ಉತ್ತಮ ಶಿಕ್ಷಣದಿಂದ ದೇಶ ವಿಶ್ವಗುರು: ಟಿ.ದಾದಾಪೀರ್

| Published : Jan 20 2024, 02:03 AM IST

ಉತ್ತಮ ಶಿಕ್ಷಣದಿಂದ ದೇಶ ವಿಶ್ವಗುರು: ಟಿ.ದಾದಾಪೀರ್
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಷನಲ್ ಆಂಗ್ಲ ಮಾದ್ಯಮ ಶಾಲೆ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಶಾಲೆ 47ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಟಿ.ದಾದಾಪೀರ್ ಉತ್ತಮ ಶಿಕ್ಷಣದಿಂದ ದೇಶ ವಿಶ್ವಗುರುವಾಗುತ್ತದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ಉತ್ತಮ ಶಿಕ್ಷಣದಿಂದ ದೇಶ ವಿಶ್ವಗುರುವಾಗುತ್ತದೆ ಎಂದು ಪುರಸಭೆ ಸದಸ್ಯ ಟಿ.ದಾದಾಪೀರ್ ಹೇಳಿದ್ದಾರೆ.

ಪಟ್ಟಣದ ನ್ಯಾಷನಲ್ ಆಂಗ್ಲ ಮಾದ್ಯಮ ಶಾಲೆ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಶಾಲೆ 47ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಎಲ್ಲ ವರ್ಗದವರಿಗೂ ಆಂಗ್ಲ ಶಿಕ್ಷಣ ದೊರಕಬೇಕು ಎನ್ನುವ ಆಶಯ ದೊಂದಿಗೆ ಪಟ್ಟಣದಲ್ಲಿ ಅನೇಕ ಮಹನೀಯರ ಪ್ರಯತ್ನದಿಂದ ಈ ಶಾಲೆ ಸ್ಥಾಪಿಸಲಾಗಿದೆ, ಇಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದು ಸಂತೋಷ ತಂದಿದೆ. ಶಾಲೆ ಸೇವಾ ಮನೋಭಾವ ಹೊಂದಿದೆ, ಬಡವರ್ಗ ದವರಿಗೂ ಉತ್ತಮ ಶಿಕ್ಷಣ ದೊರಕಬೇಕು ಎಂದು ಹೇಳಿದರು.

ಪುರಸಭೆ ಸದಸ್ಯೆ ಗಿರಿಜಾ ಪ್ರಕಾಶ್ ವರ್ಮ ಮಾತನಾಡಿ ಶಿಸ್ತು ಮತ್ತು ಸಂಯಮ ಕಾಪಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.

ಲೀಡರ್ ಶಿಪ್ ಬೌಲಿವಾರ್ಡ್ ಪ್ರೈ..ಲಿ.ನ ಏರಿಯಾ ಮ್ಯಾನೇಜರ್ ಕಾರ್ತಿಕ್ ಚಂದ್ರ ಎಸ್. ಮಾತನಾಡಿ ಮಕ್ಕಳು ಮಾದರಿ ಪ್ರಜೆಗಳಾಗಬೇಕು ಎಂದು ಪೋಷಕರಿಗೆ ಆಸೆ ಇರುತ್ತದೆ. ಶಾಲೆಗಳಿಂದ ಅದು ಶುರುವಾಗಬೇಕು, ಹೊಸ ಸವಾಲನ್ನು ಎದುರಿ, ತಾಂತ್ರಿಕತೆಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.ನ್ಯಾಷನಲ್ ಸ್ಕೂಲ್.ನ ಅಡಳಿತ ಮಂಡಳಿ ನಿರ್ದೇಶಕ ಟಿ.ವಿ.ರೇವಣ್ಣ ಮಾತನಾಡಿ ಬಹಳಷ್ಟು ಜನರು ಶ್ರಮಪಟ್ಟು ಆಸಕ್ತಿ ಯಿಂದ ಈ ಶಾಲೆ ಸ್ಥಾಪಿಸಿದ್ದಾರೆ ಎಂದರು.

ಪೋಷಕರ ಪರವಾಗಿ ಲೋಹಿತ್‌ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಜಿ.ಹೇಮಲತ ಶಾಲೆಯ ವಾರ್ಷಿಕ ವರದಿ ವಾಚಿಸಿದರು. ಲೇಖಕ ತ.ಮ.ದೇವಾನಂದ್, ಶಾಲೆಯ ಮುಖ್ಯ ಶಿಕ್ಷಕಿ ವನಮಾಲ, ಶಾಲೆಯ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

19ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ನ್ಯಾಷನಲ್ ಸ್ಕೂಲ್‌ ನಿಂದ ಏರ್ಪಡಿಸಿದ್ದ ಶಾಲೆ 47ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪುರಸಭೆ ಸದಸ್ಯರಾದ ಟಿ.ದಾದಾಪೀರ್, ಗಿರಿಜಾ ಪ್ರಕಾಶ್ ವರ್ಮ, ಶಾಲೆ ಅಡಳಿತ ಮಂಡಳಿ ನಿರ್ದೇಶಕ ರೇವಣ್ಣ, ಕಾರ್ಯದರ್ಶಿ ಜಿ.ಹೇಮಲತ, ಮುಖ್ಯ ಶಿಕ್ಷಕಿ ವನಮಾಲ ಮತ್ತಿತರರು. ಇದ್ದಾರೆ.

--------------------