ಸಾರಾಂಶ
ಸಹಕಾರಿ ಕ್ಷೇತ್ರಕ್ಕೂ ಕಾಲಿಟ್ಟ ಪುತ್ತಿಲ ಪರಿವಾರ, ಎರಡು ಸ್ಥಾನಗಳಲ್ಲಿ ಗೆಲವು ಸಾಧಿಸಿದ ಪುತ್ತಿಲ ಪರಿವಾರ ಬೆಂಬಲಿತರು
ಕನ್ನಡಪ್ರಭ ಪುತ್ತೂರು
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆದು ಪುತ್ತೂರಿನಲ್ಲಿ ತನ್ನದೇ ಛಾಪು ಮೂಡಿಸಿದ್ದ ಪುತ್ತಿಲ ಪರಿವಾರವು ಬಳಿಕ ಗ್ರಾಮ ಪಂಚಾಯಯಿತಿ ಉಪಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ಗೆಲುವು ಪಡೆಯುವ ಮೂಲಕ ತನ್ನ ಅಸ್ತಿತ್ವವನ್ನು ತೋರಿಸಿ ಕೊಟ್ಟಿತ್ತು. ಇದೀಗ ಸಹಕಾರಿ ಕ್ಷೇತ್ರಕ್ಕೂ ಕಾಲಿಟ್ಟಿದೆ.ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ನಾಲ್ವರು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಶ್ವನಾಥ ಬಲ್ಯಾಯ ಮತ್ತು ನವೀನ್.ಡಿ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವಪ್ಪ ಪಜಿರೋಡಿ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಂದ್ರ ಅವರು ಗೆಲುವು ದಾಖಲಿಸಿದ್ದಾರೆ. ಸಹಕಾರ ಭಾರತಿಗೆ ೬ ಸ್ಥಾನ ಹಾಗೂ ಕಾಂಗ್ರೆಸ್ ೨ ಸ್ಥಾನವನ್ನು ಪಡೆದುಕೊಂಡಿದೆ.