ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ರೂವಾರಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಂಡು ರಾಜ್ಯದಿಂದಲೇ ಗಡೀಪಾರು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಒತ್ತಾಯಿಸಿದ್ದಾರೆ.
- ಕಠಿಣ ಕ್ರಮಕ್ಕೆ ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ, ಮಾಜಿ ಮೇಯರ್ ಚಮನ್ ಸಾಬ್ ಒತ್ತಾಯ- - -
ಕನ್ನಡಪ್ರಭ ವಾರ್ತೆ ದಾವಣಗೆರೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ರೂವಾರಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಂಡು ರಾಜ್ಯದಿಂದಲೇ ಗಡೀಪಾರು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಒತ್ತಾಯಿಸಿದ್ದಾರೆ.
ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಚಾರ ಪಡೆಯುತ್ತಿದ್ದಾರೆ. ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ಘಟಕದವರು ಓಡಿ ಹೋಗಿದ್ದಾರೆ. ಎಚ್.ಡಿ.ಕುಮಾರ ಸ್ವಾಮಿ, ರಾಧಿಕಾ ಕುಮಾರಸ್ವಾಮಿ ಅವರದ್ದು ಏನಾಯಿತು? ಅದೇ ಕುಮಾರಸ್ವಾಮಿ ಕುಟುಂಬದ ಮಾಜಿ ಸಚಿವ ಪ್ರಜ್ವಲ್ ರೇವಣ್ಣನವರದ್ದೇ ಸಾಕಷ್ಟು ಕೇಸ್ಗಳಿವೆ ಎಂದು ಕುಟುಕಿದರು.8 ವರ್ಷದ ಕಾಲ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ರಾಜ್ಯದ ಜನಪರ ಆಡಳಿತ ನಡೆಸಿದ ಸಿದ್ದರಾಮಯ್ಯ ಹೆಸರಿಗೆ ಚ್ಯುತಿ ತರುವ ಸಂಚಿನಿಂದ ಸ್ಟಿಂಗ್ ಆಪರೇಷನ್ ನಡೆಸಿದ್ದಾರೆ. ಈ ಸ್ಟಿಂಗ್ನ ಹಿಂದಿರುವ ಎಲ್ಲರನ್ನೂ ಪತ್ತೆ ಮಾಡಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಅಹಿಂದ ವರ್ಗಗಳು, ಜಿಲ್ಲೆಯ ಹಿಂದುಳಿದ ವರ್ಗಗಳ ಮುಖಂಡರು ಸೇರಿದಂತೆ ಎಲ್ಲರೂ ಸದಾ ಸಿದ್ದರಾಮಯ್ಯ ಜೊತೆಗಿರುತ್ತೇವೆ. ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಸಿದ್ದರಾಮಯ್ಯನವರ ವರ್ಚಸ್ಸನ್ನು ಕುಂಠಿತಗೊಳಿಸಲು ಯತ್ನಿಸಿದವರನ್ನು ಪತ್ತೆ ಮಾಡಿ, ರಾಜ್ಯದಿಂದಲೇ ಗಡೀಪಾರು ಮಾಡಬೇಕು ಎಂದು ಅವರು ಆಗ್ರಹಿಸಿದರು.ಮಾಜಿ ಮೇಯರ್, ಪಕ್ಷದ ಹಿರಿಯ ಮುಖಂಡ ಕೆ.ಚಮನ್ ಸಾಬ್ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೊದಲು ಸಿದ್ದರಾಮಯ್ಯನವರ ಹೆಸರು ಹೇಳುವುದನ್ನು ಬಿಡಬೇಕು. ಸ್ಟಿಂಗ್ ವಿರುದ್ಧ ಮಾತನಾಡಲಿ. ಅದನ್ನು ಹೊರತುಪಡಿಸಿ, ಪದೇಪದೇ ಸಿದ್ದರಾಮಯ್ಯ ಹೆಸರು ಹೇಳಿ, ಕಾಂಗ್ರೆಸ್ ಪಕ್ಷವನ್ನು ಒಡೆಯುವ ಹುನ್ನಾರ ಮಾಡಬಾರದು ಎಂದು ಹೇಳಿದರು.
ಮಾಜಿ ಮೇಯರ್ಗಳಾದ ಬಿ.ಎಚ್.ವಿನಾಯಕ ಪೈಲ್ವಾನ್, ಎಚ್.ಬಿ.ಗೋಣೆಪ್ಪ, ಪಕ್ಷದ ಹಿರಿಯ ಮುಖಂಡರಾದ ಬಿ.ಎಚ್. ವೀರಭದ್ರಪ್ಪ, ಎಲ್.ಎಂ.ಹನುಮಂತಪ್ಪ, ಜಿ.ಎಸ್.ಮಂಜುನಾಥ ಗಡಿಗುಡಾಳ್, ಧರ್ಮಣ್ಣ, ಇಟ್ಟಿಗುಡಿ ಮಂಜುನಾಥ, ತಿಪ್ಪಣ್ಣ, ರೇವಣ್ಣ, ಭರತ್ ಇತರರು ಇದ್ದರು.- - -
(ಕೋಟ್)ಸುದೀರ್ಘ 5 ದಶಕಗಳ ರಾಜಕೀಯ ಮಾಡಿ, 8 ವರ್ಷ ಮುಖ್ಯಮಂತ್ರಿಯಾಗಿ ಬಡವರು, ಎಲ್ಲ ಜಾತಿ, ಧರ್ಮ, ವರ್ಗಗಳ ಜನರ ಉ ದ್ಧಾರಕ್ಕೆ ಶ್ರಮಿಸಿದ ಸಿದ್ದರಾಮಯ್ಯನವರ ವಿರುದ್ಧದ ಸ್ಟಿಂಗ್ ಆಪರೇಷನ್ ಮಾಡಿದ, ಅದಕ್ಕೆ ಕಾರಣರಾದ ಎಲ್ಲರನ್ನೂ ಪತ್ತೆ ಮಾಡಿ, ಬಂಧಿಸಬೇಕು. ಇಂತಹ ಕೃತ್ಯವನ್ನು ಮುಂದೆ ಬೇರೆ ಯೂರೂ ಮಾಡದಂತೆ ಕಠಿಣ ಕ್ರಮ ಕೈಗೊಳ್ಳಬೇಕು.
- ಜಯಣ್ಣ, ಮುಖಂಡ, ಭೋವಿ ಸಮಾಜ.- - -
-28ಕೆಡಿವಿಜಿ7:ದಾವಣಗೆರೆ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.