ಸಾರಾಂಶ
ಧೃಡತೆಯ ಓದು ಮತ್ತು ಕೌಶಲ್ಯಾಧಾರಿತ ಶಿಕ್ಷಣ ಪಡೆದಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಮಹಾವಿದ್ಯಾಲಯದ 2025- 26ನೇ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪದವಿ ಶಿಕ್ಷಣ ಅತ್ಯಂತ ಮುಖ್ಯವಾದ ಘಟ್ಟವಾಗಿದ್ದು, ಪದವಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಪೋಷಕರ ಕನಸುಗಳನ್ನು ನನಸಾಗಿಸಲು ಪರಿಶ್ರಮ, ಧೃಡತೆಯ ಓದು ಮತ್ತು ಕೌಶಲ್ಯಾಧಾರಿತ ಶಿಕ್ಷಣ ಪಡೆದಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮೈಸೂರು ವಿವಿ ಸಂಯೋಜನೆ ಪಡೆದಿರುವ ನಮ್ಮ ಕಾಲೇಜು, ನ್ಯಾಕ್ ಬಿ ಗ್ರೇಡ್ ಪಡೆದಿದೆ. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಸಶಕ್ತ ಮಹಿಳಾ ಸಬಲೀಕರಣದ ಧ್ಯೇಯವಾಕ್ಯವನ್ನು ನಮ್ಮ ಸಂಸ್ಥೆಯು ಹೊಂದಿದೆ ಎಂದರು.ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಕೆ.ಎಸ್. ಸುಕೃತಾ ಅವರು, ಕಾಲೇಜಿನ ಪರಿಚಯ, ಯಶೋಗಾಥೆ ಮತ್ತು ಕಾರ್ಯಕಾರಿ ಸಮಿತಿಗಳ ಬಗೆಗೆ ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವಿನೋದ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಬೃಂದಾ ಅವರು ವಿದ್ಯಾರ್ಥಿಗಳಿಗೆ ಕಾಲೇಜಿನ ನೀತಿ ನಿಯಮಗಳನ್ನು ವಿವರಿಸಿದರು.
ಕಾಲೇಜಿನ ಗ್ರಂಥಪಾಲಕಿ ಪದ್ಮಾ ಅವರು, ಗ್ರಂಥಾಲಯದ ಮಹತ್ವ ಮತ್ತು ಗ್ರಂಥಾಲಯದ ಬಳಕೆ, ಮತ್ತಿತರ ಮಾಹಿತಿ ಒದಗಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಮಾಲತಿ ಅವರು, ಕ್ರೀಡೆ, ಎನ್ಎಸ್ಎಸ್, ವೈ.ಆರ್.ಸಿ. ಲೀಗಲ್ ಲಿಟ್ರೆಸಿ, ರೇಂಜರ್ಸ್ ಇತರೆ ಸಮಿತಿಗಳ ಪರಿಚಯವನ್ನು ಮಾಡಿದರು. ವಿವಿಧ ವಿಭಾಗ ಮುಖ್ಯಸ್ಥರು, ಅಧ್ಯಾಪಕರು ಇದ್ದರು.