ಸಾರಾಂಶ
ಬಸವಕಲ್ಯಾಣದಲ್ಲಿ ಮಹ್ಮದ ಪೈಗಂಬರ್ ಕುರಿತು ಅವಹೇಳನಕಾರಿ ಮಾತನಾಡಿದ ನರಸಿಂಹಾನಂದ ಸ್ವಾಮೀಜಿ ಮೇಲೆ ಕ್ರಮಕ್ಕೆ ಒತ್ತಾಯಿಸಿ ಮುಸ್ಲಿಂ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಬಸವಕಲ್ಯಾಣದಲ್ಲಿ ಮುಸ್ಲಿಂ ಬಾಂಧವರಿಂದ ಪ್ರತಿಭಟನೆ । ಪ್ರತಿಭಟನೆಯಲ್ಲಿ ಸುಮಾರು 2000ಕ್ಕೂ ಅಧಿಕ ಜನ ಭಾಗಿ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಮಾತನಾಡಿದ ನರಸಿಂಹಾನಂದ ಸ್ವಾಮೀ ಮೇಲೆ ಕ್ರಮಕ್ಕೆ ಒತ್ತಾಯಿಸಿ ನಗರದಲ್ಲಿ ಮುಸ್ಲಿಂ ಸಮಾಜದವರು ಕೋಟೆಯಿಂದ ಡಾ.ಅಂಬೇಡ್ಕರ ವೃತ್ತದ ವರೆಗೆ ಬೃಹತ್ ಪ್ರತಿಭಟನೆ ನಡೆಸಿ ಯತಿನರಸಿಂಹಾನಂದ ಸ್ವಾಮೀಜಿ ಮೇಲೆ ಕೂಡಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸುಮಾರು 2000ಕ್ಕೂ ಅಧಿಕ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನ್ಯಾಯಕ್ಕಾಗಿ ನಾವು ಹೋರಾಟ ಮಾಡುತ್ತಿದ್ದು ಸಮಾಜ ವಿರೋಧಿ, ಧರ್ಮ ವಿರೋಧಿ ಭಾಷಣಗಳನ್ನು ನಡೆಯಬಾರದು. ಧರ್ಮ ವಿರೋಧಿ ಮಾತನಾಡುವರನ್ನು ಅವಹೇಳನಕಾರಿ ಮಾಡುವರನ್ನು ಸರ್ಕಾರ ದಂಡಿಸಿ ಅವರನ್ನು ಜಾಮಿನು ಆಗದಂತೆ ಕಾನೂನು ರೂಪಿಸಬೇಕು.ಸಮಾಜದಲ್ಲಿ ಶಾಂತಿ ಸೌರ್ಹಾದತೆ ಕಾಪಾಡಲು ಮುನ್ನೇಚರಿಕೆ ವಹಿಸಬೇಕು. ಪೈಗಂಬರ್ ವಿರುದ್ಧ ಅವಹೇಳನಕಾರಿ ಮಾತನಾಡಿದ ಯತಿನರಸಿಂಹಾನಂದ ಸ್ವಾಮೀಜಿ ಮೇಲೆ ಕಠಿಣ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಜಾಹೀದ ಪಾಶಾ ಖುರೇಷಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಅಮೀರೊದ್ದಿನ ಚೌದ್ರಿ, ಏಜಾಜ ಲಾತೂರೆ, ಸುರೇಶ ಮೋರೆ ಸೇರಿ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.