ಪ್ರತಿಭಟನೆಯ ವೇಳೆ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಪೊಲೀಸರು ತಕ್ಷಣ ಕಾನೂನು ಕ್ರಮಕೈಗೊಳ್ಳಬೇಕು.

ಹುಬ್ಬಳ್ಳಿ:

ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸೆ. 29ರಂದು ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದವರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಒತ್ತಾಯಿಸಿ ಶನಿವಾರ ಬಿಜೆಪಿ ಮಹಾನಗರ ಜಿಲ್ಲಾ ಎಸ್‌ಟಿ ಮೋರ್ಚಾ ವತಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಅಶೋಕ ವಾಲ್ಮೀಕಿ ನೇತೃತ್ವದಲ್ಲಿ ಪೂರ್ವ, ಪಶ್ಚಿಮ ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರಗಳ ಎಸ್‌ಟಿ ಮೋರ್ಚಾ ಪದಾಧಿಕಾರಿಗಳು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ವೇಳೆ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಪೊಲೀಸರು ತಕ್ಷಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ವೇಳೆ ಜಿಲ್ಲಾ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಾರುತಿ ಚಾಕಲಬ್ಬಿ, ಪೂರ್ವ ಕ್ಷೇತ್ರದ ಅಧ್ಯಕ್ಷ ಗುರು ಬನ್ನಿಕೊಪ್ಪ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಚನ್ನಪ್ಪ ಕಾಳೆವರ, ಪಶ್ಚಿಮ ಕ್ಷೇತ್ರದ ಅಧ್ಯಕ್ಷ ಪ್ರಕಾಶ ಗೊರನಕೊಳ್ಳ, ಚಂದ್ರು ನೂಲ್ವಿ, ಚೆನ್ನಬಸಪ್ಪ ಇಟ್ಟಿಗಟ್ಟಿ, ವೆಂಕಟೇಶ ಚಚಡಿ, ಮಹೇಶ ಸಂತಪ್ಪನವರ, ಗುರು ವಾಲಿಕಾರ, ಅಶೋಕ ಬೀಳಗಿ, ಮುಕೇಶ ದೊಡ್ಡಲಿಂಗನವರ, ವಿವೇಕ ನಾಯಕ, ಉಮಾ ನಾಯ್ಕರ, ವೀಣಾ ಬೀಳಗಿ, ಮುತ್ತುರಾಜ ಬೆಳಹಾರ, ಗೂಳಪ್ಪ ಪಟಾಯತ್, ವಿನಯ ಕಾಸಕ್ಕಿ, ಮಾಲತೇಶ ವಾಲಿಕಾರ, ಯಲ್ಲಪ್ಪ ನಾಯ್ಕರ, ಪರಶುರಾಮ ಬಾನಾಪುರ, ಹನುಮಂತ ತುಮಲುಲ, ಫಕ್ಕೀರಪ್ಪ ಹುಲಿಗೆಪ್ಪನವರ, ಮುತ್ತು ಲಾಯದಗುಂದ, ಇರ್ಫಾನ್ ಶೇಖ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.