ಸಾರಾಂಶ
ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆಗಳು ಅನರ್ಹರ ಪಾಲಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ನಕಲಿ ಕಾರ್ಡ್‌ದಾರರನ್ನು ಪತ್ತೆ ಹಚ್ಚುವ ಬಗ್ಗೆ ಅಸಂಘಟಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿ ಸಂಘ ತುರ್ತು ಗಮನಹರಿಸಬೇಕಿದೆ ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಹೇಳಿದರು.
ಅಸಂಘಟಿತ ಕಟ್ಟಡ, ಇತರೆ ನಿರ್ಮಾಣ ಕಾಮಗಾರಿ ಸಂಘಕ್ಕೆ ಒತ್ತಾಯಕನ್ನಪ್ರಭ ವಾರ್ತೆ ಶಿಕಾರಿಪುರ
ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆಗಳು ಅನರ್ಹರ ಪಾಲಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ನಕಲಿ ಕಾರ್ಡ್‌ದಾರರನ್ನು ಪತ್ತೆ ಹಚ್ಚುವ ಬಗ್ಗೆ ಅಸಂಘಟಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿ ಸಂಘ ತುರ್ತು ಗಮನಹರಿಸಬೇಕಿದೆ ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಹೇಳಿದರು.ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರ ಒಕ್ಕೂಟ ಹಲವು ಸಮಾಜಮುಖಿ ಕಾರ್ಯಕ್ರಮದ ಮೂಲಕ ಸದಾ ಕ್ರಿಯಾಶೀಲವಾಗಿದ್ದು, ಈ ದಿಸೆಯಲ್ಲಿ ಸ್ಥಳೀಯ ಶಾಸಕ ಹಾಗೂ ಸಂಸದರ ಸಹಕಾರ ಅಪಾರವಾಗಿದೆ ಎಂದರು.
ಕಟ್ಟಡ ಕಾರ್ಮಿಕರ ಸಂಘ ತಾಲೂಕಿನಲ್ಲಿ ಸುದೀರ್ಘ ಕಾಲದಿಂದ ಅಸ್ಥಿತ್ವದಲ್ಲಿದ್ದು, ಇದೀಗ ಸರ್ಕಾರ ಅಸಂಘಟಿತ ಕಾರ್ಮಿಕರಾಗಿ ಪೇಂಟರ್, ವಿದ್ಯುತ್ ಗುತ್ತಿಗೆದಾರರ ಸಹಿತ ವಿವಿಧ ರೀತಿಯ ಕಾರ್ಮಿಕರನ್ನು ಗುರುತಿಸಿ ಹಲವು ಸೌಲಭ್ಯ ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಸಚಿವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯ ವಂಚಿತರಾದ ಹಿನ್ನೆಲೆಯಲ್ಲಿ ಕೆಲ ಹಲವು ಅನರ್ಹರು ಸೈಬರ್ ಕೇಂದ್ರಗಳ ಮೂಲಕ ಬೋಗಸ್ ಕಾರ್ಡ್‌ಗಳನ್ನು ಪಡೆದುಕೊಂಡು ಕಟ್ಟಡ ಕಾರ್ಮಿಕರ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಇದೀಗ ಇದನ್ನು ತಡೆಯಲು ಕಾರ್ಮಿಕ ಸಚಿವರು ದೂರು ದಾಖಲಿಸುವ ದಿಟ್ಟ ತೀರ್ಮಾನ ಕೈಗೊಂಡಿದ್ದು ಸಮಾಧಾನಕರ ಸಂಗತಿಯಾಗಿದೆ ಎಂದು ಹೇಳಿದರು.1996ರಲ್ಲಿ ದೇವೇಗೌಡರು ಪ್ರಧಾನಿಯಾದ ಅವಧಿಯಲ್ಲಿ ಕಾರ್ಮಿಕ ಮಂಡಳಿ ರಚನೆಯಾಗಿದ್ದು, ಹಲವು ಹಿರಿಯರ ಹೋರಾಟದ ಫಲವಾಗಿ ಕಾರ್ಮಿಕರಿಗೆ ಅಪಘಾತ ವಿಮೆ, ಮಕ್ಕಳಿಗೆ ಶಿಕ್ಷಣ ಸೌಲಭ್ಯ, ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಇವುಗಳನ್ನು ತಲುಪಿಸಲು ಕಾರ್ಮಿಕ ಸಂಘ ಹೆಚ್ಚಿನ ನಿಗಾವಹಿಸಬೇಕಾಗಿದೆ ಎಂದರು.
ಇದೇ ವೇಳೆ ಒಕ್ಕೂಟದ ನೂತನ ತಾ.ಅಧ್ಯಕ್ಷರಾದ ಬಸವರಾಜಪ್ಪ, ಗೌರವಾಧ್ಯಕ್ಷ ಚೂರಿ ಗಿಡ್ಡಪ್ಪ ಅವರನ್ನು ಸನ್ಮಾನಿಸಲಾಯಿತು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಮಹದೇವಾಚಾರ್ ತಾ.ಘಟಕದ ಸತೀಶ್, ರವಿ, ಸೈಯದ್ ಸಲೀಂ, ನಾಗರಾಜ, ಮಹಮ್ಮದ್ ಖಾಸಿಂ, ಸಿದ್ದಲಿಂಗೇಶ್, ಪ್ರವೀಣ ಮಾಳಗಿ ಮತ್ತಿತರರಿದ್ದರು.
9ಕ್ಕೆ ಅಸಂಘಟಿತ ಕಾರ್ಮಿಕರ
ತಾ.ಒಕ್ಕೂಟ ಉದ್ಘಾಟನೆಶಿಕಾರಿಪುರ: ಇದೇ ಮಾ.9 ರಂದು ಕ್ಷೇತ್ರದ ಶಾಸಕರು, ಸಂಸದರ ಸಮಕ್ಷಮದಲ್ಲಿ ಅಸಂಘಟಿತ ಕಾರ್ಮಿಕರ ತಾ.ಒಕ್ಕೂಟದ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬ್ಯೂಟೀಷಿಯನ್, ಹೊಲಿಗೆ ತರಬೇತಿ, ಉಚಿತ ಚಿಕಿತ್ಸೆ ಸಹಿತ ಹಲವು ಗುರಿಯನ್ನು ಹೊಂದಲಾಗಿದೆ ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ತಿಳಿಸಿದರು.ಒಕ್ಕೂಟದ ಜಿಲ್ಲಾಧ್ಯಕ್ಷ ಸಂಜಯ ಕುಮಾರ್ ಮಾತನಾಡಿ, ಜಿಲ್ಲಾದ್ಯಂತ ಸಂಘಟನೆ ಸದೃಢಗೊಳಿಸಲು ತಾ.ಘಟಕ ರಚಿಸಲಾಗುತ್ತಿದ್ದು, 25 ವಲಯಗಳು ಒಕ್ಕೂಟದ ವ್ಯಾಪ್ತಿಗೊಳಪಟ್ಟಿದೆ ಎಂದರು. ತಾಲೂಕಿನಲ್ಲಿ 10-12 ಸಾವಿರ ಕಾರ್ಡ್‌ದಾರರಿದ್ದಾರೆ. ಇವುಗಳಲ್ಲಿ 8-10 ಸಾವಿರ ಬೋಗಸ್ ಕಾರ್ಡ್‌ದಾರರು ವಜಾಗೊಂಡಿದ್ದಾರೆ ಎಂದು ತಿಳಿಸಿದರು.