ಸಾರಾಂಶ
ಕನ್ನಡಪ್ರಭ ವಾರ್ತೆ ದೇವಲಾಪೂರ
ಬೈಲಹೊಂಗಲ ತಾಲೂಕಿನ ಸುಕ್ಷೇತ್ರ ದೇವಲಾಪೂರ ಗ್ರಾಮದೇವತೆ ಉಡಚಮ್ಮದೇವಿ 18ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ 22 ರವರೆಗೆ ಜರುಗುವುದು. ಸಾನ್ನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಮಹಾಸ್ವಾಮಿಗಳು ಬೈಲಹೊಂಗಲ ಶಿವಾನಂದ ಮಠದ ಮಹದೇವ ಸರಸ್ವತಿ ಸ್ವಾಮಿಗಳು ವಹಿಸುವರು.ಏ.20 ರಂದು ಬೆಳಗ್ಗೆ 6 ಗಂಟೆಗೆ ಮಹಾ ಅಭಿಷೇಕ, 8 ಗಂಟೆಗೆ ದೇವಿಗೆ ಪಲ್ಲಕ್ಕಿ ಉತ್ಸವ ಮತ್ತು ಹೊನ್ನಾಟ, ಸಂಜೆ 6.30 ಗಂಟೆಗೆ ಭಕ್ತಿ ಸಂಗೀತ ಕಾರ್ಯಕ್ರಮ, ಸಂಜೆ 7.30 ಗಂಟೆಗೆ ಶ್ರೀಗಳಿಂದ ಪ್ರವಚನ ಹಾಗೂ ನಂತರ ಆನೆಯ ಮೇಲೆ ದೇವಿಯ ಬೆಳ್ಳಿಯ ಉತ್ಸವ ಮೂರ್ತಿ ಭವ್ಯ ಮೆರವಣಿಗೆಯ ಸವಾಲು ಕಾರ್ಯಕ್ರಮ ಜರುಗುವುದು. 1998ನೇ ಸಾಲಿನ 7ನೇ ತರಗತಿಯ ಗೆಳೆಯರ ಬಳಗದವರಿಂದ ಪ್ರಸಾದ ಸೇವೆ, ರಾತ್ರಿ 10.30 ಗಂಟೆಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊನ್ನೂರ ಜೈ ಕಿಸಾನ್ ಕಲಾತಂಡದಿಂದ ಜಾನಪದ ಕಲಾವೈಭವ ಜರಗುವುದು. ನೇತೃತ್ವವನ್ನು ಮಲ್ಲಾಪುರ ಗಾಲೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು, ಹುಣಸ್ಯಾಳ ಪಿ.ಜಿ.ಸಿದ್ದಲಿಂಗ ಕೈವಲ್ಲ್ಯಾಶ್ರಮದ ನಿಜಗುಣ ದೇವರು, ಚಿಕ್ಕ ಮುನವಳ್ಳಿ ಆರೂಢಮಠ ಶಿವಪುತ್ರ ಮಹಾಸ್ವಾಮಿಗಳು ವಹಿಸುವರು ಎಂದು ದೇವಸ್ಥಾನದ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ, ಉಡಚಮ್ಮದೇವಿ ಸದ್ಭಕ್ತ ಮಂಡಳಿ ಹಾಗೂ ಗ್ರಾಮದ ಎಲ್ಲ ಸಂಘಟನೆಗಳ ಸರ್ವ ಸದಸ್ಯರು, ಗ್ರಾಮದ ಎಲ್ಲ ಭಜನಾ ಮಂಡಳಿಗಳ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.