ಆಡಳಿತದ ಅನುಭವ, ರಾಜಕೀಯ ಪಕ್ವತೆ ಹಾಗೂ ದೀರ್ಘಕಾಲದ ಸಾರ್ವಜನಿಕ ಬದುಕಿಗೆ ಮತ್ತೊಮ್ಮೆ ಮನ್ನಣೆ ದೊರೆತಿದ್ದು, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕಾರವಾರಆಡಳಿತದ ಅನುಭವ, ರಾಜಕೀಯ ಪಕ್ವತೆ ಹಾಗೂ ದೀರ್ಘಕಾಲದ ಸಾರ್ವಜನಿಕ ಬದುಕಿಗೆ ಮತ್ತೊಮ್ಮೆ ಮನ್ನಣೆ ದೊರೆತಿದ್ದು, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ, ಪಾರದರ್ಶಕತೆ ಹಾಗೂ ಜನಪರ ಸೇವೆಗೆ ಒತ್ತು ನೀಡುವ ಮಹತ್ವದ ಹೊಣೆಗಾರಿಕೆ ಮತ್ತೆ ದೇಶಪಾಂಡೆ ಅವರ ಹೆಗಲೇರಿದೆ.ಉತ್ತರ ಕನ್ನಡದ ಹಳಿಯಾಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ದೇಶಪಾಂಡೆ, 2023ರ ವಿಧಾನಸಭಾ ಚುನಾವಣೆಯಲ್ಲಿ 9ನೇ ಬಾರಿಗೆ ಗೆದ್ದು ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಹತ್ತು ಚುನಾವಣೆಗಳನ್ನು ಎದುರಿಸಿ 9 ಬಾರಿ ಜಯಗಳಿಸಿರುವ ಅವರು ರಾಜ್ಯದ ಅತ್ಯಂತ ಹಿರಿಯ ಶಾಸಕರಲ್ಲಿ ಒಬ್ಬರು.ಜನತಾ ಪರಿವಾರದಿಂದ ರಾಜಕೀಯ ಜೀವನ ಆರಂಭಿಸಿ, ಬಳಿಕ ಕಾಂಗ್ರೆಸ್ ಸೇರಿರುವ ದೇಶಪಾಂಡೆ ರಾಮಕೃಷ್ಣ ಹೆಗಡೆ ಅವರ ಕಾಲದಿಂದ ಹಲವು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಎಸ್.ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಗಳಲ್ಲಿ ಬೃಹತ್ ಕೈಗಾರಿಕೆ, ಕೃಷಿ, ಕಂದಾಯ, ಪ್ರವಾಸೋದ್ಯಮ ಹೀಗೆ ಹಲವು ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಈಗಾಗಲೇ ಹಲವು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿರುವ ದೇಶಪಾಂಡೆ, ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಗೂ ಆಡಳಿತದಲ್ಲಿ ಉತ್ತರದಾಯಿತ್ವಕ್ಕೆ ಒತ್ತು ನೀಡಿದ್ದಾರೆ. ಇದೀಗ ಮತ್ತೊಮ್ಮೆ ಸಿಕ್ಕಿರುವ ಜವಾಬ್ದಾರಿ ಅವರ ಆಡಳಿತಾನುಭವವನ್ನು ಸಮರ್ಥವಾಗಿ ಬಳಸಿಕೊಳ್ಳಲು ಅವಕಾಶ ಆದಂತಾಗಿದೆ.ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷತೆಯ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಎಲ್ಲರ ಸಹಕಾರದಿಂದ ಕೊಟ್ಟಿರುವ ಹೊಣೆಗಾರಿಕೆ ನಿಭಾಯಿಸುತ್ತೇನೆ ಎನ್ನುತ್ತಾರೆ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ.

ಸಂಪುಟ ದರ್ಜೆ ಸ್ಥಾನಮಾನ

ಸಿದ್ದರಾಮಯ್ಯ ಸಂಪುಟದಲ್ಲಿ ದೇಶಪಾಂಡೆ ಸಚಿವ ಸಂಪುಟ ಸೇರುವ ನಿರೀಕ್ಷೆ ಇತ್ತು. ಆದರೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದರು. ಈಗ ಡಿ.ಕೆ. ಶಿವಕುಮಾರ ಸಂಪುಟದಲ್ಲೂ ಸಚಿವರಾಗಲಿದ್ದಾರೆ ಎಂದೇ ಬಿಂಬಿತವಾಗಿತ್ತು. ಆದರೆ ಜಿಲ್ಲೆಯ ಎಲ್ಲ ನಾಲ್ವರು ಶಾಸಕರಲ್ಲಿ ಯಾರೊಬ್ಬರೂ ಸಚಿವರಾಗಲಿಲ್ಲ. ಈಗ ಮತ್ತೆ ದೇಶಪಾಂಡೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗುವ ಮೂಲಕ ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದಾರೆ.