ಕನ್ನಡಪ್ರಭ ವಾರ್ತೆ ಅರಸೀಕೆರೆ
ದೇವರ ದಾಸಿಮಯ್ಯ ಸಹಕಾರ ಸಂಘದ ವತಿಯಿಂದ ನಗರದ ಪಿಪಿ ವೃತ್ತದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ವೈಭವವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ದೇವಾಂಗ ಸಮಾಜದ ನೂರಾರು ಮಂದಿ ಹಾಗೂ ವಿವಿಧ ಸಮಾಜದ ಮುಖಂಡರು ಭಾಗವಹಿಸಿ, ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ವೈದ್ಯ ಡಾ. ಶಿವಕುಮಾರ್ ಮಾತನಾಡಿ, ದೇವರ ದಾಸಿಮಯ್ಯ ಅವರ ಉಪದೇಶಗಳು ಸಮಾಜದಲ್ಲಿ ಸಮಾನತೆ, ಶ್ರಮದ ಗೌರವ ಹಾಗೂ ಮಾನವೀಯ ಮೌಲ್ಯಗಳ ಸ್ಥಾಪನೆಗೆ ದಾರಿದೀಪವಾಗಿವೆ ಎಂದು ಹೇಳಿದರು. ದೇವಾಂಗ ಸಮಾಜವು ಸಂಖ್ಯೆಯಲ್ಲಿ ಸಣ್ಣದಾಗಿದ್ದರೂ, ಇತರ ಸಮಾಜಗಳೊಂದಿಗೆ ಸದಾ ಸೌಹಾರ್ದತೆಯಿಂದ ನಡೆದುಕೊಂಡು ಬಂದಿರುವುದು ಅದರ ದೊಡ್ಡ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟರು.ದೇವರ ದಾಸಿಮಯ್ಯರು ತಮ್ಮ ಜೀವನದ ಮೂಲಕ “ಕಾಯಕವೇ ಕೈಲಾಸ” ಎಂಬ ಸಂದೇಶವನ್ನು ಸಾರಿದ್ದು, ದುಡಿಮೆ ಮತ್ತು ಪ್ರಾಮಾಣಿಕತೆಯೇ ಮನುಷ್ಯನನ್ನು ಉನ್ನತಿಗೆ ತರುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ. ದೇವಾಂಗ ಸಮಾಜವು ತಮ್ಮ ಪರಂಪರಾಗತ ವೃತ್ತಿಯ ಜೊತೆಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕಾಗಿದೆ. ಸಮಾಜದ ಯುವಕರು ಹೆಚ್ಚು ಸಂಘಟಿತರಾಗಿ, ಪರಸ್ಪರ ಸಹಕಾರದಿಂದ ಮುಂದುವರಿದರೆ ಮಾತ್ರ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ಸಮಾಜದ ಅಭಿವೃದ್ಧಿಗೆ ಏಕತೆ ಅತ್ಯಗತ್ಯವಾಗಿದ್ದು, ದೇವರ ದಾಸಿಮಯ್ಯರ ತತ್ವಗಳನ್ನು ಅನುಸರಿಸುವ ಮೂಲಕ ಒಗ್ಗಟ್ಟಿನ ಜೀವನ ನಡೆಸಿದರೆ ಸಮಾಜದ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದರು. ಖ್ಯಾತ ವಕೀಲ ವಿವೇಕ್, ದೇವರ ದಾಸಿಮಯ್ಯ ಹಾಗೂ ಬಸವಾದಿ ಶರಣರ ವಚನಗಳಲ್ಲಿ ಅಡಕವಾಗಿರುವ ಸಂದೇಶಗಳು ಮನುಕುಲಕ್ಕೆ ದಾರಿದೀಪವಾಗಿವೆ, ವಚನಗಳನ್ನು ಕೇವಲ ಕೇಳುವುದರಿಂದ ಮಾತ್ರ ಪ್ರಯೋಜನವಿಲ್ಲ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆ ಹಾಗೂ ಸೌಹಾರ್ದತೆ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು. ತಾಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಆರ್. ಅನಂತಕುಮಾರ್ ಮಾತನಾಡಿ, ನೇಕಾರರ ಜೀವನ ಇತ್ತೀಚಿನ ದಿನಗಳಲ್ಲಿ ಸಂಕಷ್ಟಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಅವರ ಹಿತಾಸಕ್ತಿಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಉಪತಾಸಿಲ್ದಾರ್ ಶಿವಶಂಕರ್, ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಗಿರಿಯಪ್ಪ, ದೇವರ ದಾಸಿಮಯ್ಯ ಸಹಕಾರ ಸಂಘದ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಕೋಳಗುಂದ ಸ್ವಭಾವ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿ. ನವೀನ್ ಕುಮಾರ್ ಸೇರಿದಂತೆ ಹಲವರು ಮಾತನಾಡಿದರು. ಸಮಾಜದ ಮುಖಂಡರಾದ ತಮ್ಮಯ್ಯ ಶೆಟ್ಟಿ, ಮಹೇಂದ್ರ ಕುಮಾರ್, ರೈಲ್ವೆ ರಂಗಣ್ಣ, ಯಳವಾರೆ ರಂಗನಾಥ್, ಕುರುವಂಕ ಸಂತೋಷ್, ಶೇಖರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಅರಸೀಕೆರೆಯಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ
ದೇವರ ದಾಸಿಮಯ್ಯರು ತಮ್ಮ ಜೀವನದ ಮೂಲಕ “ಕಾಯಕವೇ ಕೈಲಾಸ” ಎಂಬ ಸಂದೇಶವನ್ನು ಸಾರಿದ್ದು, ದುಡಿಮೆ ಮತ್ತು ಪ್ರಾಮಾಣಿಕತೆಯೇ ಮನುಷ್ಯನನ್ನು ಉನ್ನತಿಗೆ ತರುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ. ದೇವಾಂಗ ಸಮಾಜವು ತಮ್ಮ ಪರಂಪರಾಗತ ವೃತ್ತಿಯ ಜೊತೆಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕಾಗಿದೆ. ಸಮಾಜದ ಯುವಕರು ಹೆಚ್ಚು ಸಂಘಟಿತರಾಗಿ, ಪರಸ್ಪರ ಸಹಕಾರದಿಂದ ಮುಂದುವರಿದರೆ ಮಾತ್ರ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.