ವಿಜಯಪುರ ಜಿಲ್ಲೆಯಲ್ಲೇ ಮುಂದುವರಿಸಲು ದೇವರಹಿಪ್ಪರಗಿ ಪಪಂ ಸದಸ್ಯರ ಆಗ್ರಹ

| Published : Jan 03 2024, 01:45 AM IST

ವಿಜಯಪುರ ಜಿಲ್ಲೆಯಲ್ಲೇ ಮುಂದುವರಿಸಲು ದೇವರಹಿಪ್ಪರಗಿ ಪಪಂ ಸದಸ್ಯರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ದೇವರಹಿಪ್ಪರಗಿ: ನೂತನ ತಾಲೂಕು ಆಗಿ 8 ವರ್ಷ ಗತಿಸಿದರೂ ಅಭಿವೃದ್ಧಿ ಮರೀಚಿಕೆ ಆಗಿದೆ. ಮೂರು ಪಕ್ಷಗಳು ಅಧಿಕಾರ ನಡೆಸಿದರೂ ನೂತನ ತಾಲೂಕಿಗೆ ಬೇಕಾದ ಕಚೇರಿಗಳನ್ನು ತರಲು ವಿಫಲರಾಗಿದ್ದಾರೆ. ಸರ್ಕಾರ ಇಂಡಿ ಹೊಸ ಜಿಲ್ಲೆ ಮಾಡುವುದಾದರೆ ಅದಕ್ಕೆ ನಮ್ಮ ತಾಲೂಕು ಸೇರಿಸಬೇಡಿ, ವಿಜಯಪುರ ಜಿಲ್ಲೆಯಲ್ಲಿ ಮುಂದುವರಿಸಿ ಎಂದು ಪಪಂ ಸದಸ್ಯರಾದ ರಮೇಶ ಮಸಿಬಿನಾಳ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ನೂತನ ತಾಲೂಕು ಆಗಿ 8 ವರ್ಷ ಗತಿಸಿದರೂ ಅಭಿವೃದ್ಧಿ ಮರೀಚಿಕೆ ಆಗಿದೆ. ಮೂರು ಪಕ್ಷಗಳು ಅಧಿಕಾರ ನಡೆಸಿದರೂ ನೂತನ ತಾಲೂಕಿಗೆ ಬೇಕಾದ ಕಚೇರಿಗಳನ್ನು ತರಲು ವಿಫಲರಾಗಿದ್ದಾರೆ. ಸರ್ಕಾರ ಇಂಡಿ ಹೊಸ ಜಿಲ್ಲೆ ಮಾಡುವುದಾದರೆ ಅದಕ್ಕೆ ನಮ್ಮ ತಾಲೂಕು ಸೇರಿಸಬೇಡಿ, ವಿಜಯಪುರ ಜಿಲ್ಲೆಯಲ್ಲಿ ಮುಂದುವರಿಸಿ ಎಂದು ಪಪಂ ಸದಸ್ಯರಾದ ರಮೇಶ ಮಸಿಬಿನಾಳ ಸರ್ಕಾರಕ್ಕೆ ಆಗ್ರಹಿಸಿದರು.

ಮಂಗಳವಾರ ದೇವರಹಿಪ್ಪರಗಿ ಪಟ್ಟಣ ಪಂಚಾಯತಿಯ ಸದಸ್ಯರು ತಹಸೀಲ್ದಾರ್‌ ಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಪಪಂ ಎಲ್ಲ ಸದಸ್ಯರ ಒಮ್ಮತದ ತೀರ್ಮಾನದಂತೆ ಇಂಡಿ ತಾಲೂಕು ಜಿಲ್ಲೆ ಮಾಡುವುದಾದರೆ ದೇವರಹಿಪ್ಪರಗಿ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲಿ ಮುಂದುವರಿಸಿ. ನೂತನ ತಾಲೂಕಿನಿಂದ ರೈತರು ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೆ ನೂತನ ಜೆಲ್ಲೆಯಲ್ಲಿ ಸೇರಿಸುವುದರಿಂದ ಮತ್ತಷ್ಟು ತೊಂದರೆ ಆಗಲಿದೆ. ವಿಜಯಪುರ ಸಮೀಪವಾಗುವ ಕಾರಣ ಜನ ಸಾಮಾನ್ಯರಿಗೆ ಆಡಳಿತ ಮತ್ತು ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.

ಪಪಂ ಸದಸ್ಯ ಪ್ರಕಾಶ ಮಲ್ಹಾರಿ ಮಾತನಾಡಿ ಮನವಿ ಪತ್ರ ಓದಿದರು. ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ ಜಲಕತ್ತಿ, ಉಮೇಶ ರೂಗಿ, ಕಾಸಪ್ಪ ಜಮಾದಾರ, ಶಾಂತಯ್ಯ ಜಡಿಮಠ, ಕಾಶಿನಾಥ ಭಜಂತ್ರಿ, ಸುಮಂಗಲಾ ಸೇಬೆನ್ನವರ್, ಸಿಂಧೂರ ಡಾಲೇರ, ಪ್ರತಿನಿಧಿಗಳಾದ ಸೋಮು ದೇವೂರ, ಬಸವರಾಜ ದೇವಣಗಾಂವ, ಕಾಸು ಕಡ್ಲೇವಾಡ, ಅಬ್ದುಲ್ ಬಾಗವಾನ, ನಬಿರಸೂಲ್‌ ಮಣೂರ, ನಾಮ ನಿರ್ದೇಶಿತ ಸದಸ್ಯ ಹುಸೇನ್‌ ಕೊಕಟನೂರ, ಸೇರಿದಂತೆ ಪಪಂ ಸದಸ್ಯರು. ಪಟ್ಟಣದ ಪ್ರಮುಖರು ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.