ಸಮಾಜದ ಸ್ವಾಸ್ಥ್ಯ ಕೆಡಿಸುವುದು ಕೂಡ ದುಶ್ಚಟ

| Published : Oct 08 2023, 12:03 AM IST

ಸಾರಾಂಶ

ಗಾಂಧಿಸ್ಮೃತಿ, ವ್ಯಸನ ಮುಕ್ತ ಸಾಧಕರ ಸಮಾವೇಶದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯ

ಗಾಂಧಿಸ್ಮೃತಿ, ವ್ಯಸನ ಮುಕ್ತ ಸಾಧಕರ ಸಮಾವೇಶದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ದುಶ್ಟಟಗಳೆಂದರೆ ಕೇವಲ ಮದ್ಯಪಾನ ಮಾತ್ರವಲ್ಲ, ಸಮಾಜದ ಸ್ವಾಸ್ಥ್ಯ ಹದಗೆಡಿಸುವ, ಕಾನೂನು ಬಾಹಿರ ಚಟುವಟಿಕೆಗಳಾದ ಕಳ್ಳತನ, ಸಮಾಜಘಾತುಕ ಚಟುವಟಿಕೆಗಳನ್ನು ದುಶ್ಚಟಗಳೆಂದು ಕರೆಯಬಹುದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯಪಟ್ಟರು.

ಹಿರೇಕಲ್ಮಠ ಸಮುದಾಯ ಭವನನದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೊನ್ನಾಳಿ ಮತ್ತು ಬಸವಾಪಟ್ಟಣ ಘಟಕಗಳು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ ಮತ್ತು ವ್ಯಸನ ಮುಕ್ತ ಸಾಧಕರ ಸಮಾವೇಶ ಹಾಗೂ ಸುಜ್ಞಾನನಿಧಿ ಶಿಷ್ಯ ವೇತನ ಮಂಜೂರಾದ ಆದೇಶ ಪತ್ರಗಳ ವಿತರಣೆ ಹಾಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ದುಶ್ಚಟಗಳಿಗೆ ದಾಸರಾದವರು ತಮ್ಮ ಕುಟುಂಬಕ್ಕಷ್ಟೇ ಅಲ್ಲ ಜೊತೆಗೆ ಸಮಾಜ ಮತ್ತು ದೇಶಕ್ಕೆ ಮಾರಕ. ಇಂತಹವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮದ್ಯವರ್ಜನ ಶಿಬಿರಗಳ ಮೂಲಕ ಕೆಟ್ಟ ಚಟಗಳಿಂದ ಮನುಷ್ಯರ ಹೊರಬರುವಂತೆ ಮಾಡುವ ಸಮಾಜಮುಖಿ ಕೆಲಸ ಮಾಡುತ್ತಿದ್ದು ಈ ಶಿಬಿರಗಳಲ್ಲಿ ಭಾಗಿಯಾಗಿ ವ್ಯಸನ ಮುಕ್ತ ಕುಟುಂಬ, ಸಮಾಜಕ್ಕೆ ಆಸ್ತಿಯಾಗಿ ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದರು.

ಧರ್ಮಸ್ಥಳ ಕ್ಷೇತ್ರವು ಕೇವಲ ಧಾರ್ಮಿಕ ಕ್ಷೇತ್ರವಲ್ಲದೇ ಸಾಮಾಜಿಕ, ಸ್ತ್ರೀ ಸಬಲೀಕರಣಗಳಂತಹ ಅನೇಕ ಸಮಾಜಮುಖಿ ಕೆಲಸಗಳ ಸರ್ಕಾರಕ್ಕೆ ಪರ್ಯಾಯವಾಗಿ ಮಾಡುತ್ತ ಬರುತ್ತಿದೆ ಎಂದರು.

ಪೊಲೀಸ್‌ ಇನ್ಸ್‌ಪೆಕ್ಟರ್‌ ಸಿದ್ದೇಗೌಡ ಮಾತನಾಡಿ ದೇಹಕ್ಕೆ ಶುದ್ಧ ನೀರು ಹೇಗೆ ಅವಶ್ಯಕವೋ ಹಾಗೇ ಆರೋಗ್ಯವಂತ ಸಮಾಜಕ್ಕೆ ವ್ಯಸನ ಮುಕ್ತ ಜನರು ಮುಖ್ಯ. ಮಧ್ಯರಾತ್ರಿ ಮಹಿಳೆಯೊಬ್ಬಳು ಭಯವಿಲ್ಲದೆ ರಸ್ತೆಯಲ್ಲಿ ನಡೆದಾಡುವ ಸಮಾಜ ನಾವು ಸೃಷ್ಟಿಸಬೇಕು ಎಂಬುದು ಗಾಂಧೀಜಿ ಕನಸಾಗಿತ್ತು. ಇವರ ಕನಸನ್ನು ಪ್ರಜೆಗಳಾದ ನಾವು ಎಷ್ಟರ ಮಟ್ಟಿಗೆ ನನಸು ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂಬುದು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಎಲ್ಲಾ ಅತಿಥಿಗಳು ಸುಮಾರು 206 ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಕ್ಷೇತ್ರದ ವತಿಯಿಂದ ಸುಜ್ಞಾನನಿಧಿ ಶಿಷ್ಯವೇತನದ ಮಂಜೂರಾತಿ ಅದೇಶ ಪತ್ರಗಳ ವಿತರಿಸಿದರು. ಹೊನ್ನಾಳಿ ಪಟ್ಟಣ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಿರೇಕಲ್ಮಠದವರೆಗೆ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್‌ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಬಾಬು ಪ್ರಸ್ತಾವಿಕವಾಗಿ ಮಾತನಾಡಿದರು, ಬಸವಾಪಟ್ಟಣ ಯೋಜನಾಧಿಕಾರಿ ನವೀನ್‌ ಸ್ವಾಗತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ಜನಜೀವನ ಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಸುರೇಶ್‌ ಹೊಸಕೇರಿ ವಹಿಸಿದ್ದರು. ನವಜೀವನ ಸಮಿತಿಯ ಎಂ.ಬಿ.ನಾಗರಾಜ್‌ ಕಾಕನೂರು, ಜನಜಾಗೃತಿ ವೇದಿಕೆಯ ಲಿಂಗರಾಜ್‌ ಹವಳದ , ನಾಗರಾಜ್‌ ಕತ್ತಿಗೆ, ಕುಮಾರ ಸ್ವಾಮಿ,ವಿದ್ಯಾ, ಶ್ರೀನಿವಾಸ್‌, ಬಸವರಾಜ್‌, ಪಿ.ಎಸ್‌.ಐ, ಸಿದ್ಧಪ್ಪ ಸೇರಿ ಸಂಸ್ಥೆ ಪದಾಧಿಕಾರಿಗಳಿದ್ದರು. ಕಾರ್ಯಕ್ರಮದಲ್ಲಿ ವ್ಯಸನಮುಕ್ತ ಸಾಧಕರ ಪರವಾಗಿ ಕತ್ತಿಗೆ ರಮೇಶ್‌ ಮಾತನಾಡಿದರು. -------------

ಅಧಿಕಾರ ಯಾರಿಗೂ ಶಾಶ್ವತವಲ್ಲ

ನಾನು ಎಂದೂ ನಿಂತ ನೀರಲ್ಲ ಸದಾ ಹರಿಯುವ ನೀರಿನಂತೆ ಸೋಲು-ಗೆಲುವುಗಳ ಸಮಾನವಾಗಿ ಸ್ವೀಕರಿಸಿ ಸದಾ ಜನ ಸೇವೆಯಲ್ಲಿ ನಿರತನಾಗಿರುತ್ತೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಆದರೆ ಅಧಿಕಾರವಿದ್ದಾರೆ ಏನು ಉತ್ತಮ ಕೆಲಸಗಳ ಮಾಡುತ್ತೇವೆಯೋ ಅದೇ ಶಾಶ್ವತ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.