ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ ನಾಶ

| Published : Sep 19 2024, 01:48 AM IST

ಸಾರಾಂಶ

ಚನ್ನರಾಯಪಟ್ಟಣ ವಲಯ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿ ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಹಾನಿ ಉಂಟಾಗದಂತೆ ಅಕ್ರಮ ಮದ್ಯವನ್ನು ನಾಶಪಡಿಸಲಾಯಿತು. ಅಬಕಾರಿ ಮೊಕದ್ದಮೆ ಹಾಗೂ ಪೊಲೀಸ್ ಮೊಕದ್ದಮೆಗಳಲ್ಲಿ ಸರ್ಕಾರಕ್ಕೆ ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಮದ್ಯ, ಬಿಯರ್, ಹಾಗೂ ಸೇಂದಿಯನ್ನು ನಾಶಪಡಿಸುವಂತೆ ಪ್ರಾಧಿಕೃತ ಅಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರು ಹಾಸನ ಜಿಲ್ಲೆ ಇವರ ಆದೇಶದಂತೆ ಸಪ್ಟೆಂಬರ್ ೨೦೨೩ರಿಂದ ದಾಖಲಾದ ಒಟ್ಟು ೩೧ ಅಬಕಾರಿ ಪ್ರಕರಣಗಳಿಂದ ಒಟ್ಟು ರು.೧,೫೦,೦೦೦ ಮೌಲ್ಯದ ೨೪೬ ಲೀಟರ್‌ ಮದ್ಯ, ೨೦.೭೬೦ ಲೀಟರ್‌ ಬಿಯರ್ ಮತ್ತು ೧೮ ಲೀಟರ್ ಸೇಂದಿಯನ್ನು ನಾಶಪಡಿಸಲಾಯಿತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಮದ್ಯವನ್ನು ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು.

ಚನ್ನರಾಯಪಟ್ಟಣ ವಲಯ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿ ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಹಾನಿ ಉಂಟಾಗದಂತೆ ಅಕ್ರಮ ಮದ್ಯವನ್ನು ನಾಶಪಡಿಸಲಾಯಿತು. ಅಬಕಾರಿ ಮೊಕದ್ದಮೆ ಹಾಗೂ ಪೊಲೀಸ್ ಮೊಕದ್ದಮೆಗಳಲ್ಲಿ ಸರ್ಕಾರಕ್ಕೆ ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಮದ್ಯ, ಬಿಯರ್, ಹಾಗೂ ಸೇಂದಿಯನ್ನು ನಾಶಪಡಿಸುವಂತೆ ಪ್ರಾಧಿಕೃತ ಅಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರು ಹಾಸನ ಜಿಲ್ಲೆ ಇವರ ಆದೇಶದಂತೆ ಸಪ್ಟೆಂಬರ್ ೨೦೨೩ರಿಂದ ದಾಖಲಾದ ಒಟ್ಟು ೩೧ ಅಬಕಾರಿ ಪ್ರಕರಣಗಳಿಂದ ಒಟ್ಟು ರು.೧,೫೦,೦೦೦ ಮೌಲ್ಯದ ೨೪೬ ಲೀಟರ್‌ ಮದ್ಯ, ೨೦.೭೬೦ ಲೀಟರ್‌ ಬಿಯರ್ ಮತ್ತು ೧೮ ಲೀಟರ್ ಸೇಂದಿಯನ್ನು ನಾಶಪಡಿಸಲಾಯಿತು.

ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣ ತಾಲೂಕು ದಂಡಾಧಿಕಾರಿಗಳಾದ ಬಿ ಎಸ್ ನವೀನ್ ಕುಮಾರ್‌, ಹಾಸನ ಅಬಕಾರಿ ಉಪ ಆಧೀಕ್ಷಕರಾದ ಎಂ ಎಚ್ ರಘು, ಹಾಸನ ಕೆ ಎಸ್‌ಬಿಸಿಎಲ್ ಡಿಪೋ-೨ ವ್ಯವಸ್ಥಾಪಕರಾದ ರಮೇಶ್, ಚನ್ನರಾಯಪಟ್ಟಣ ವಲಯ ನಿರೀಕ್ಷಕರಾದ ಎನ್‌ ಐ ನೂರ್ ಜಹಾರಾ, ಉಪ ನಿರೀಕ್ಷಕರಾದ ಅಬ್ದುಲ್ ನಿಸಾರ್‌, ವಿ ಕೆ ರೂಪ, ಅಬಕಾರಿ ಮುಖ್ಯ ಪೇದೆಗಳಾದ ಕೆ ವೀರಭದ್ರ,ಎನ್ ಎಸ್ ಜೀವನ್, ಕೆ ಅಭಿಲಾಷ್‌, ಬಿ ಆರ್‌ ಶಿವಕುಮಾರ್, ಕೆ ಜೆ ರಾಜೇಶ್ ಸೇರಿದಂತೆ ಇತರರು ಹಾಜರಿದ್ದರು.