ಸಾರಾಂಶ
ಮೊಳಕಾಲ್ಮುರು: ತೀವ್ರ ಬೆಲೆ ಏರಿಕೆಯ ನಡುವೆಯೂ ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಶನಿವಾರ ಯುಗಾದಿ ಹಬ್ಬದ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಮೊಳಕಾಲ್ಮುರು: ತೀವ್ರ ಬೆಲೆ ಏರಿಕೆಯ ನಡುವೆಯೂ ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಶನಿವಾರ ಯುಗಾದಿ ಹಬ್ಬದ ವ್ಯಾಪಾರ ಭರ್ಜರಿಯಾಗಿ ನಡೆಯಿತು.ಪಟ್ಟಣ ಹಾಗೂ ತಾಲೂಕಿನ ರಾಂಪುರ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಜನಜಂಗುಳಿ ಕಂಡುಬಂತು. ಯಾವುದೇ ಅಂಗಡಿಗೆ ತೆರಳಿದರೂ ಜನರು ಬೇಳೆ, ಬೆಲ್ಲ, ಸಕ್ಕರೆ, ಅಕ್ಕಿ, ರಾಗಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಮುಗಿ ಬಿದ್ದಿದ್ದು ಕಂಡು ಬಂತು.
ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡಲ್ಲಿ ಈ ಬಾರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಗ್ರಾಹಕರಿಗೆ ಹೊರೆಯಾಗಿದ್ದರೂ ವ್ಯಾಪಾರ ವಹಿವಾಟು ಭರ್ಜರಿಯಾಗಿ ಸಾಗಿತು.ಸೇವಂತಿಗೆ ಮಾರಿಗೆ 200 ರು. ಕನಕಾಂಬರ 200 ರು., ಕೆ.ಜಿಗೆ ಸೇಬು 100 ರು., ಬಾಳೆಹಣ್ಣು ದರ ನಿಗದಿಯಾಯಾಗಿತ್ತು. ದುಬಾರಿ ಬೆಲೆ ಇದ್ದರೂ ಹೂ, ಹಣ್ಣು, ತರಕಾರಿ, ಬಟ್ಟೆ ಸೇರಿದಂತೆ ದಿನಸಿ ವ್ಯಾಪಾರ ಜೋರಾಗಿಯೇ ನಡೆಯಿತು.
ಅಮವಾಸ್ಯೆಯ ದಿನವಾಗಿದ್ದ ಶನಿವಾರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ವಾಹನಗಳಿಗೆ ಹೂಗಳಿಂದ ಸಿಂಗರಿಸಿ ಪೂಜಿಸುವುದು ಕಂಡುಬಂತು. ಬೆಲೆ ಏರಿಕೆಯ ನಡುವೆಯೂ ಯುಗಾದಿ ಹಬ್ಬ ಸಂಭ್ರಮಕ್ಕೆ ಎಂಬಂತೆ ಅಗತ್ಯ ವಸ್ತುಗಳ ವ್ಯಾಪಾರ ಬಿರುಸಾಗಿ ಸಾಗಿತು.