ಸಾರಾಂಶ
ಕನ್ನಡಪ್ರಭ ವಾರ್ತ ಬೆಳಗಾವಿ ಗುಜರಾತ ಪಂಚಮಹಲ ಜಿಲ್ಲೆಯ ಪಾವಗಡ ಕ್ಷೇತ್ರದಲ್ಲಿ ಬೆಟ್ಟದ ಮೇಲಿರುವ ಮಹಾಕಾಲಿ ಮಾತಾಜಿ ಮಂದಿರದ ಮೆಟ್ಟಿಲುಗಳ ಮೇಲಿರುವ ಸಾವಿರಾರು ವರ್ಷಗಳ ಪುರಾತನ ಜೈನ ಮೂರ್ತಿಗಳನ್ನು ನಾಶಪಡಿಸಿ ಅವುಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಇಡಿ ದೇಶಾದ್ಯಂತ ಜೈನ ಸಮಾಜ ಆಕ್ರೋಶಗೊಂಡಿದೆ. ಈ ಮೂರ್ತಿಗಳನ್ನು ಪುನರ್ ಸ್ಥಾಪಿಸಬೇಕೆಂದು ಆಗ್ರಹಿಸಿ ಹಾಗೂ ಈ ಪ್ರತಿಮೆಗಳನ್ನು ಒಡೆದು ಹಾಕಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬುಧವಾರ ಜೈನ ಸಮಾಜದ ವತಿಯಿಂದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತ ಬೆಳಗಾವಿ
ಗುಜರಾತ ಪಂಚಮಹಲ ಜಿಲ್ಲೆಯ ಪಾವಗಡ ಕ್ಷೇತ್ರದಲ್ಲಿ ಬೆಟ್ಟದ ಮೇಲಿರುವ ಮಹಾಕಾಲಿ ಮಾತಾಜಿ ಮಂದಿರದ ಮೆಟ್ಟಿಲುಗಳ ಮೇಲಿರುವ ಸಾವಿರಾರು ವರ್ಷಗಳ ಪುರಾತನ ಜೈನ ಮೂರ್ತಿಗಳನ್ನು ನಾಶಪಡಿಸಿ ಅವುಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಇಡಿ ದೇಶಾದ್ಯಂತ ಜೈನ ಸಮಾಜ ಆಕ್ರೋಶಗೊಂಡಿದೆ. ಈ ಮೂರ್ತಿಗಳನ್ನು ಪುನರ್ ಸ್ಥಾಪಿಸಬೇಕೆಂದು ಆಗ್ರಹಿಸಿ ಹಾಗೂ ಈ ಪ್ರತಿಮೆಗಳನ್ನು ಒಡೆದು ಹಾಕಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬುಧವಾರ ಜೈನ ಸಮಾಜದ ವತಿಯಿಂದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.ಗುಜರಾತ ರಾಜ್ಯದಲ್ಲಿರುವ ಈ ಪವಿತ್ರ ಕ್ಷೇತ್ರದ ಬಗ್ಗೆ ಜೈನ ಸಮಾಜ ಅತ್ಯಂತ ಭಕ್ತಿ ಭಾವದಿಂದ ನಡೆದುಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಜೈನ ಧರ್ಮಿಯರ ತೀರ್ಥಕ್ಷೇತ್ರಗಳ ಮೇಲೆ ಹಲ್ಲೆ ನಡೆಯುವುದು, ಅವುಗಳನ್ನು ನಾಶ ಮಾಡಿ ಅತಿಕ್ರಮಣ ಮಾಡುವುದು ಸೇರಿದಂತೆ ಅನೇಕ ದೌರ್ಜನ್ಯಗಳು ನಡೆಯುತ್ತಿವೆ. ಜೈನ ಸಮಾಜ ಅಹಿಂಸೆಯನ್ನು ಪ್ರತಿಪಾದಿಸುವ ಸಮಾಜವಾಗಿದ್ದು, ಸರ್ವ ಸಮಾಜದ ಶಾಂತಿಗಾಗಿ ಮತ್ತು ಒಳಿತಿಗಾಗಿ ಶ್ರಮಿಸುತ್ತ ಬಂದಿದೆ. ಆದರೆ ಅಲ್ಪಸಂಖ್ಯಾತರಲ್ಲಿ ಅಲ್ಪರಾದ ಜೈನ ಸಮಾಜಕ್ಕೆ ರಕ್ಷಣೆ ಇಲ್ಲದಂತಾಗಿದೆ. ಹಾಗಾಗಿ ಜೈನ ಸಮಾಜಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಮತ್ತು ಪಾವಗಡ ಕ್ಷೇತ್ರದಲ್ಲಿ ಏನು ಅನಾಹುತ ನಡೆದಿದೆ ಅದನ್ನು ತಕ್ಷಣ ಸರಿಪಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ರಾಜೇಂದ್ರ ಜೈನ, ವಿನೋದ ದೊಡ್ಡಣ್ಣವರ, ಉತ್ತಮ ಪೋರವಾಲ, ವಿಕ್ರಮ ಪೋರವಾಲ, ವಿಜಯ ಸಂಘವಿ, ರಾಜೇಂದ್ರ ಜಕ್ಕನ್ನವರ, ಅಭಯ ಅವಲಕ್ಕಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.;Resize=(128,128))
;Resize=(128,128))