ದೇವಲಾಪೂರ ಜಾತ್ರಾ ಮಹೋತ್ಸವ: ಇಂದು ಭಕ್ತಿ ಸಂಗೀತ ಕಾರ್ಯಕ್ರಮ

| Published : Apr 19 2025, 12:32 AM IST

ದೇವಲಾಪೂರ ಜಾತ್ರಾ ಮಹೋತ್ಸವ: ಇಂದು ಭಕ್ತಿ ಸಂಗೀತ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಬೈಲಹೊಂಗಲ ತಾಲೂಕಿನ ಸುಕ್ಷೇತ್ರ ದೇವಲಾಪೂರ ಗ್ರಾಮದೇವತೆ ಶ್ರೀ ಉಡಚಮ್ಮದೇವಿಯ 18ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಏ.18 ರಿಂದ 22 ರವರೆಗೆ ಜರಗುವುದು. ಸಾನ್ನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು, ಬೈಲಹೊಂಗಲ ಶಿವಾನಂದ ಮಠದ ಮಹದೇವ ಸರಸ್ವತಿ ಸ್ವಾಮಿಗಳು ವಹಿಸುವರು.

ಕನ್ನಡಪ್ರಭ ವಾರ್ತೆ ದೇವಲಾಪೂರ

ಏ.19 ರಂದು ಬೆಳಗ್ಗೆ 6 ಗಂಟೆಗೆ ಮಹಾಭಿಷೇಕ, 8 ಗಂಟೆಗೆ ದೇವಿಯ ಪಲ್ಲಕ್ಕಿ ಉತ್ಸವ ಮತ್ತು ಹೊನ್ನಾಟ, ಸಂಜೆ 6.30 ಗಂಟೆ ಭಕ್ತಿ ಸಂಗೀತ ಕಾರ್ಯಕ್ರಮ, ಸಂಜೆ 7.30 ಗಂಟೆಗೆ ಶ್ರೀಗಳಿಂದ ಪ್ರವಚನ, 1992ರ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಬಳಗದಿಂದ ಪ್ರಸಾದಸೇವೆ. ರಾತ್ರಿ 10.30 ಗಂಟೆಗೆ 12 ವರ್ಷದ ಒಳಗಿನ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು. ನೇತೃತ್ವವನ್ನು ಮಲ್ಲಾಪುರ ಗಾಲೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು, ಹುಣಶ್ಯಾಳ ಪಿ.ಜಿ ಸಿದ್ದಲಿಂಗ ಕೈವಲ್ಯಾಶ್ರಮದ ನಿಜುಗುಣ ದೇವರು, ನರಸೀಪುರ ಚೌಡಯ್ಯನವರ ಗುರುಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಬೈಲಹೊಂಗಲ ಮೂರುಸಾವಿರ ಮಠದ ನೀಲಕಂಠ ಮಹಾಸ್ವಾಮಿಗಳು, ಮನಕವಾಡ ಅನ್ನದಾನೇಶ್ವರ ಮಠ ಮೃತ್ಯುಂಜಯ ಮಹಾಸ್ವಾಮಿಗಳು, ಇಂಚಲ ಸಾಧು ಸಂಸ್ಥಾನ ಮಠದ ಪೂರ್ಣಾನಂದ ಭಾರತಿ ಮಹಾಸ್ವಾಮಿಗಳು, ನಯಾನಗರ ಸುಖದೇವಾನಂದ ಪುಣ್ಯಾಶ್ರಮದ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ತೊಂಡಿಕಟ್ಟಿ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು, ಚಿಕ್ಕಮನವಳ್ಳಿ ಆರೂಢ ಮಠ ಶಿವಪುತ್ರ ಮಹಾಸ್ವಾಮಿಗಳು ವಹಿಸುವರು ಎಂದು ದೇವಲಾಪೂರದ ಉಡಚಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರ ಟ್ರಸ್ಟ್‌ ಕಮಿಟಿ, ಉಡಚಮ್ಮದೇವಿ ಸದ್ಭಕ್ತ ಮಂಡಳಿ ಹಾಗೂ ಗ್ರಾಮದ ಎಲ್ಲ ಸಂಘಟನೆಗಳ ಸರ್ವ ಸದಸ್ಯರು, ಗ್ರಾಮದ ಎಲ್ಲ ಭಜನಾ ಮಂಡಳಿಗಳ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.