ಸಾರಾಂಶ
ಸಹಾಯಕ ಕೃಷಿ ನಿರ್ದೇಶಕಿ ಸುಂದ್ರಮ್ಮರಿಂದಲೇ ಕರ್ತವ್ಯಲೋಪ । ಖಾಲಿ ಹುದ್ದೆಗೆ ತಾಂತ್ರಿಕ ಅಧಿಕಾರಿ ವರ್ಗವಾಗಿ ಬಂದರೂ ಚಾರ್ಜ್ ಕೊಡಿಸದ ಎಡಿಎ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಖಾಲಿ ಇರುವ ತಾಂತ್ರಿಕ ಅಧಿಕಾರಿ ಖಾಲಿ ಹುದ್ದೆಗೆ ವಿಜಯಲಕ್ಷ್ಮಿ ಎಂಬುವರು ವರ್ಗವಾಗಿ ಬಂದಿದ್ದರೂ ಸಹಾ ಅವರಿಗೆ ಚಾರ್ಜ್ ನೀಡದೆ ನರಸೀಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷಿ ಅಧಿಕಾರಿಯೊಬ್ಬರನ್ನು ಎರವಲು ಸೇವೆಯ ನಿಮಿತ್ತ ನಿಯೋಜಿಸಿಕೊಂಡು ಅವರಿಂದ ತಾಂತ್ರಿಕ ಅಧಿಕಾರಿ ಕೆಲಸ ನಿರ್ವಹಿಸುವ ಮೂಲಕ ಸಹಾಯಕ ನಿರ್ದೇಶಕರೇ ನಿಯಮ ಉಲ್ಲಂಘಿಸಿ ಕರ್ತವ್ಯಲೋಪಕ್ಕೆ ಸಹಕರಿಸುತ್ತಿರುವ ಘಟನೆ ಕೊಳ್ಳೇಗಾಲ ಇಲಾಖೆಯಲ್ಲಿ ಬೆಳಕಿಗೆ ಬಂದಿದೆ. ರೈತರ ಕೆಲಸ ಕಾರ್ಯಗಳಿಗೆ ತುರ್ತು ಸ್ಪಂದಿಸಬೇಕಾದ ವೇಳೆ ಕೃಷಿ ಇಲಾಖಾಧಿಕಾರಿಗಳ ಸಿಬ್ಬಂದಿ ಕೊರತೆ ಎಂಬ ಕುಂಟುನೆಪ ಹೇಳುತ್ತಾರೆ. ಆದರೆ ಇಲ್ಲಿನ ಸಹಾಯಕ ನಿರ್ದೇಶಕಿ ಸುಂದ್ರಮ್ಮ ಅವರು ತಾಂತ್ರಿಕ ಅಧಿಕಾರಿ ಹುದ್ದೆಗೆ ವರ್ಗವಾಗಿ ಬಂದ ವಿಜಯಲಕ್ಷ್ಮಿ ಎಂಬುವರಿಗೆ 2 ತಿಂಗಳಾದರೂ ಚಾರ್ಜ್ ಕೊಡಿಸದೆ ಕೃಷಿ ಅಧಿಕಾರಿಯ ಕಸಬಾ ಹೋಬಳಿಯ ಜವಾಬ್ದಾರಿ ವಹಿಸಿದ್ದಾರೆ. ನಾನು ನಿವೃತ್ತಿ ಅಂಚಿನಲ್ಲಿರುವ ಕಾರಣ ಸದ್ಯಕ್ಕೆ ಕಸಬಾ ಹೋಬಳಿ ಹೊಣೆಗಾರಿಕೆ ನಿರ್ವಹಿಸಿ ಎಂದು ಸಹಾಯಕ ನಿರ್ದೇಶಕರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.ಏನಿದು ಹಕೀಕತ್ತು.?
ಹೌದು ಕೃಷಿ ಇಲಾಖೆಯಲ್ಲಿನ ಅಧಿಕಾರಿಗಳು ತಮಗೆ ಬೇಕಾದ ರೀತಿಯಲ್ಲಿ ಸುಲಲಿತವಾಗಿ ಕಾನೂನು ತಿರುಚಬಲ್ಲವಾಗಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಪ್ರಸ್ತುತ ಕಳೆದ ಹಲವು ತಿಂಗಳಿಂದ ಖಾಲಿ ಇದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ತಾಂತ್ರಿಕ ಅಧಿಕಾರಿ ಹುದ್ದೆಗೆ ಕಳೆದ ಸುಮಾರು 3 ವರ್ಷಗಳಿಂದಲೂ ನರಸೀಪುರದಲ್ಲಿ ಕರ್ತವ್ಯ ನಿವರ್ಬಹಿಸುತ್ತಿದ್ದ ದೊರೈರಾಜು ಎಂಬುವರನ್ನು ನಿಯೋಜನೆ ಮೇರೆಗೆ ಕೊಳ್ಳೇಗಾಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಳೆದ 2ತಿಂಗಳ ಹಿಂದೆ ತಾಂತ್ರಿಕ ಅಧಿಕಾರಿ ಹುದ್ದೆಗೆ ವಿಜಯಲಕ್ಷ್ಮಿ ವರ್ಗವಾಗಿ ಬಂದಿದ್ದು ನಿಯಮಾನುಸಾರ ಅವರಿಗೆ ಚಾರ್ಜ್ ಕೊಡಿಸಬೇಕಿದೆ. ಆದರೆ ಸಹಾಯಕ ಕೃಷಿ ನಿರ್ದೇಶಕರು ವಿಜಯಲಕ್ಷ್ಮಿ ಎಂಬುವರಿಗೆ ಚಾರ್ಜ್ ಕೊಡಿಸಿದರೆ ದೊರೈರಾಜು ಪುನಃ ಮೂಲ ಹುದ್ದೆ ನರಸೀಪುರ ಕೃಷಿ ಇಲಾಖೆಗೆ ತೆರಳಬೇಕಾಗುತ್ತದೆ. ಹಾಗಾಗಿ ಅವರನ್ನು ಉಳಿಸಿಕೊಂಡು ವಿಜಯಲಕ್ಷ್ಮಿ ಅವರಿಗೆ ಬೇರೆ ಚಾರ್ಜ್ ಕೊಡಿಸೋಣ ಎಂಬ ತಂತ್ರಗಾರಿಕೆ ಅನುಸರಿಸಿದ ಪರಿಣಾಮ ತಾಂತ್ರಿಕ ಅಧಿಕಾರಿ ಹುದ್ದೆ ಅಲಂಕರಿಸಬೇಕಿದ್ದ ವಿಜಯಲಕ್ಷ್ಮಿ ಅವರು ಕೊಳ್ಳೇಗಾಲ ಕಸಬಾಕೃಷಿ ಕೇಂದ್ರದ ಕೃಷಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಾಲಿ ಹುದ್ದೆಗೆ ವರ್ಗವಾಗಿ ಬಂದರೂ ಬಂದವರಿಗೆ ಚಾರ್ಜ್ ಕೊಡಿಸದೆ ದೊರೈರಾಜು ಅವರನ್ನು ಉಳಿಸಿಕೊಂಡು ತಾಂತ್ರಿಕ ಅಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಸಹಾಯಕ ನಿರ್ದೇಶಕರು ಇಲಾಖೆಯ ನಿಯಮ ಉಲ್ಲಂಘಿಸುವ ಮೂಲಕ ಕರ್ತವ್ಯಲೋಪಕ್ಕೂ ಸಾಕ್ಷಿಯಾಗಿದ್ದು ಈ ಬೆಳವಣಿಗೆ ಇಲಾಖೆಯಲ್ಲೆ ನಾನಾರೀತಿಯ ಚರ್ಚೆಗೆ ಏಡೆ ಮಾಡಿಕೊಟ್ಟಂತಾಗಿದೆ.ಎಂಪವರ್ ಔಷಧಿ ದಾಸ್ತಾನು ಪ್ರಕರಣ, ಹಿರಿಯ ಅಧಿಕಾರಿಗಳ ಮೌನಕೃಷಿ ಇಲಾಖೆಯ ಕಸಬಾ ಕೇಂದ್ರದಲ್ಲಿ ಕೃಷಿ ಅಧಿಕಾರಿ ನಾಗೇಂದ್ರ ನಿಯಮ ಉಲ್ಲಂಘಿಸಿ ತಂದಿರಿಸಲಾಗಿದ್ದ ಎಂಪವರ್ ಔಷಧಿ ಪ್ರಕರಣದ ತನಿಖೆ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿದಿದೆ ಎನ್ನಲಾಗುತ್ತಿದೆ. ಕೃಷಿ ಕೇಂದ್ರದ ಬೀಗ ಲೋಕೇಶ್ ಎಂಬ ಅನ್ಯ ವ್ಯಕ್ತಿಗೆ ಕೃಷಿಅಧಿಕಾರಿ ನಾಗೇಂದ್ರ ಅವರೇ ನೀಡಿದ್ದುಆಡಿಯೋ ರೇಕಾರ್ಡ್‌ನಿಂದ ಬಹಿರಂಗಗೊಂಡಿದೆ ಮಾತ್ರವಲ್ಲ ಲೆಕ್ಕ ಸಹಾಯಕರ ಹೇಳಿಕೆಯಿಂದಲೇ ದೃಢಪಟ್ಟಿದ್ದರು ಸಹಾ ಇಲಾಖೆ ಮೌನ ವಹಿಸಿದೆ. ಕೃಷಿ ಕೇಂದ್ರದಲ್ಲಿ ಎಂ ಪವರ್ ಔಷಧಿ ಇತ್ತು, ಅದನ್ನ ನಾನು ನೋಡಿದ್ದೆ, ಈಕೇಂದ್ರದ ಕೀಗಳು ಲೆಕ್ಕ ಸಹಾಯಕು ಮತ್ತು ಕೃಷಿ ಅಧಿಕಾರಿ ನಾಗೇಂದ್ರ ಬಳಿ ಇತ್ತು. ನಾಗೇಂದ್ರ ಅವರೇ ಲೋಕೇಶ್ ಎಂಬುವರ ಕೈಗೆ ನೀಡಿದ್ದರು ಎಂಬುದು ಲೆಕ್ಕ ಸಹಾಯಕರು ನೀಡಿರುವಹೇಳಿಕೆಯಲ್ಲಿ ಸಾಬೀತಾಗಿದ್ದರೂ ಸಹಾ ಇಲಾಖೆ ಈವಿಚಾರದಲ್ಲಿ ಮೀನಾ ಮೇಷ ಎಣಿಸುತ್ತಿರುವುದು ಹಲವು ಸಂಶಯಕ್ಕೆ ಏಡೆ ಮಾಡಿಕೊಟ್ಟಿದೆಎಂ ಪವರ್ ಔಷಧಿ ಪ್ರಕರಣದಲ್ಲಿ ಹೆಚ್ಚಿನ ಸತ್ಯಾಂಶ ಹೊರಬೀಳಬೇಕಿದ್ದು ಇಬ್ಬರು ನೌಕರರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಹಿರಿಯ ಅಧಿಕಾರಿಗಳ ಅನುಮತಿ ಕೋರಿರುವೆ. ಸಿಬ್ಬಂದಿ ಕೊರತೆಯಿಂದಾಗಿ ದೊರೈರಾಜು ಅವರನ್ನು ಇಲ್ಲಿಯೆ ಉಳಿಸಿಕೊಳ್ಳಲಾಗಿದೆ-ಸುಂದ್ರಮ್ಮ, ಕೖಷಿ ಇಲಾಖೆಯ ಸಹಾಯಕ ನಿದೇ೯ಶಕಿ. ಕೊಳ್ಳೇಗಾಲಎಂಪವರ್ ಔಷಧಿ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಮೂಲಕ ತನಿಖೆ ಮಾಡಿಸಲಾಗುತ್ತಿದ್ದು ಸಾಕ್ಷಾಧಾರಗಳಿದ್ದರೆ, ಅವರು ಪಡೆದುಕೊಂಡು ಪ್ರಮಾಣಿಕ ತನಿಖೆ ನಡೆಸಬೇಕು, ಇಲ್ಲಿನ ಹಗರಣ, ಕರ್ತವ್ಯಲೋಪದ ಕುರಿತು ಕೆಡಿಪಿ ಸಭೆಯಲ್ಲಿ ಚಚಿ೯ಸುವೆ- ಎ ಆರ್ ಕೖಷ್ಣಮೂರ್ತಿ. ಶಾಸಕ