ಚಿಕ್ಕಮಗಳೂರು ಗ್ರಾಮೀಣ ಜನರಿಗೆ ಮನೆ ಬಾಗಿಲಿಗೆ ಕುಡಿವ ನೀರು ಒದಗಿಸುವ ಜಲಜೀವನ್ ಮಿಷನ್ ಯೋಜನೆ ರಾಜ್ಯದಲ್ಲಿ ಗಂಭೀರ ಲೋಪದೋಷಗಳಿಂದ ಕೂಡಿದೆ. ಕಳಪೆ ಕಾಮಗಾರಿ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆಗ್ರಹಿಸಿದ್ದಾರೆ.

(ಸಿ.ಟಿ.ರವಿ ಪೋಟೋ ಮಗ್‌ಶಾಟ್‌)

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗ್ರಾಮೀಣ ಜನರಿಗೆ ಮನೆ ಬಾಗಿಲಿಗೆ ಕುಡಿವ ನೀರು ಒದಗಿಸುವ ಜಲಜೀವನ್ ಮಿಷನ್ ಯೋಜನೆ ರಾಜ್ಯದಲ್ಲಿ ಗಂಭೀರ ಲೋಪದೋಷಗಳಿಂದ ಕೂಡಿದೆ. ಕಳಪೆ ಕಾಮಗಾರಿ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆಗ್ರಹಿಸಿದ್ದಾರೆ.ಈ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು, ಯೋಜನೆ ಅನುಷ್ಠಾನದ ಅವ್ಯವಸ್ಥೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲು ಮನವಿ ಮಾಡಿದ್ದಾರೆ.ರಾಜ್ಯದಲ್ಲಿ 1,01,30,702 ಗ್ರಾಮೀಣ ಕುಟುಂಬಗಳಿದ್ದು, ಯೋಜನೆ ಆರಂಭಕ್ಕೂ ಮುನ್ನ 24,28,517 ಮನೆಗಳಿಗೆ ನಳ ಸಂಪರ್ಕವಿತ್ತು. ಯೋಜನೆಯಡಿ 63,74,100 ಮನೆಗಳಿಗೆ ಸಂಪರ್ಕ ಕಲ್ಪಿಸಿ. ಒಟ್ಟು 88,02,617 ಮನೆಗಳಿಗೆ ನಳ ಸಂಪರ್ಕ ಒದಗಿಸಲಾಗಿದೆ. ಇದಕ್ಕೆ ಸುಮಾರು ₹37,901.37 ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದ್ದಾರೆ.ಸಾಮರ್ಥ್ಯವಿಲ್ಲದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸುವುದು, ಒಬ್ಬ ಗುತ್ತಿಗೆದಾರನಿಗೆ ಹಲವು ಕಾಮಗಾರಿ ನೀಡುವುದು ಹಾಗೂ ನೀರಿನ ಮೂಲ ಖಚಿತಪಡಿಸಿಕೊಳ್ಳದೆ ಪೈಪ್‌ಲೈನ್, ಟ್ಯಾಂಕ್ ನಿರ್ಮಿಸಿರುವುದು ಯೋಜನೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದ್ದಾರೆ.ಹೊಸದಾಗಿ ನಿರ್ಮಿಸಿದಓವರ್‌ಹೆಡ್ ಟ್ಯಾಂಕ್‌ ಸೋರಿಕೆ, ಎತ್ತರದ ಪ್ರದೇಶಗಳ ಮನೆಗಳಿಗೆ ಸಮರ್ಪಕ ನೀರು ತಲುಪ ದಿರುವುದು ಹಾಗೂ ಕೆಲವೆಡೆ ಕಾಮಗಾರಿ ಅರ್ಧಕ್ಕೆ ಬಿಟ್ಟಿರುವ ದೂರು ಗಳಿವೆ. ಇಂತಹ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಪೈಪ್‌ಲೈನ್‌ಗೆ ಅಗೆದ ರಸ್ತೆಗಳನ್ನು ಮುಚ್ಚದೆ ಜನರಿಗೆ ತೊಂದರೆಯಾಗುತ್ತಿದೆ. ದಾಖಲೆಗಳಲ್ಲಿ ಕಾಮಗಾರಿ ಪೂರ್ಣ ಗೊಂಡಿ ರುವುದಕ್ಕಿಂತ ನಿಜವಾಗಿ ಮನೆಗಳಿಗೆ ನೀರು ತಲುಪುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ 10-15 ಗ್ರಾಮಗಳ ಕಾಮಗಾರಿಗಳನ್ನು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸ ಬೇಕು. ಕಳಪೆ ಕಾಮಗಾರಿ, ನೀರು ಪೂರೈಕೆ ವೈಫಲ್ಯ ಸೇರಿದಂತೆ ಎಲ್ಲ ಅಂಶಗಳ ಕುರಿತು ಉನ್ನತ ಮಟ್ಟದ ತನಿಖಾ ತಂಡ ರಚಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.