ನಾಳೆಗೆ...........ಹೊಸಕೋಟೆಯಲ್ಲಿ ಆಸ್ಪತ್ರೆ, ಹಾಸ್ಟೆಲ್‌ಗಳಿಗೆ ಉಪ ಲೋಕಾಯುಕ್ತರ ಭೇಟಿ

| Published : Jul 14 2024, 01:36 AM IST

ನಾಳೆಗೆ...........ಹೊಸಕೋಟೆಯಲ್ಲಿ ಆಸ್ಪತ್ರೆ, ಹಾಸ್ಟೆಲ್‌ಗಳಿಗೆ ಉಪ ಲೋಕಾಯುಕ್ತರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಹಾಸ್ಟೆಲಿಗೆ ಕರ್ನಾಟಕ ರಾಜ್ಯ ಉಪ ಲೋಕಾಯುಕ್ತ ವೀರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

-ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಸಂವಾದ

- ಸ್ವಚ್ಛತೆ, ದಾಸ್ತಾನು ಪರಿಶೀಲನೆ ಹೊಸಕೋಟೆ: ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಹಾಸ್ಟೆಲಿಗೆ ಕರ್ನಾಟಕ ರಾಜ್ಯ ಉಪ ಲೋಕಾಯುಕ್ತ ವೀರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ, ಗುಣಮಟ್ಟ, ಸ್ವಚ್ಛತೆ ಹಾಗೂ ದಾಸ್ತಾನು ಕೊಠಡಿಗೆ ತೆರಳಿ ದಿನಸಿ ಸಾಮಗ್ರಿಗಳನ್ನು ಪರಿಶೀಲಿಸಿದರು.

ಬಾಲಕಿಯರ ಹಾಸ್ಟೆಲ್‌ನಲ್ಲಿ ಅಡುಗೆ ಕೋಣೆಗೆ ತೆರಳಿ ವಿದ್ಯಾರ್ಥಿಗಳಿಗೆ ಉಣಪಡಿಸುವ ಸಾಂಬಾರ್ ಪರಿಶೀಲಿಸಿ ರುಚಿ ನೋಡಿ, ಮತ್ತಷ್ಟು ಗುಣಮಟ್ಟದಿಂದ ಆಹಾರ ಸಿದ್ಧಪಡಿಸಬೇಕೆಂದು ಸಂಬಂಧಪಟ್ಟ ಮೇಲ್ವಿಚಾರಕರಿಗೆ ತಿಳಿಸಿ ಎಂದು ಅಡುಗೆ ಸಿಬ್ಬಂದಿಗೆ ಸೂಚನೆ ನೀಡಿದರು.

ಆಸ್ಪತ್ರೆಗೆ ಭೇಟಿ:

ನಗರದ ತಾಲೂಕು ಸಾರ್ವಜನಿಕ ಆಸ್ಪತ್ರಗೆ ಭೇಟಿ ನೀಡಿದ ಉಪ ಲೋಕಾಯುಕ್ತ ವೀರಪ್ಪ, ಆಸ್ಪತ್ರೆಯಲ್ಲಿದ್ದ ಔಷಧಿಗಳ ದಾಸ್ತಾನು, ಡಯಾಲಿಸಿಸ್ ಕೇಂದ್ರ, ಹೆರಿಗೆ ಆರೈಕೆ ಕೇಂದ್ರ, ಹೊರರೋಗಿಗಳ ವಿಭಾಗ ಸೇರಿ ಎಲ್ಲವನ್ನು ಪರಿಶೀಲಿಸಿ ರೋಗಿಗಳಿಂದ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಿಳಿಗೆ ಉಚಿತ ಊಟ ನೀಡಬೇಕು ಎಂದು ಸೂಚಿಸಿದರು. ಲೋಕಾಯುಕ್ತ ಎಸ್ಪಿ ಪವನ್ ನಚ್ಚೂರ್, ಡಿವೈಎಸ್ಪಿ ಗಿರೀಶ್, ಇನ್‌ಸ್ಪೆಕ್ಟರ್ ನಂದಕುಮಾರ್ ಇದ್ದರು.

ಡಾಕ್ಟರ್, ಎಂಜಿನಿಯರ್ ಬದಲು ಸೈನಿಕರಾಗಿ

ನಗರದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗೆ ತೆರಳಿದ ವಿದ್ಯಾರ್ಥಿನಿಯರು ಸಮಾಜದಲ್ಲಿ ಸಾಕಷ್ಟು ಧೈರ್ಯ, ಆತ್ಮಸ್ಥೈರ್ಯದಿಂದ ಜೀವನ ಮಾಡಬೇಕು. ಎಲ್ಲರೂ ಡಾಕ್ಟರ್, ಎಂಜಿನಿಯರ್ ಆಗಬೇಕು ಎನ್ನುವುದನ್ನು ಬಿಟ್ಟು ದೇಶದ ಸೈನಿಕರಾಗುವತ್ತ ಗಮನ ಹರಿಸಬೇಕು. ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ರಾಣಿ ಅಬ್ಬಕ್ಕರ ಆದರ್ಶಗಳನ್ನು ಹೊತ್ತು ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಉಪ ಲೋಕಾಯುಕ್ತ ವೀರಪ್ಪ ತಿಳಿಸಿದರು.