ತಂತ್ರಜ್ಞಾನ ಮುಂದುವರಿದರೂ ಕೃತಕ ರಕ್ತ ಉತ್ಪಾದನೆ ಸಾದ್ಯವಿಲ್ಲ: ಹನಮಂತಪ್ಪ ಮಾಹಿತಿ

| Published : Nov 25 2025, 01:45 AM IST

ತಂತ್ರಜ್ಞಾನ ಮುಂದುವರಿದರೂ ಕೃತಕ ರಕ್ತ ಉತ್ಪಾದನೆ ಸಾದ್ಯವಿಲ್ಲ: ಹನಮಂತಪ್ಪ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೃತಕವಾಗಿ ರಕ್ತ ಉತ್ಪಾದನೆ ಮಾಡಲು ಸಾಧ್ಯವಿಲ್ಲ ಎಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಕೇಂದ್ರದ ಆಪ್ತ ಸಮಾಲೋಚಕ ಹನುಮಂತಪ್ಪ ತಿಳಿಸಿದರು.

- ಶೆಟ್ಟಿಕೊಪ್ಪದಲ್ಲಿ ಕಡಹಿನಬೈಲು ಗ್ರಾಪಂ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೃತಕವಾಗಿ ರಕ್ತ ಉತ್ಪಾದನೆ ಮಾಡಲು ಸಾಧ್ಯವಿಲ್ಲ ಎಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಕೇಂದ್ರದ ಆಪ್ತ ಸಮಾಲೋಚಕ ಹನುಮಂತಪ್ಪ ತಿಳಿಸಿದರು.

ಭಾನುವಾರ ಶೆಟ್ಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಡಹಿನಬೈಲು ಗ್ರಾಪಂ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿ ಕೇಂದ್ರ, ಎನ್.ಆರ್.ಪುರ ಎಚ್.ಡಿ.ಎಫ್.ಸಿ ಬ್ಯಾಂಕ್ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾಹಿತಿ ನೀಡಿದರು. ಆರೋಗ್ಯವಂತ ವ್ಯಕ್ತಿ ದೇಹದಲ್ಲಿ 5- 6 ಲೀ. ರಕ್ತ ಇರುತ್ತದೆ. ರಕ್ತ ನೀಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲಿದೆ. ರಕ್ತ ನೀಡಿದ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆ ಗಳಿಂದ ದೂರವಿರಬಹುದು ಎಂದರು.

ಅತಿಥಿಯಾಗಿದ್ದ ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಕಡಹಿನಬೈಲು ಗ್ರಾಪಂ ನಿಂದ 2 ನೇ ಬಾರಿ ರಕ್ತದಾನ ಶಿಬಿರ ನಡೆಸುತ್ತಿದ್ದೇವೆ. ಗ್ರಾಪಂನಿಂದ ಗ್ರಾಮದಲ್ಲಿ ರಸ್ತೆ, ನೀರು, ಮನೆ, ಗ್ರಾಮ ನೈರ್ಮಲ್ಯ ಕಾಮಗಾರಿ ಜೊತೆಗೆ ಗ್ರಾಮಸ್ಥರ ಆರೋಗ್ಯದ ಕಡೆಯೂ ಗಮನ ಹರಿಸುತ್ತಿದೆ ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಕಡಹಿಬೈಲು ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ ಮಾತನಾಡಿ, ಗ್ರಾಪಂ ಏರ್ಪಡಿಸಿರುವ ರಕ್ತದಾನ ಶಿಬಿರಕ್ಕೆ ಪ್ರತಿಯೊಬ್ಬ ಗ್ರಾಮಸ್ಥರು ಕೈ ಜೋಡಿಸಿದ್ದಾರೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ರಕ್ತದಾನ ಎಂದರೆ ಅದು ಜೀವದಾನ ಮಾಡಿದಂತೆ.ಈ ಹಿಂದೆ ಲಯನ್ಸ್ , ರೋಟರಿ ಕ್ಲಬ್ ಗಳು ಮಾತ್ರ ರಕ್ತದಾನ ನಡೆಸುತ್ತಿದ್ದವು. ಈಗ ಗ್ರಾಪಂಗಳು ಸಹ ರಕ್ತದಾನ ಏರ್ಪಡಿಸಿರುವುದು ಬೇರೆ ಗ್ರಾಮ ಪಂಚಾಯಿತಿಗಳಿಗೆ ಸ್ಪೂರ್ತಿ ಎಂದರು.

ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಅವರು ಕುವೆಂಪು ಅವರ ಭಾವಚಿತ್ರವನ್ನು ಅತಿಥಿಗಳಿಗೆ ನೀಡಿದರು. ಗ್ರಾಮ ಪಂಚಾಯಿತಿಯಿಂದ ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಕೇಂದ್ರದ ಆಪ್ತ ಸಮಾಲೋಚಕ ಹನುಮಂತಪ್ಪ ಅವರನ್ನು ಗೌರವಿಸಲಾಯಿತು.

ಶಿಬಿರದಲ್ಲಿ 13 ಮಹಿಳೆಯರು ಸೇರಿ 106 ಜನರು ರಕ್ತದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಶೆಟ್ಟಿಕೊಪ್ಪ ಚರ್ಚನ ಧರ್ಮ ಗುರು ರೆ.ಫಾ.ಸೆಬಾಸ್ಟಿನ್, ಸೂಸಲವಾನಿ ಚರ್ಚನ ಧರ್ಮಗುರು ಜೋನ್ಸನ್, ಕರುಗುಂದ ಚರ್ಚನ ಧರ್ಮ ಗುರು ಫಾ.ಸಿನೋಜು, ಗುಳದಮನೆ ಚರ್ಚನ ಧರ್ಮಗುರು ಫಾ.ಜೋಬೀಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಶೈಲಾ ಮಹೇಶ್, ವಾಣಿ ನರೇಂದ್ರ, ಎ.ಬಿ.ಮಂಜುನಾಥ್, ಪೂರ್ಣಿಮಾ ಸಂತೋಷ್, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ರಘು, ಬೇಸಿಲ್, ಜಯರಾಂ, ನಾಗರಾಜ್,ಜೇಸಿ ಸಂಸ್ಥೆ ನಿಯೋಜಿತ ಅಧ್ಯಕ್ಷ ಆದರ್ಶ ಬಿ ಗೌಡ, ಎಚ್.ಡಿ.ಎಫ್.ಸಿ. ಬ್ಯಾಂಕಿನ ವ್ಯವಸ್ಥಾಪಕಿ ಅಶ್ವಿನಿ, ಮೆಗ್ಗಾನ್ ವೈದ್ಯಾಧಿಕಾರಿ ಡಾ.ಆನಂದ್, ಡಾ.ಪೂರ್ಣಿಮ, ಗೇರ್ ಬೈಲು ಎಲ್ದೋ, ಸುನಾಮಿ ಜೋಯಿ, ಅಜೇಶ್ , ಎ.ಬಿ.ಮಂಜುನಾಥ್ ಶೆಟ್ಟಿಕೊಪ್ಪ ಮಹೇಶ್ ಇದ್ದರು.