ಸಾರಾಂಶ
ದೇಸಿ ತಳಿಗಳ ಸಂರಕ್ಷಣೆ ಮತ್ತು ಅಗತ್ಯತೆ ಕುರಿತು ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಎಲ್., ಸುರ್ಯದ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಭತ್ತದ ತಳಿ ಸಂರಕ್ಷಣೆ, ಅಗತ್ಯತೆ ವಿಧಾನ ಕುರಿತು ಹಾಗೂ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ ಪುರಸ್ಕೃತ ತಳಿ ತಪಸ್ವಿ ಬಿ. ಕೆ. ದೇವರಾವ್ ಭತ್ತದ ತಳಿ ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ದ.ಕ. ಜಿಲ್ಲಾ ಮಟ್ಟದ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಾಗಾರ ಸೋಮವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಉಪ ಕೃಷಿ ನಿರ್ದೇಶಕ ಶಿವಶಂಕರ್ ಎಚ್. ದಾನೆಗೊಂಡರ್ ಮಾತನಾಡಿ, ಹಿಂದಿನ ದಿನಗಳಲ್ಲಿ ರೈತರು ಸಾವಯವ ಗೊಬ್ಬರದಿಂದ ಕೃಷಿ ಮಾಡುತ್ತಿದ್ದ ಕಾರಣ ಮಾನವನ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿತ್ತು. ಇಂದು ಹಲವಾರು ಹೊಸ ತಳಿಗಳು ಅಭಿವೃದ್ಧಿಗೊಳ್ಳುತ್ತಿವೆ. ಹಳೆ ತಳಿಗಳ ಜತೆ ಇವುಗಳನ್ನು ಸಂರಕ್ಷಿಸುವ ಅಗತ್ಯವಿದೆ ಹಾಗೂ ಆಯಾಯ ಸ್ಥಳಗಳಿಗೆ ಹೊಂದಾಣಿಕೆಯಾಗಬಲ್ಲ ತಳಿಗಳನ್ನು ನಾಟಿ ಮಾಡಿದರೆ ಉತ್ತಮ ಫಲಿತಾಂಶ ದೊರಕುತ್ತದೆ ಎಂದು ಹೇಳಿದರುಮಂಗಳೂರು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ.ಟಿ.ಜೆ. ರಮೇಶ್ ಇದ್ದರು.
ದೇಸಿ ತಳಿಗಳ ಸಂರಕ್ಷಣೆ ಮತ್ತು ಅಗತ್ಯತೆ ಕುರಿತು ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಎಲ್., ಸುರ್ಯದ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಭತ್ತದ ತಳಿ ಸಂರಕ್ಷಣೆ, ಅಗತ್ಯತೆ ವಿಧಾನ ಕುರಿತು ಹಾಗೂ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ ಪುರಸ್ಕೃತ ತಳಿ ತಪಸ್ವಿ ಬಿ. ಕೆ. ದೇವರಾವ್ ಭತ್ತದ ತಳಿ ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು.ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಎ.ಡಿ. ಸ್ವಾಗತಿಸಿದರು.ಬೆಳ್ತಂಗಡಿ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ ಕೃಷಿ ನಿರ್ದೇಶಕ ಗಣೇಶ್ ವಂದಿಸಿದರು.