ಸಾರಾಂಶ
ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಶತಮಾನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನದ ಕಾರ್ಯಕ್ರಮ ಇತ್ತೀಚೆಗೆ ಮಣ್ಣಗುಡ್ಡ ಸಮಾಜ ಭವನದಲ್ಲಿ ನಡೆಯಿತು.
ಮಂಗಳೂರು: ಮಂಗಳೂರಿನ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಶತಮಾನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನದ ಕಾರ್ಯಕ್ರಮ ಇತ್ತೀಚೆಗೆ ಮಣ್ಣಗುಡ್ಡ ಸಮಾಜ ಭವನದಲ್ಲಿ ನಡೆಯಿತು. ಸೆ. 7ರಂದು ದೇವಾಡಿಗ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಪೂರ್ವಭಾವಿ ಕಾರ್ಯಕ್ರಮವಾಗಿ ಅರ್ಜಿಗಳನ್ನು ವಿತರಿಸಿ, ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವುದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯದ ಭದ್ರಬುನಾದಿಗೆ ಸಹಾಯಕವಾಗುವಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಾನಿ ವಿನೀತ್ ಕುಮಾರ್ ದೇವಾಡಿಗ ಉದ್ಘಾಟಿಸಿದರು. ಎಸ್‌ಡಿಎಂ ಕಾಲೇಜಿನ ಮಾಜಿ ಪ್ರಾಂಶುಪಾಲ, ಶೈಕ್ಷಣಿಕ ಚಿಂತಕ ಡಾ. ದೇವರಾಜ್ ಕೆ. ಕಾನೂನು ಶಿಕ್ಷಣದಲ್ಲಿ ಇರುವ ಹೊಸ ವಿಫುಲ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಅತಿಥಿಗಳಾಗಿ ಶೈಕ್ಷಣಿಕ ಚಿಂತಕ ಪ್ರಶಾಂತ್ ಚಂದ್ರ ಎಂ., ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿಯ ಕಾರ್ಯದರ್ಶಿ, ವಾಯು ಸೇನಾ ಮಾಜಿ ಸೈನಿಕ ಭಗವಾನ್ ದಾಸ್ ಇದ್ದರು. ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ಅಶೋಕ್ ಮೊಯ್ಲಿ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿಗಳಾದ ವೀಣಾ ಗಣೇಶ್ ಹಾಗೂ ಉಪಾಧ್ಯಕ್ಷ ಕರುಣಾಕರ್ ಎಂ.ಎಚ್. ಇದ್ದರು.ಸಂಪನ್ಮೂಲ ವ್ಯಕ್ತಿ, ಮಾಹೆ ಉಪನ್ಯಾಸಕ ರಾಘವೇಂದ್ರ ಜಿ., ಡಾ. ಪ್ರವೀಣ್ ಕುಮಾರ್, ವಿನೋದ್ ಕುಮಾರ್ ಟಿ, ಅರ್ಚನಾ ನಾಯಕ್ ಶೈಕ್ಷಣಿಕ ಕ್ಷೇತ್ರದಲ್ಲಿರುವ ವಿವಿಧ ಕೋರ್ಸ್‌ಗಳ ಮಾಹಿತಿ ನೀಡಿ ಸಂವಾದ ನಡೆಸಿಕೊಟ್ಟರು. ಕೇಂದ್ರೀಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಹಾಗೂ ಯುವ ಸಂಘಟನೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಮಂಗಳಾ ಶಾಲೆಯ ಶಿಕ್ಷಕರು ಹಾಜರಿದ್ದರು. ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.