ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರ ಅವಹೇಳನ ಆರೋಪ; ಹಿಂದು ಸಂಘಟನೆಗಳ ಮುತ್ತಿಗೆ, ಶಿಕ್ಷಕಿ ಅಮಾನತಿಗೆ ಗಡುವು

| Published : Feb 11 2024, 01:45 AM IST

ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರ ಅವಹೇಳನ ಆರೋಪ; ಹಿಂದು ಸಂಘಟನೆಗಳ ಮುತ್ತಿಗೆ, ಶಿಕ್ಷಕಿ ಅಮಾನತಿಗೆ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಮನಸ್ಸಿನಲ್ಲಿ ಧರ್ಮ ವಿರೋಧಿ ಭಾವನೆಯನ್ನು ಮೂಡಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗದ ವಿರುದ್ಧ ಪೋಷಕರು, ಹಿಂದು ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರಿನ ಜೆಪ್ಪುವಿನ ಕ್ರೈಸ್ತ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯೊಬ್ಬರು ಶ್ರೀರಾಮ ದೇವರ ಅವಹೇಳನ ಮಾಡಿದ ಆರೋಪದಲ್ಲಿ ಪೋಷಕರು ಹಾಗೂ ಹಿಂದು ಕಾರ್ಯಕರ್ತರು ಶನಿವಾರ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಅಲ್ಲದೆ ಶಿಕ್ಷಕಿಯನ್ನು ಅಮಾನತುಗೊಳಿಸುವಂತೆ ಮೂರು ದಿನಗಳ ಗಡುವು ವಿಧಿಸಿದ್ದಾರೆ. ಏಳನೇ ತರಗತಿ ಮಕ್ಕಳಿಗೆ ವರ್ಕ್‌ ಈಸ್‌ ವರ್ಶಿಪ್‌ ಎಂಬ ಪಠ್ಯವಿದೆ. ಅದೇ ಪಠ್ಯದ ಪಾಠ ಮಾಡುತ್ತಿದ್ದಾಗ ಶಾಲಾ ಶಿಕ್ಷಕಿಯಿಂದ ಅಯೋಧ್ಯೆ ಮತ್ತು ರಾಮ ದೇವರ ಅವಹೇಳನ ಆರೋಪ ಕೇಳಿಬಂದಿದ್ದು, ಈ ಕುರಿತು ಪೋಷಕಿಯೊಬ್ಬರ ಆಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಆಡಿಯೋ ಜತೆಗೆ ಶಾಲೆಗೆ ಮುತ್ತಿಗೆ ಹಾಕಿ ಎಂಬ ಸಂದೇಶವೂ ವೈರಲ್ ಆಗಿತ್ತು. ಶನಿವಾರ ಮಧ್ಯಾಹ್ನ ವೇಳೆಗೆ ಶಾಲಾ ಆವರಣದಲ್ಲಿ ಸೇರುವಂತೆ ಸಂದೇಶ ರವಾನೆಯಾಗಿದ್ದು, ಅದರಂತೆ ಪೋಷಕರು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಗೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ಮಕ್ಕಳ ಮನಸ್ಸಿನಲ್ಲಿ ಧರ್ಮ ವಿರೋಧಿ ಭಾವನೆಯನ್ನು ಮೂಡಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗದ ವಿರುದ್ಧ ಪೋಷಕರು, ಹಿಂದು ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಾಹ್ನ ಬಳಿಕ ಶಾಲೆ ಬಂದ್ ಆಗಿದ್ದರೂ ಕೆಲವು ಪೋಷಕರು, ಕಾರ್ಯಕರ್ತರ ಜಮಾವಣೆಗೊಂಡು ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ತರಗತಿಯಲ್ಲಿ ಪಾಠ ಮಾಡುವ ವೇಳೆ ಶಿಕ್ಷಕಿಯೊಬ್ಬರು, ರಾಮ ದೇವರ ಅವಹೇಳನ ಮಾಡಿದ್ದು, ''''''''''''''''''''''''''''''''ಶ್ರೀರಾಮ ಕಲ್ಲು ಅಂದರಂತೆ, ಅಯೋಧ್ಯೆಯಲ್ಲಿ ಡೆಕೋರೇಷನ್ ಮಾಡಿರೋದಂತೆ'''''''''''''''''''''''''''''''' ಎಂದು ಮಕ್ಕಳ ಪೋಷಕರು ಆಕ್ರೋಶಿಸಿದರು.

ಪಠ್ಯಕ್ಕೆ ಸಂಬಂಧ ಪಡದ ಹಿಂದೂ ಧರ್ಮ ಹಾಗೂ ಮೋದಿ ಬಗ್ಗೆ ಮಾತನಾಡಿದ್ದಾರೆ. ''''''''''''''''ಅಯೋಧ್ಯೆಯಲ್ಲಿ ಮಸೀದಿ ಕೆಡವಿ ಮಂದಿರ ಕಟ್ಟುವ ಅವಶ್ಯಕತೆ ಇತ್ತಾ? ನೀವು ಎಷ್ಟೇ ಡೆಕೋರೇಷನ್ ಮಾಡಿದರೂ ಅಯೋಧ್ಯೆಯಲ್ಲಿ ರಾಮ ಇಲ್ಲ'''''''''''''''' ಎಂದಿದ್ದಾರೆ.

ಮೋದಿ ಗುಜರಾತ್ ಸಿಎಂ ಆಗಿದ್ದಾಗ ರೈಲಿನಲ್ಲಿ ಜನರನ್ನ ಕೊಂದಿದ್ದಾರೆ ಎಂದೆಲ್ಲಾ ಹೇಳಿದ್ದಾರೆ ಎನ್ನುವುದು ಪೋಷಕರ ಆರೋಪ. ಪಾಠದ ಮಧ್ಯೆ ಇದರ ಅಗತ್ಯ ಇತ್ತಾ? ನಾವು ಹೆಡ್ ಮಾಸ್ಟರ್ ಭೇಟಿಯಾಗಿ ತರಾಟೆಗೆ ತೆಗೆದುಕೊಂಡಿದ್ದೇವೆ. ಶಿಕ್ಷಕಿಯನ್ನು ಅಮಾನತು ಮಾಡಲು ಆಗ್ರಹಿಸಿದ್ದೇವೆ. ಮಾಡದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದೇವೆ. ಸದ್ಯ ಸೋಮವಾರ ವರೆಗೆ ಮೂರು ದಿನಗಳ ಕಾಲ ಗಡುವು ಕೊಡಲಾಗಿದೆ. ಅಮಾನತು ಮಾಡದೇ ಇದ್ದರೆ ನಾವು ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ಪೋಷಕರು ಹಾಗೂ ಹಿಂದು ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜಾ ಶಾಲೆಗೆ ಆಗಮಿಸಿ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಜತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಐವನ್‌ ಡಿಸೋಜಾ ಅವರ ಕಾರನ್ನು ತಡೆದ ಹಿಂದು ಸಂಘಟನೆ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.

ಈ ಬಗ್ಗೆ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರು ಪ್ರಕರಣ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ.