿತ್ರ್ಯತೆ ಹಾಳುಮಾಡಲು ಪ್ರಯತ್ನಿಸಲಾಗಿದೆ. ಈ ಪ್ರಕರಣದ ಆರೋಪಿಯನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ರೈತ ಹೋರಾಟಗಾರರಾದ ರಘುನಾಥ ನಡುವಿನಮನಿ, ಮೈಲಾರಪ್ಪ ವೈದ್ಯ ಮಾತನಾಡಿದರು. ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ನಿಂಗಪ್ಪ ಕೆಳಗೇರಿ, ರಮೇಶ್ ಮಲ್ಲದಾಸರ, ತಾಲೂಕು ಸಂಚಾಲಕ ಕೃಷ್ಣ ಮಾದರ, ನಗರ ಸಂಚಾಲಕ ಕರಿಯಪ್ಪ ಹುಳಕಣ್ಣವರ, ಕಾಶಿನಾಥ ಕಾಳೆ, ರಾಮಪ್ಪ ಮಾದರ, ಶಂಕ್ರಪ್ಪ ಶಿರಗುಪ್ಪಿ, ಗದಿಗೆಪ್ಪ ಎಕ್ಕೇರಪ್ಪನವರ, ದಿಲೀಪ ರತ್ನಾಕರ, ಸಂತೋಷ ಮಾದರ, ಎಕ್ಕೆರಪ್ಪ ನಾಗಣ್ಣವರ ಇದ್ದರು.